ರಾಜ್ಯದಲ್ಲಿ ಕೊರೋನಾ ವೈರಸ್ ಕೇಕೆ, ಟಿ20 ವಿಶ್ವಕಪ್ ಮುಂದೂಡಿಕೆ; ಮೇ.23ರ ಟಾಪ್ 10 ಸುದ್ದಿ!

By Suvarna News  |  First Published May 23, 2020, 4:40 PM IST

ಕರ್ನಾಟಕದಲ್ಲಿ ಕೊರೋನಾ ವೈರಸ್ ಸಂಖ್ಯೆ ಆತಂಕ ತರುತ್ತಿದೆ. ಇಂದು ಒಂದೇ ದಿನ 196 ಕೊರೋನಾ ಪಾಸಿಟೀವ್ ಕೇಸ್ ಪತ್ತೆಯಾಗಿದೆ. ಭಾನುವಾರ ಸಂಪೂರ್ಣ ಲಾಕ್‌ಡೌನ್‌ ಜಾರಿಗೆ ಪೊಲೀಸ್ ಇಲಾಖೆ ಸಂಪೂರ್ಣ ತಯಾರಿ ಮಾಡಿಕೊಂಡಿದೆ. ಲಾಕ್‌ಡೌನ್ ನಡುವೆ ಅಮೆಜಾನ್ 50 ಸಾವಿರ ಉದ್ಯೋಗ ನೇಮಕಕ್ಕೆ ಮುಂದಾಗಿದೆ. ಟಿ20 ವಿಶ್ವಕಪ್ ಟೂರ್ನಿ ಮುಂದೂಡಿಕೆ, ಅಪಘಾತದ ಬಳಿಕ ನಾಪತ್ತೆಯಾಗಿದ್ದ ನಟಿ ಶರ್ಮಿಳಾ ಮಾಂಡ್ರೆ ಪತ್ತೆ ಸೇರಿದಂತೆ ಮೇ.23ರ ಟಾಪ್ 10 ಸುದ್ದಿ ಇಲ್ಲಿವೆ.


1200 ಕಿ.ಮಿ ಸೈಕಲ್‌ ತುಳಿದ ಬಾಲಕಿ ಹೊಗಳಿದ ಇವಾಂಕ!...

Tap to resize

Latest Videos

ಅಸಹಾಯಕ ತಂದೆಯನ್ನು ಸೈಕಲ್‌ನಲ್ಲಿ ಕೂರಿಸಿಕೊಂಡು 1200 ಕಿಲೋ ಮೀಟರ್ ಕ್ರಮಿಸಿದ ಬಾಲಕಿಯನ್ನು ಅಮೆರಿಕ ಅಧ್ಯಕ್ಷನ ಪುತ್ರಿ ಇವಾಂಕ ಟ್ರಂಪ್‌ ಹಾಡಿ ಹೊಗಳಿದ್ದಾರೆ. ಇದರ ಬೆನ್ನಲ್ಲೇ ಇವಾಂಕ ಇಷ್ಟೊಂದು ಸಂವೇದನೆ ಕಳೆದುಕೊಳ್ಳಬಾರದಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ವಿಟರಿಗರು ಬಿಸಿ ಮುಟ್ಟಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ತೈವಾನ್ ಅಧ್ಯಕ್ಷರ ಪ್ರಮಾಣ ವಚನದಲ್ಲಿ ಬಿಜೆಪಿ ಎಂಪಿ ಭಾಗಿ, ಚೀನಾಗೆ ಮತ್ತೊಂದು ಹೊಡೆತ ನೀಡಿದ ಮೋದಿ!

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಅಮೆರಿಕ ಸೇರಿದಂತೆ ಬಹುತೇಕ ರಾಷ್ಟ್ರಗಳು ಚೀನಾ ವಿರುದ್ಧ ಬಹಿರಂಗ ಸಮರಸಾರಿದೆ. ವೈರಸ್‌ಗೆ ಚೀನಾ ಕಾರಣ ಎಂದು ನೇರವಾಗಿ ಆರೋಪಿಸಿದೆ. ಇತ್ತ ಭಾರತ ಸೈಲೆಂಟ್ ಆಗಿ ಚೀನಾ ಒಂದರ ಮೇಲೊಂದರಂತೆ ಹೊಡೆತ ನೀಡುತ್ತಿದೆ. ಇದೀಗ ಮೋದಿ ನೀಡಿರುವ ಹೊಡೆತಕ್ಕೆ ಚೀನಾ ಬುಡವೇ ಅಲುಗಾಡಿದೆ.

ಒಂದು ದಿನದ ಕರ್ಫ್ಯೂ: ಭಾನುವಾರ ಸಂಪೂರ್ಣ ಲಾಕ್‌ಡೌನ್‌

ನಾಳೆ(ಭಾನುವಾರ) ಒಂದು ದಿನದ ಮಟ್ಟಿಗೆ ರಾಜ್ಯಾದ್ಯಂತ ಸಂಪೂರ್ಣ ಲಾಕ್‌ಡೌನ್‌ ಜಾರಿಯಲ್ಲಿರುತ್ತದೆ. ಇಂದು(ಶನಿವಾರ) ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 7 ಗಂಟೆಯವರಿಗೆ ಲಾಕ್‌ಡೌನ್‌ ಜಾರಿಯಲ್ಲಿರುತ್ತದೆ. 

ಕೊರೋನಾಗೆ ಔಷಧಿ ಕಂಡು ಹಿಡಿಯಲು ಕನಿಷ್ಠ 10 ವರ್ಷಗಳಾದ್ರೂ ಬೇಕು'..

ಜಗತ್ತಿನಾದ್ಯಂತ ಅತ್ಯಂತ ತುರ್ತಾಗಿ ಬೇಕಾಗಿರುವ ಕೊರೋನಾ ವೈರಸ್‌ ತಡೆಯುವ ಔಷಧಿಯೊಂದನ್ನು ಕಂಡು ಹಿಡಿಯುವಲ್ಲಿ ಕೆನಡ ದೇಶದಲ್ಲಿರುವ ಕನ್ನಡಿಗರೊಬ್ಬರ ಸಂಶೋಧನೆ ಭರವಸೆ ಮೂಡಿಸಿದೆ.

ಬಹುನಿರೀಕ್ಷಿತ 2020ರ ಟಿ20 ವಿಶ್ವ​ಕಪ್‌ ಮುಂದ​ಕ್ಕೆ?

ಬಹುನಿರೀಕ್ಷಿತ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಐಸಿಸಿ ಟಿ20 ವಿಶ್ವಕಪ್ ಮುಂದೂಡುವುದು ಖಚಿತ ಎನಿಸಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಮಾತ್ರ ಬಾಕಿ ಉಳಿದಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ. 

ಅಮೆರಿಕದಲ್ಲಿ ಬೈಯ್ಯೋ ಪೋರ್ನ್ ಈಗ ಸಖತ್ ಟ್ರೆಂಡಿಂಗ್, ಏನಿದು?...

ಅಮೆರಿಕದಲ್ಲಿ ಈಗ ಸ್ಪೈಟ್‌ ಪೋರ್ನ್ ಅಥವಾ ಬೈಗುಳ ಪೋರ್ನ್‌ನ ಟ್ರೆಂಡ್‌. ಮಾಜಿ ಪ್ರಿಯಕರ ಅಥವಾ ಮಾಜಿ ಗೆಳತಿಗೆ ಕರೆ ಮಾಡಿ ಅಶ್ಲೀಲವಾಗಿ ಬೈಯುವುದು ಇದರ ಸ್ವರೂಪ.

ಕಾರು ಅಪಘಾತದ ನಂತರ ಇದೀಗ ಪ್ರತ್ಯಕ್ಷರಾದ ನಟಿ ಶರ್ಮಿಳಾ ಮಾಂಡ್ರೆ!

ಕಠಿಣ ಲಾಕ್‌ಡೌನ್‌ ನಡುವೆಯೂ ಕಾರು ಚಲಾಯಿಸಿ, ಬೆಳಗಿನ ಜಾವ ರಸ್ತೆ ಆಪಘಾತಕ್ಕೀಡಾದ ನಟಿ ಶರ್ಮಿಳಾ ಮಾಂಡ್ರೆ ಸ್ಥಳದಿಂದ ಎಸ್ಕೇಪ್‌ ಆಗಿದ್ದರು ಎನ್ನಲಾಗಿತ್ತು ಆದರೀಗ ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.....

196 ಕೇಸು ಒಂದೇ ದಿನ ಕರ್ನಾಟಕ ಕಂಗಾಲು, ಯಾವ ಜಿಲ್ಲೆಯ ಪಾಲು ಎಷ್ಟು?

ಕೊರೋನಾ ಕೇಸುಗಳು ದಾಖಲಾಗುವ ಲೆಕ್ಕಕ್ಕೆ ಕರ್ನಾಟಕ ಕಂಗಾಲಾಗಿದೆ. ಬೆಳಗ್ಗಿನ ಹೆಲ್ತ್ ಬುಲೆಟಿನ್ ನಲ್ಲಿ ಬರೋಬ್ಬರಿ 196 ಕೇಸು ದಾಖಲಾಗಿದೆ.

ಆತಂಕದಲ್ಲಿದ್ದ ಮಂದಿಗೆ ಅಮೇಜಾನ್‌ ಆಫರ್; 50ಸಾವಿರ ಉದ್ಯೋಗವಕಾಶ!

ಕೊರೋನಾ ವೈರಸ್ ವಕ್ಕರಿಸಿದ ಮೇಲೆ ಮೂಲೆ ಮೂಲೆಯಿಂದ ಉದ್ಯೋಗ ಕಡಿತ, ವೇತನ ಕಡಿತದ ವಿಚಾರಗಳು ಜನರ ನೆಮ್ಮದಿ ಕೆಡಿಸಿತ್ತು. ಆತಂಕದಲ್ಲಿದ್ದ ಭಾರತೀಯರಿಗೆ ಇದೀಗ ಅಮೇಜಾನ್ ಉದ್ಯೋಗವಕಾಶ ನೀಡುತ್ತಿದೆ. ಬರೋಬ್ಬರಿ 50,000 ಉದ್ಯೋಗಿಗಳನ್ನು ಅಮೇಜಾನ್ ನೇಮಕ ಮಾಡಲು ಮುಂದಾಗಿದೆ.

ಅಲ್ಲಿ ರಾಹುಲ್ ಗಾಂಧಿ, ಇಲ್ಲಿ ಅಖಾಡಕ್ಕಿಳಿದ ಡಿಕೆ ಶಿವಕುಮಾರ್...!

ವಲಸೆ ಕಾರ್ಮಿಕರ ವಿಚಾರದಲ್ಲಿ ಕಾಂಗ್ರೆಸ್, ಸರ್ಕಾರಗಳನ್ನು ಎಚ್ಚರಿಸುವ ಕೆಲಸಗಳನ್ನು ಮಾಡುತ್ತಿದೆ. ಅತ್ತ ರಾಹುಲ್ ಗಾಂಧಿ ವಲಸೆ ಕಾರ್ಮಿಕರನ್ನು ಖುದ್ದು ಭೇಟಿ ಮಾಡಿ ಕುಂದುಕೊರತೆಗಳನ್ನು ಆಲಿಸಿದ್ದು, ಇತ್ತ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಡಿಕೆ ಶಿವಕುಮಾರ್ ಅವರು ಫುಲ್ ಆಕ್ಟಿವ್ ಆಗಿದ್ದು, ಅಖಾಡಕ್ಕಿಳಿದಿದ್ದಾರೆ. ಇದೀಗ ಕೊರೋನಾ ಲಾಕ್‌ಡೌನ್‌ನಲ್ಲೂ ಬಿಜೆಪಿ ನೇತೃತ್ವದ ಸರ್ಕಾರವನ್ನು ಡಿಕೆಶಿ ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ.

click me!