'ಇದು ಭಾರತ': ಮುಸ್ಲಿಮರಿಗೆ ಇಫ್ತಾರ್ ನೀಡಿದ ದೇವಾಲಯದ ಬಗ್ಗೆ ಟ್ವಿಟರ್‌ನಲ್ಲಿ ಮೆಚ್ಚುಗೆ

By Suvarna News  |  First Published May 23, 2020, 3:20 PM IST

ಭಾರತದಲ್ಲಿ ಭಾವೈಕ್ಯತೆಯನ್ನು ಎತ್ತಿ ಹಿಡಿಯುವಂತೆ ಶ್ರೀ ಮಾತಾ ವೈಷ್ಣೋ ದೇವಾಯಲಯ ಕ್ವಾರೆಂಟೈನ್‌ನಲ್ಲಿರುವ 500 ಮುಸ್ಲಿಮರಿಗೆ ಇಫ್ತಾರ್ ಏರ್ಪಡಿಸಿದೆ. ಇಲ್ಲಿನ ಚಿತ್ರ ಹಾಗೂ ವಿಡಿಯೋ ಶೇರ್ ಮಾಡಿದ ನೆಟ್ಟಿಗರು ಇದು ನಮ್ಮ ಭಾರತ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ


ಶ್ರೀನಗರ(ಮೇ 23): ಭಾರತದಲ್ಲಿ ಭಾವೈಕ್ಯತೆಯನ್ನು ಎತ್ತಿ ಹಿಡಿಯುವಂತೆ ಶ್ರೀ ಮಾತಾ ವೈಷ್ಣೋ ದೇವಾಯಲಯ ಕ್ವಾರೆಂಟೈನ್‌ನಲ್ಲಿರುವ 500 ಮುಸ್ಲಿಮರಿಗೆ ಇಫ್ತಾರ್ ಏರ್ಪಡಿಸಿದೆ. ಇಲ್ಲಿನ ಚಿತ್ರ ಹಾಗೂ ವಿಡಿಯೋ ಶೇರ್ ಮಾಡಿದ ನೆಟ್ಟಿಗರು ಇದು ನಮ್ಮ ಭಾರತ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊರೋನಾ ವೈರಸ್‌ ಹೆಚ್ಚಾದ ಸಂದರ್ಭ ಮಾರ್ಚ್‌ನಲ್ಲಿ ದೇವಾಲಯ ಅಲ್ಲಿನ ಆಶಿರ್ವಾದ ಭವನವನ್ನು ಕ್ವಾರೆಂಟೈನ್‌ ವ್ಯವಸ್ಥೆಗೆ ನೀಡಿತ್ತು. ಈ ರಂಜಾನ್‌ ಸಂದರ್ಭ ಕ್ವಾರೆಂಟೈನ್‌ನಲ್ಲಿರುವ ಮುಸ್ಲಿಮರಿಗೆ ಬೆಳಗಿನ ಮತ್ತು ಸಂಜೆಯ ಉಪಹಾರ ಒದಗಿಸಲು ದೇವಾಲಯದ ಮಂಡಳಿ ಮಧ್ಯ ರಾತ್ರಿಯೂ ಆಹಾರ ತಯಾರಿಸುವ ಕಲಸದಲ್ಲಿ ತಲ್ಲೀನವಾಗಿದೆ ಎಂದು ದೇವಾಲಯದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಮೇಶ್ ಕುಮಾರ್ ಹೇಳಿದ್ದಾರೆ.

Tap to resize

Latest Videos

ಕರಾಚಿ ವಿಮಾನ ದುರಂತ ನೋಡಿ ನಕ್ಕ ಭಾರತೀಯರನ್ನು ಸ್ಯಾಡಿಸ್ಟ್ ಎಂದ ಪಾಕ್ ನೆಟ್ಟಿಗರು

ಆಶಿರ್ವಾದ ಭವನದಲ್ಲಿ ಕ್ವಾರೆಂಟೈನ್‌ಗೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ 500 ಜನರಿಗೆ ಕ್ವಾರೆಂಟೈನ್ ವ್ಯವಸ್ಥೆ ಒದಗಿಸಲಾಗಿದೆ. ಈಗ ರಂಜಾನ್ ಮಾಸವಾಗಿರುವುದರಿಂದ ಜಮ್ಮು ಕಾಶ್ಮೀರ ಹೊರ ಭಾಗದಲ್ಲಿರುವ ಜನರನ್ನು ಕರೆತರುವ ಕೆಲಸ ಮಾಡುತ್ತಿದೆ.

ಈ ಸಂದರ್ಭ ದೇವಾಲಯದಲ್ಲಿ 500 ಜನಕ್ಕೆ ಕ್ವಾರೆಂಟೈನ್ ವ್ಯವಸ್ಥೆ ಮಾಡಿದ್ದೇವೆ ಎಂದಿದ್ದಾರೆ. ಕ್ವಾರೆಂಟೈನ್ ಆಗಿರುವವರಲ್ಲಿ ಬಹುತೇಕ ಜನ ಕಾರ್ಮಿಕರಾಗಿದ್ದು, ಅವರು ರಂಜಾನ್ ಉಪವಾಸವಿರುತ್ತಾರೆ. ಹಾಗಾಗಿ ಆಹಾರ ತಯಾರಿಸಿ ಒದಗಿಸಲಾಗುತ್ತಿದೆ ಎಂದಿದ್ದಾರೆ.

click me!