ಮಂತ್ರಿಗಿರಿಗೆ ಸಚಿವರ ಹೆಸರು ಅನೌನ್ಸ್, ಸೂಪರ್ ಓವರ್‌ನಲ್ಲಿ ಗೆದ್ದ ಕೊಹ್ಲಿ ಬಾಯ್ಸ್; ಜ.29ರ ಟಾಪ್ 10 ಸುದ್ದಿ!

By Suvarna News  |  First Published Jan 29, 2020, 5:24 PM IST

ನ್ಯೂಜಿಲೆಂಡ್ ವಿರುದ್ಧದದ 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸೂಪರ್ ಓವರ್‌ನ ಅಂತಿಮ 2 ಎಸೆತದಲ್ಲಿ ಸತತ ಸಿಕ್ಸರ್ ಸಿಡಿಸಿ ಪಂದ್ಯದ ಜೊತೆಗೆ ಸರಣಿ ಗೆದ್ದುಕೊಂಡಿದೆ. ಇತ್ತ ಸಿಎಂ ಯಡಿಯೂರಪ್ಪ ಸಂಭಾವ್ಯ ಸಚಿವರ ಹೆಸರು ಘೋಷಿಸೋ ಮೂಲಕ, ಡಿಸಿಎಂ ಆಕಾಂಕ್ಷಿಗಳಿಗೆ ಶಾಕ್ ನೀಡಿದ್ದಾರೆ. ಮೈತ್ರಿಗೆ ಸಜ್ಜಾದ ಕಾಂಗ್ರೆಸ್-ಬಿಜೆಪಿ, ಯಶ್ ಕೆಜಿಎಫ್ 2 ಸಿನಿಮಾಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಸಿಹಿ ಸುದ್ದಿ ಸೇರಿದಂತೆ ಜನವರಿ 29ರ ಟಾಪ್ 10 ಸುದ್ದಿ ಇಲ್ಲಿವೆ.


ಸಂಪುಟ ವಿಸ್ತರಣೆ: ಕೆಲ ಸಂಭಾವ್ಯ ಸಚಿವರ ಹೆಸರು ಘೋಷಿಸಿದ ಯಡಿಯೂರಪ್ಪ

Tap to resize

Latest Videos

undefined

ತೀವ್ರ ಕುತೂಹಲ ಮೂಡಿಸಿದ ರಾಜ್ಯ ಸಂಪುಟ ವಿಸ್ತರಣೆಗೆ ಕೊನೆಗೂ ಕಾಲ ಕೂಡಿಬಂದಂತಿದ್ದು, ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ನೂತನ ಸಚಿವರಾಗುವ ಕೆಲವು ಶಾಸಕರುಗಳ ಹೆಸರುಗಳನ್ನು ಘೋಷಿಸಿದ್ದಾರೆ. 

ಓಡಿ ಹೋಗಿದ್ದ ವರನ ತಂದೆ, ವಧು ತಾಯಿ ವಾಪಸ್: ತಿರಸ್ಕಾರದ ವೆಲ್‌ಕಮ್!

ಗುಜರಾತ್ ನಲ್ಲಿ ತಮ್ಮ ಮಕ್ಕಳ ಮದುವೆಗೂ ಮುನ್ನ ವರನ ಅಪ್ಪ ಹಾಗೂ ವಧುವಿನ ಅಮ್ಮ ಮರಳಿ ಬಂದಿದ್ದಾರೆ. ಈ ಮಾಹಿತಿಯನ್ನು ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇವರು ನಾಪತ್ತೆಯಾದ 16 ದಿನಗಳ ಬಳಿಕ ಪ್ರತ್ಯಕ್ಷರಾಗಿದ್ದಾರೆ.

ರಾಜಕೀಯದ ಬದ್ಧ ವೈರಿ, ಇತಿಹಾಸದಲ್ಲಿ ಮೊದಲ ಬಾರಿ ಕಾಂಗ್ರೆಸ್‌ ಬಿಜೆಪಿ ಮೈತ್ರಿ!

ರಾಜಕೀಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನದ್ದು ಹಾವು- ಮುಂಗುಸಿ ಸಂಬಂಧ. ಸೈದ್ಧಾಂತಿಕವಾಗಿ ಎರಡೂ ಪಕ್ಷಗಳದ್ದು ವಿಭಿನ್ನ ಹಾದಿ. ತೆಲಂಗಾಣದ ಮಣಿಕೊಂಡ ಮುನ್ಸಿಪಲ್‌ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿವೆ.

ಮೂಕ ಯುವಕನ ಹಸ್ತಾಂತರ ವಿಫಲ: ಭಜರಂಗಿ ಭಾಯಿಜಾನ್‌ ನಿರಾಸೆಯಿಂದ ವಾಪಾಸ್‌!

ಸಲ್ಮಾನ್‌ ಖಾನ್‌ ಅಭಿನಯದ ಭಜರಂಗಿ ಭಾಯಿಜಾನ್‌ ಚಿತ್ರದ ರೀತಿಯಲ್ಲೇ, ಬಾಂಗ್ಲಾದೇಶದ ವ್ಯಕ್ತಿಯೊಬ್ಬ ತಾನು 14 ವರ್ಷದ ಹಿಂದೆ ಅಂತಾರಾಷ್ಟ್ರೀಯ ಗಡಿಯಲ್ಲಿ ರಕ್ಷಿಸಿದ್ದ ಮಾತು ಬಾರದ ಯುವಕನೊಬ್ಬನನ್ನು ಆತನ ಕುಟುಂಬಕ್ಕೆ ಹಸ್ತಾಂತರಿಸಲು ಭಾರತಕ್ಕೆ ಬಂದು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಹುಡುಕಾಡಿದ ನೈಜ ಘಟನೆಯಂದು ಜರುಗಿದೆ.

ಟೀಂ ಇಂಡಿಯಾಗೆ ಹಿಟ್‌ಮ್ಯಾನ್ ಗಿಫ್ಟ್ : ಸೂಪರ್‌ ಓವರ್‌ನಲ್ಲಿ ಗೆದ್ದ ಟೀಂ ಇಂಡಿಯಾ...

ಸೂಪರ್ ಓವರ್‌ನಲ್ಲಿ ರೋಹಿತ್ ಶರ್ಮಾ ಬಾರಿಸಿದ ಸತತ 2 ಸಿಕ್ಸರ್ ನೆರವಿನಿಂದ ಟೀಂ ಇಂಡಿಯಾ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ 3-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ.


ಅಂದುಕೊಂಡಿದ್ದಕ್ಕಿಂತ ಮೊದಲೇ ಬರ್ತಿದೆ ಯಶ್ ಕೆಜಿಎಫ್ 2!

ಕೆಜಿಎಫ್ 1 ಸಿನಿಮಾ ಬಂದು ಒಂದು ವರ್ಷವಾಗುತ್ತಾ ಬಂದಿದೆ.  ಇನ್ನೂ ಕೆಜಿಎಫ್ 2 ಬರಲಿಲ್ಲವಲ್ಲಾ ಎಂದು ಅಭಿಮಾನಿಗಳು ಸಿನಿಮಾ ಅಪ್​ಡೇಟ್​ಗಾಗಿ ಕಾದು ಕುಳಿತಿದ್ದಾರೆ. ಸದ್ಯದ ಲೇಟೆಸ್ಟ್ ನ್ಯೂಸ್ ಪ್ರಕಾರ ಮತ್ತೆ ಎರಡು ವರ್ಷ ಕಾಯಿಸೋದಿಲ್ಲವಂತೆ ಚಿತ್ರತಂಡ. ವರ್ಷಾಂತ್ಯಕ್ಕೂ  ಮೊದಲೇ ಸಿನಿಮಾ ತೋರಿಸುತ್ತಾರಂತೆ  ನಿರ್ದೇಶಕ ಪ್ರಶಾಂತ್ ನೀಲ್. ಕೆಜಿಎಫ್ 2 ತಂಡದಿಂದ ಎಕ್ಸ್‌ಕ್ಲೂಸಿವ್ ವಿಚಾರವೊಂದು ಹೊರಬಿದ್ದಿದೆ. 

ಟಾಟಾ ಕಾಲಿಗೆ ಬಿದ್ದ ಮೂರ್ತಿ: ಇದು ಭಾರತದ ಸಂಸ್ಕೃತಿ!

ರತನ್ ಟಾಟಾ ಹೆಸರು ಯಾರಿಗೆ ತಿಳಿದಿಲ್ಲ? ಉದ್ಯಮ ವಲಯದಲ್ಲಿ ಹೆಸರು ಗಳಿಸಿದ ದಿಗ್ಗಜರಲ್ಲಿ ಟಾಟಾ ಕೂಡಾ ಒಬ್ಬರು. ಹೀಗಿರುವಾಗ ಟಾಟಾ ಹಾಗೂ ನಾರಾಯಣ ಮೂರ್ತಿಯವರ ಕೆಲವೇ ಗಂಟೆಗಳ ಹಿಂದೆ ಕ್ಯಾಮೆರಾದಲ್ಲಿ ಸೆರೆಯಾದ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭಾರತೀಯ ಮೌಲ್ಯಗಳನ್ನು ಪಾಲಿಸಿದ ಉದ್ಯಮಿಯ ಸರಳತೆಗೆ ಎಲ್ಲರೂ ತಲೆ ಬಾಗಿದ್ದಾರೆ.

ಮ್ಯಾನ್ VS ವೈಲ್ಡ್: ತಲೈವಾ ಹುಮ್ಮಸ್ಸಿಗೆ ಬಿಯರ್ ಗ್ರಿಲ್ಸ್ ಬೋಲ್ಡ್!

ಡಿಸ್ಕವರಿ ಚಾನಲ್’ನ ಜನಪ್ರಿಯ ಕಾರ್ಯಕ್ರಮ ‘ಮ್ಯಾನ್ ವರ್ಸಸ್ ವೈಲ್ಡ್’ನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಕಾಣಿಸಿಕೊಂಡಿದ್ದಾರೆ. ಬಿಯರ್ ಗ್ರಿಲ್ಸ್ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಕಳೆದ ಬಾರಿ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಂಡಿದ್ದರು. ಈ ಬಾರಿ ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ ರಜನಿಕಾಂತ್ ಅವರೊಂದಿಗೆ ಗ್ರಿಲ್ಸ್ ಕಾಡಿನ ಕಠಿಣ ಪಯಣಕ್ಕೆ ಸಜ್ಜಾಗಿದ್ದಾರೆ. ತಲೈವಾ ಅವರ ಹುಮ್ಮಸ್ಸು ಹಾಗೂ ಪ್ರಕೃತಿ ಕುರಿತ ಅವರ ಜ್ಞಾನವನ್ನು ಕಂಡು ಬಿಯರ್ ಗ್ರಿಲ್ಸ್ ಬೆರಗಾಗಿದ್ದಾರೆ.


ಲ್ಯಾಂಬೋರ್ಗಿನಿ ಹುರಾಕ್ಯಾನ್ Evo RWD ಬಿಡುಗಡೆ, ಬೆಂಗ್ಳೂರಲ್ಲಿ ಸಿಗಲಿದೆ ಕಾರು!

ಇತ್ತೀಚೆಗಷ್ಟೇ ಲ್ಯಾಂಬೋರ್ಗಿನಿ ದಕ್ಷಿಣ ಭಾರತದ ಮೊದಲ ಶೋ ರೂಂನ್ನು ಬೆಂಗಳೂರಲ್ಲಿ ಆರಂಭಿಸಿತ್ತು. ಕಾರಣ ವಿಶ್ವದಲ್ಲಿ ಗರಿಷ್ಠ ಲ್ಯಾಂಬೋರ್ಗಿನಿ ಕಾರು ಮಾರಾಟವಾಗುತ್ತಿರುವುದು ಬೆಂಗಳೂರಲ್ಲಿ. ಇದೀಗ ಲ್ಯಾಂಬೋರ್ಗಿನಿ ಭಾರತದಲ್ಲಿ ಹುರಾಕ್ಯಾನ್ Evo RWD ಕಾರು ಬಿಡುಗಡೆ ಮಾಡಿದೆ. 

4ನೇ ಉಪಮುಖ್ಯಮಂತ್ರಿಗೆ ಸಾಕ್ಷಿಯಾಗುತ್ತಾ ಕರ್ನಾಟಕ.?

ಈಗಾಗಲೇ ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಹೈಕಮಾಂಡ್ ಸೃಷ್ಟಿ ಮಾಡಿದ್ದು, ಬಿಎಸ್‌ವೈಗೆ ಕಣ್ಣು ಕೆಂಪಾಗಿಸಿದೆ. ಇದೀಗ ಮತ್ತೊಂದು ಡಿಸಿಎಂ ಹುದ್ದೆ ಸೃಷ್ಟಿಯಾಗುತ್ತಾ? ಅಥವಾ ಇಲ್ಲ ಎನ್ನುವುದು ಹೈಮಾಂಡ್‌ಗೆ ಬಿಟ್ಟಿದ್ದು.

click me!