ಆರಕ್ಕೇರದ ಮೂರಕ್ಕಿಳಿಯದ ಬಜೆಟ್, ಭಾರತ ವನಿತೆಯರಿಗೆ ಫೈನಲ್ ಟಿಕೆಟ್; ಮಾ.05ರ ಟಾಪ್ 10 ಸುದ್ದಿ!

By Suvarna News  |  First Published Mar 5, 2020, 4:40 PM IST

ನೆರೆ ಹಾಗೂ ಪ್ರವಾಹ, ಕೇಂದ್ರದಿಂದ ಜಿಎಸ್‌ಟಿ ಕಟ್, ತೆರಿಗೆ ಹಣ ಕಟ್ ಸೇರಿದಂತೆ ರಾಜ್ಯಬೊಕ್ಕಸ ಖಾಲಿಯಾಗಿರುವ ಪರಿಸ್ಥಿತಿಯಲ್ಲಿ ಸಿಎಂ ಯಡಿಯೂರಪ್ಪ ಆರಕ್ಕೇರದ ಮೂರಕ್ಕಿಳಿಯದ ಬಜೆಟ್ ಮಂಡಿಸಿದ್ದಾರೆ. ಕಾನೂನಿನ ಮೂಲಕ ಗಲ್ಲು ಶಿಕ್ಷೆಯನ್ನು ಮುಂದೂಡುತ್ತಿದ್ದ ನಿರ್ಭಯಾ ಹತ್ಯಾಚಾರಿಗಳಿಗೆ ಕೊನೆಗೂ ಗಲ್ಲು ಫಿಕ್ಸ್ ಆಗಿದೆ. ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಫೈನಲ್ ಪ್ರವೇಶಿಸಿದೆ, ಕಿಚ್ಚ ಸುದೀಪ್‌ಗೆ ನಾಯಕಿ ಫೈನಲ್, ಕರ್ನಾಟಕ ಬಂದ್ ಎಚ್ಚರಿಕೆ ಸೇರಿದಂತೆ ಮಾರ್ಚ್ 5ರ ಟಾಾಪ್ 10 ಸುದ್ದಿ ಇಲ್ಲಿವೆ.


ಕರ್ನಾಟಕ ಬಜೆಟ್ 2020: ಯಾವುದು ಏರಿಕೆ? ಯಾವುದು ಇಳಿಕೆ?

Tap to resize

Latest Videos

ಸಿಎಂ ಬಿಎಸ್ ಯಡಿಯೂರಪ್ಪ ಅವರು ಇಂದು (ಗುರುವಾರ) ಒಟ್ಟು 2,37,893 ಕೋಟಿ ರೂ. ಗಾತ್ರದ ರಾಜ್ಯ ಬಜೆಟ್ ಮಂಡಿಸಿದರು. ಬಜೆಟ್‌ನಿಂದ ಯಾವುದು ಏರಿಕೆ? ಯಾವುದು ಇಳಿಕೆಯಾಗಿದೆ ಎನ್ನುವ ಸಂಪೂರ್ಣ ಮಾಹಿತಿ ಈ ಸ್ಟೋರಿಯಲ್ಲಿದೆ.

ಕರ್ನಾಟಕ ಬಜೆಟ್ 2020 : ಪ್ರತೀ ಇಲಾಖೆಗೆ ಸಿಕ್ಕ ಅನುದಾನದ ಸಂಪೂರ್ಣ ಮಾಹಿತಿ

1 ಗಂಟೆ 40 ನಿಮಿಷದಲ್ಲಿ ರಾಜ್ಯದ ಆಯವ್ಯಯ ಮಂಡಿಸುವ ಮೂಲಕ ಯಡಿಯೂರಪ್ಪ ಅವರು ಇತಿಹಾಸದಲ್ಲಿ ಅತಿ ಕಡಿಮೆ ಅವಧಿಗೆ ಬಜೆಟ್ ಓದಿದ ಸಿಎಂ ಎನ್ನುವ ದಾಖಲೆ ಬರೆದಿದ್ದಾರೆ. ಪ್ರತಿ ಇಲಾಖೆಗೆ ನೀಡಿದ ಅನುದಾನದ ಸಂಪೂರ್ಣ ವಿವರಕ್ಕಾಗಿ ಈ ವರದಿ ಓದಿ.

ನಿರ್ಭಯಾ ದೋಷಿಗಳ ಆಟ ಅಂತ್ಯ, ಗಲ್ಲಿನಿಂದ ತಪ್ಪಿಸ್ಕೊಳ್ಳೋದು ಅಸಾಧ್ಯ!

 ಕಾನೂನನ್ನೇ ದಾಳವಾಗಿಟ್ಟುಕೊಂಡು ಆಟವಾಡುತ್ತಿದ್ದ ನಿರ್ಭಯಾ ದೋಷಿಗಳ ಆಟಕ್ಕೆ ಬ್ರೇಕ್ ಬಿದ್ದಿದ್ದು, ನಾಲ್ಕನೇ ಬಾರಿ ಡೆತ್ ವಾರಂಟ್ ಜಾರಿಯಾಗಿದೆ. ದೋಷಿಗಳ ಎದುರಿದ್ದ ಎಲ್ಲಾ ಕಾನೂನಾತ್ಮಕ ಹಾದಿಗಳು ಕೊನೆಗೊಂಡಿದ್ದು, ಇನ್ನು ಗಲ್ಲಿನಿಂದ ಪಾರಾಗುವುದು ಅಸಾಧ್ಯವಾಗಿದೆ.

ಆಪರೇಷನ್‌ ಹೈಡ್ರಾಮಾ! ಕಾಂಗ್ರೆಸ್‌ಗೆ ಕೈಕೊಟ್ಟು ಹಾರಿದ 8 ಶಾಸಕರು

ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಕಳೆದ ವರ್ಷ ಕರ್ನಾಟಕದಲ್ಲಿ ಕಂಡುಬಂದಿದ್ದಂತಹ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಿಗೆ ಈಗ ಕಾಂಗ್ರೆಸ್‌ ಆಳ್ವಿಕೆಯ ಮಧ್ಯಪ್ರದೇಶವೂ ಸಾಕ್ಷಿಯಾಗುತ್ತಿದೆ. ಮುಖ್ಯಮಂತ್ರಿ ಕಮಲನಾಥ್‌ ಸರ್ಕಾರದ 8 ಮಂದಿ ಶಾಸಕರು ರಾತ್ರೋರಾತ್ರಿ ಸಂಪರ್ಕ ಕಡಿದುಕೊಂಡು ಹರಾರ‍ಯಣಕ್ಕೆ ತೆರಳಿದ್ದಾರೆ.

ಮಹಿಳಾ ಟಿ–20 ವಿಶ್ವಕಪ್‌ ಕ್ರಿಕೆಟ್‌: ಸೆಮೀಸ್ ಆಡದೇ ಭಾರತ ವನಿತೆಯರು ಫೈನಲ್‌ಗೆ ಲಗ್ಗೆ

ಭಲೇ ಅದೃಷ್ಟವೋ ಅದೃಷ್ಟ. ಕಾಲ ಕೂಡಿ ಬಂದರೆ ಅದೃಷ್ಟ ಹುಡುಕಿಕೊಂಡು ಬರುತ್ತದೆ ಎಂಬುದಕ್ಕೆ ಭಾರತ ಕ್ರಿಕೆಟ್ ವನಿತರ ಟೀಮ್ ಸಾಕ್ಷಿಯಾಗಿದೆ. ಸೆಮಿ ಫೈನಲ್ ಆಡದೇ ಭಾರತ ವನಿತೆಯರ ಕ್ರಿಕೆಟ್ ಟೀಮ್ ಟಿ-20 ವಿಶ್ವಕಪ್ ಫೈನಲ್ ಪ್ರವೇಶಿಸಿದೆ.

ಸಪ್ತಪದಿ ತುಳಿದ ಶ್ರೀರಾಮುಲು ಪುತ್ರಿ: ಇಲ್ಲಿದೆ ಅದ್ದೂರಿ ವಿವಾಹ ಸಮಾರಂಭದ ಝಲಕ್

ರೋಗ್ಯ ಸಚಿವ ಶ್ರೀರಾಮುಲು ಪುತ್ರಿ  ರಕ್ಷಿತಾ, ಹೈದರಾಬಾದ್ ಮೂಲದ ಸಂಜೀವ್ ರೆಡ್ಡಿ ಜೊತೆ  ಸಪ್ತಪದಿ ತುಳಿದಿದ್ದಾರೆ.  ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ರಕ್ಷಿತಾ ಮತ್ತು ಸಂಜೀವ್ ರೆಡ್ಡಿ ಅದ್ದೂರಿ ವಿವಾಹ ಸಮಾರಂಭದಲ್ಲಿ ಸಿಎಂ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿ ಶುಭ ಕೋರಿದರು. 

ವಿಕ್ರಾಂತ್‌ ರೋಣನಿಗೆ ಜೋಡಿಯಾದ 'ಅಲಮೇಲಮ್ಮ'?

ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ 'ಫ್ಯಾಂಟಮ್‌' ದಿನೇ ದಿನೇ ವಿಶೇಷ ಸಂಗತಿಗಳನ್ನು ರಿವೀಲ್‌ ಮಾಡುತ್ತಿದೆ. ಮೊದಲು ಕಿಚ್ಚನ ಲುಕ್‌, ಆನಂತರ ಕಿಚ್ಚ ಪಾತ್ರದ ಹೆಸರು. ಇದೀಗ ಕಿಚ್ಚನಿಗೆ ಜೋಡಿಯಾಗಿ ಕಾಣಿಸಿಕೊಳ್ಳುವ ಸುಂದರಿ.  

ಮತ್ತೊಮ್ಮೆ ಕರ್ನಾಟಕ ಬಂದ್ : ಎಚ್ಚರಿಕೆ ನೀಡಿದ ವಾಟಾಳ್ ನಾಗರಾಜ್

ರಾಜ್ಯದಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಂಯ್ಯ, ಜೆಡಿಎಸ್ ಮುಖಂಡ ಕುಮಾರಸ್ವಾಮಿ, ಸಿಎಂ ಯಡಿಯೂರಪ್ಪ ಯಾರೂ ಕನ್ನಡಿಗರಿಗೆ ಅನುಕೂಲವಾಗುವ ಯಾವುದೇ ಕೆಲಸ ಮಾಡಿಲ್ಲ ಎಂದು ವಾಟಾಳ್ ನಾಗರಾಜ್ ಹೇಳಿದರು. 

ಡಾರ್ಕ್‌ಮೋಡ್ ಫೀಚರ್‌ ಪರಿಚಯಿಸಿದ ವಾಟ್ಸಾಪ್‌!...

ಜನಪ್ರಿಯ ಸಂದೇಶ ವಿನಿಮಯ ಆ್ಯಪ್‌ ವಾಟ್ಸಾಪ್‌ ಬಹುನಿರೀಕ್ಷಿತ ಡಾರ್ಕ್ಮೋಡ್‌ ಅನ್ನು ಸಾರ್ವಜನಿಕರಿಗೆ ಪರಿಚಯಿಸಿದೆ. ಆ್ಯಂಡ್ರಾಯ್ಡ್‌ ಅಥವಾ ಐಫೋನ್‌ನಲ್ಲಿ ವಾಟ್ಸಾಪ್‌ ಅನ್ನು ಅಪ್‌ಡೇಟ್‌ ಮಾಡಿದರೆ ಹೊಸ ಫೀಚರ್‌ ಲಭ್ಯವಾಗಲಿದೆ. 

ಮೋದಿ ಪ್ರಸ್ತಾಪಿಸಿ ಬಿಎಸ್‌ವೈ ಬಜೆಟನ್ನು ಟೀಕಿಸಿದ ಎಚ್‌ಡಿಕೆ!

ಬಿ.ಎಸ್. ಯಡಿಯೂರಪ್ಪ ಮಂಡಿಸಿದ ಬಜೆಟ್‌ಗೆ ಸ್ಪಷ್ಟತೆಯೇ ಇಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು. ನರೇಂದ್ರ ಮೋದಿ ಮಾರ್ಗದಲ್ಲೇ ಹೋಗ್ತೀನಿ  ಅಂತಾ ಹೇಳ್ಕೊಂಡಿದ್ದಾರೆ, ಅರ್ಥಿಕವಾಗಿ ಮೋದಿ ದೇಶಕ್ಕೆ ಯಾವ ರೀತಿ ಕೊಡುಗೆ ಕೊಡ್ತಿದ್ದಾರೋ , ಅದೇ ರೀತಿಯಲ್ಲಿ ಹೋಗ್ತಿನಿ ಅಂದಿದ್ದಾರೆ, ಎಂದು ಎಚ್‌ಡಿಕೆ ವ್ಯಂಗ್ಯವಾಡಿದ್ದಾರೆ.

click me!