ನಿರ್ಭಯಾ ದೋಷಿಗಳ ಆಟ ಅಂತ್ಯ, ಗಲ್ಲಿನಿಂದ ತಪ್ಪಿಸ್ಕೊಳ್ಳೋದು ಅಸಾಧ್ಯ!
ನಿರ್ಭಯಾ ಅತ್ಯಾಚಾರಿಗಳ ಗಲ್ಲಿಗೆ ಡೇಟ್ ಫಿಕ್ಸ್| ಅಪರಾಧಿಗಳ ಆಟ ಕೊನೆಗೂ ಮುಕ್ತಾಯ| ಇನ್ನು 15 ದಿನದಲ್ಲಿ ನೇಣಿಗೇರುವುದು ಖಚಿತ
ನವದೆಹಲಿ[ಮಾ.05]: ಕಾನೂನನ್ನೇ ದಾಳವಾಗಿಟ್ಟುಕೊಂಡು ಆಟವಾಡುತ್ತಿದ್ದ ನಿರ್ಭಯಾ ದೋಷಿಗಳ ಆಟಕ್ಕೆ ಬ್ರೇಕ್ ಬಿದ್ದಿದ್ದು, ನಾಲ್ಕನೇ ಬಾರಿ ಡೆತ್ ವಾರಂಟ್ ಜಾರಿಯಾಗಿದೆ. ದೋಷಿಗಳ ಎದುರಿದ್ದ ಎಲ್ಲಾ ಕಾನೂನಾತ್ಮಕ ಹಾದಿಗಳು ಕೊನೆಗೊಂಡಿದ್ದು, ಇನ್ನು ಗಲ್ಲಿನಿಂದ ಪಾರಾಗುವುದು ಅಸಾಧ್ಯವಾಗಿದೆ.
"
ಹೌದು ಕಳೆದ 7 ವರ್ಷಗಳಿಂದ ಮಗಳನ್ಗನು ಅತ್ಯಾಚಾರಗೈದ ದೋಷಿಗಳನ್ನು ಗಲ್ಲಿಗೇರಿಸಿ ನ್ಯಾಯ ಕೊಡಿಸಿ ಎಂದು ಕಣ್ಣೀರಿಡುತ್ತಿರುವ ನಿರ್ಭಯಾ ತಾಯಿ ಮತ್ತೊಮ್ಮೆ ಅಪರಾಧಿಗಳಿಗೆ ಡೆತ್ ವಾರಂಟ್ ತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು 15 ದಿನಗಳ ಬಳಿಕ ಅಂದರೆ ಮಾರ್ಚ್ 20 ರಂದು ಬೆಳಗ್ಗೆ 05.30ಕ್ಕೆ ನಾಲ್ವರೂ ದೋಷಿಗಳು ತಿಹಾರ್ ಜೈಲಿನಲ್ಲಿ ನೇಣುಗಂಭಕ್ಕೇರಲಿದ್ದಾರೆ.
ಮುಂದಿನ ಹಾದಿ ಏನು?
- ಹೊಸದಾಗಿ ಡೆತ್‌ವಾರಂಟ್ ಜಾರಿ ಕೋರಿ ತಿಹಾರ್ ಜೈಲು ಅಧಿಕಾರಿಗಳಿಂದ ದಿಲ್ಲಿ ಕೋರ್ಟ್‌ಗೆ ಮನವಿ
- ಕೋರ್ಟ್ ಡೆತ್ ವಾರಂಟ್ ಹೊರಡಿಸಿದ ಬಳಿಕ, ಅಧಿಕಾರಿಗಳಿಂದ ಗಲ್ಲು ಶಿಕ್ಷೆ ಜಾರಿಗೆ ಅಂತಿಮ ಸಿದ್ಧತೆ
- ದೋಷಿಗಳ ಎಲ್ಲಾ ಕಾನೂನು ಅವಕಾಶ ಮುಗಿದ 14 ದಿನಗಳ ಬಳಿಕ ಅವರಿಗೆ ತಿಹಾರ್ ಜೈಲಲ್ಲಿ ಗಲ್ಲು ಜಾರಿ
ದೋಷಿಗಳ ಮುಂದಿನ ಕಾನೂನು ಹಾದಿ
- ವಿನಯ್‌ಕುಮಾರ್, ಅಕ್ಷಯ್ ಠಾಕೂರ್, ಮುಕೇಶ್ ಸಿಂಗ್ ಬಳಿ ಯಾವುದೇ ಕಾನೂನು ಅವಕಾಶ ಉಳಿದುಕೊಂಡಿಲ್ಲ
- ಪವನ್ ಗುಪ್ತಾ, ರಾಷ್ಟ್ರಪತಿಗಳ ನಿರ್ಧಾರ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ನ್ಯಾಯಾಂಗ ಪರಮರ್ಶೆ ಅರ್ಜಿ ಸಲ್ಲಿಸಬಹುದು
ಗಲ್ಲು ಪ್ರಕ್ರಿಯೆ ಹೇಗೆ ?
1. ಡೆತ್ ವಾರೆಂಟ್ ಹೊರಬಿದ್ದ 14 ದಿನಗಳಲ್ಲಿ ಅಪರಾಧಿಗಳು ನೇಣಿಗೆ
2. ಕಪ್ಪು ಬಣದ ಮುಚ್ಚಿದ ಲಕೋಟೆಯಲ್ಲಿ ಡೆತ್ ವಾರೆಂಟ್ ಹೊರಡಿಸಲಾಗಿತ್ತು
3. ಡೆತ್ ವಾರೆಂಟ್ ಅನ್ನು ಜೈಲು ಅಧಿಕಾರಿಗಳಿಗೆ ತಲುಪಿಸಲಿರುವ ಕೋರ್ಟ್ ಸಿಬ್ಬಂದಿ
4. ಗಲ್ಲು ಶಿಕ್ಷೆ ದಿನಾಂಕ ನಿಗದಿಪಡಿಸಿ ಕೋರ್ಟ್ಗೆ ತಿಳಿಸಿರುವ ಜೈಲು ಅಧಿಕಾರಿಗಳು
5. ಗಲ್ಲುಶಿಕ್ಷೆ ಬಗ್ಗೆ ಅಪರಾಧಿಗಳ ಕುಟುಂಬಸ್ಥರಿಗೆ ಮಾಹಿತಿ ನೀಡಬೇಕು
6. ಜೈಲಿನಲ್ಲೇ ಅಪರಾಧಿಗಳ ದೈನಂದಿನ ಆರೋಗ್ಯ ಪರೀಕ್ಷೆ
7. ಹ್ಯಾಂಗ್ಮನ್ಗಳಿಂದ ಗಲ್ಲಿಗೇರಿಸುವ ಪ್ರಕ್ರಿಯೆ ಪ್ರಾಕ್ಟೀಸ್
8. ಪ್ರತಿ ಅಪರಾಧಿಯ ತೂಕದ ಒಂದೂವರೆ ಪಟ್ಟು ಮರಳಿನ ಮೂಟೆ ಕಟ್ಟಿ ಪ್ರಾಕ್ಟಿಸ್
9. ವಿಶೇಷವಾಗಿ ತಯಾರಿಸಿದ ನೂಲಿನ ಹಗ್ಗವನ್ನೇ ಬಳಸಿ ಪ್ರಾಕ್ಟೀಸ್
10. ಹಗ್ಗಕ್ಕೆ ಬಾಳೆಹಣ್ಣು, ಬೆಣ್ಣೆ ಸವರಿ ನುಣುಪುಗೊಳಿಸಲಾಗುತ್ತದೆ
11. ಬೆಳಗಿನ ಜಾವ 5.30ಕ್ಕೆ ಗಂಟೆಗೆ ವೈದ್ಯರು, ಜೈಲು ಅಧಿಕಾರಿಗಳ ಸಮ್ಮುಖದಲ್ಲಿ ಅಪರಾಧಿಗಳು ನೇಣಿಗೆ
13. ದೇಹವನ್ನು 30 ನಿಮಿಷಗಳ ಬಳಿಕ ಕಂಬದಲ್ಲೇ ಇರಿಸಿದ ಬಳಿಕ ಮರಣ ಘೋಷಿಸುವ ವೈದ್ಯರು
14. ಬಳಿಕ ಅಪರಾಧಿಗಳ ಕುಟುಂಬಸ್ಥರಿಗೆ ಶವ ಹಸ್ತಾಂತರಿಸುವ ಪ್ರಕ್ರಿಯೆ
ಮಾರ್ಚ್ 4ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ