ಕೊರೋನಾ ಪೀಡಿತ ಕಾರ್ಮಿಕರಿಗೆ ವೇತನ ಸಹಿತ ರಜೆ, ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

By Ramesh BFirst Published Mar 5, 2020, 4:04 PM IST
Highlights

ಡೆಡ್ಲಿ ಕೊರೋನಾ ವೈರಸ್ ಕರ್ನಾಟಕ್ಕೂ ಕಾಲಿಟ್ಟಿದ್ದು, ಜನರು ಆತಂಕ ಸೃಷ್ಟಿಸಿದೆ. ರಾಜ್ಯದಲ್ಲಿ ಕೊರೊನಾ ಭೀತಿ ಹಿನ್ನೆಲೆ ಸರ್ಕಾರದಿಂದ ಕಾರ್ಮಿಕ ಇಲಾಖೆಗೆ ಮಹತ್ವದ ಸುತ್ತೋಲೆ ಹೊರಡಿಸಿದೆ.

ಬೆಂಗಳೂರು, (ಮಾ.05): ಚೀನಾದಲ್ಲಿ ಹುಟ್ಟಿಕೊಂಡಿರುವ ಕೊರೋನಾ ಮಹಾಮಾರಿ ಇದೀಗ ಇಡೀ ವಿಶ್ವವನ್ನೇ ವ್ಯಾಪಿಸುತ್ತಿದೆ. ಇದರಿಂದ ಆಯಾ ದೇಶಗಳಲ್ಲಿ ಮುಮಜಾಗ್ರತಾ ಕ್ರಮವಾಗಿ ನಾನಾ ಕ್ರಮಗಳನ್ನ ಕೈಗೊಳ್ಳಲಾಗಿದೆ.

ಇನ್ನು ದುಬೈಗೆ ತೆರಳಿದ್ದ ಟೆಕ್ಕಿಯೊಬ್ಬ ಬೆಂಗಳೂರಿ ಬಂದು ಹೋಗಿದ್ದರಿಂದ ರಾಜ್ಯದಲ್ಲೂ ಕೊರೋನಾ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಆರೋಗ್ಯ ಇಲಾಖೆ ಹೈಅಲರ್ಟ್ ಆಗಿದೆ. ಇದೀಗ ಕೊರೋನಾ ಪೀಡಿತ ಕಾರ್ಮಿಕರಿದ್ದರೆ 28 ದಿನ ರಜೆ ಕೊಡಬೇಕು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಬೆಂಗಳೂರು: ಟೆಕ್ಕಿಗೆ ಕೊರೊನಾ ವೈರಸ್, ಕಂಪನಿಗೆ ರಜೆ ಘೋಷಣೆ

ಸರ್ಕಾರದ ಉಪ ಕಾರ್ಯದರ್ಶಿ ಸಂಧ್ಯಾ ಎಲ್‌ ನಾಯಕ್  ಅವರು ಕೊರೋನಾ ಪೀಡಿತ ಕಾರ್ಮಿಕರಿದ್ದರೆ ವೇತನ ಸಹಿತ 28 ದಿನ ರಜೆ ಕೊಡಬೇಕು ಎಂದು ಕಾರ್ಮಿಕ ‌ಇಲಾಖೆಗೆ ಆದೇಶಿಸಿದೆ.

ಕೊರೋನಾ ಬಾಧಿತರು ವೈದ್ಯರಿಂದ ಪ್ರಮಾಣ ಪತ್ರ ಪಡೆದು ಸಲ್ಲಿಸಬೇಕು. ಕಾರ್ಮಿಕರಿಗೆ ಇಎಸ್ ಐ ವೈದ್ಯಾಧಿಕಾರಿಗಳು ತುರ್ತಾಗಿ ಪ್ರಮಾಣ ಪತ್ರ ನೀಡಬೇಕು. ಇಎಸ್ ಐ ಕಾಯ್ದೆ ಅನ್ವಯ ಆಗದ ಸಂಸ್ಥೆಗಳು ಕೂಡ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಲಂ 15 (3) ಅನ್ವಯ ರಜೆ ನೀಡಬೇಕು ಎಂದು ರಾಜ್ಯ ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

click me!