ಶತಮಾನ ಕಂಡ ಕನ್ನಡದ ಪತ್ರಿಕೆ

Published : Jul 02, 2018, 03:19 PM IST
ಶತಮಾನ ಕಂಡ ಕನ್ನಡದ  ಪತ್ರಿಕೆ

ಸಾರಾಂಶ

1902 ರ ಸಮಯ ಕುಮಟಾದ ಕೃಷ್ಣರಾವ್ ಕೇಶವ ಶೇಣ್ವಿ ಚಿಕ್ಕದಾದ ಪ್ರಿಂಟಿಂಗ್ ಪ್ರೆಸ್ ಆರಂಭಿಸಿದ್ದರು. ಇವರಿಗೆ ವಿಶ್ವನಾಥ ಪ್ರಭು ಎನ್ನುವವರು ಪತ್ರಿಕೆಯೊಂದನ್ನು ಆರಂಭಿಸುವಂತೆ ನೀಡಿದ ಸಲಹೆ ಮೇರೆಗೆ 1916  ರಲ್ಲಿ ಕಾನಡಾ ವೃತ್ತ (ದ ಕೆನರಾ ನ್ಯೂಸ್) ಆರಂಭವಾಯಿತು. ಇದಕ್ಕೆ ಈಗ ಶತಮಾನೋತ್ಸವದ ಸಂಭ್ರಮ. 

102 ನಾಟೌಟ್! ಕ್ರಿಕೆಟ್ ಅಲ್ಲ. ವಾರ ಪತ್ರಿಕೆಯೊಂದು ಸುದೀರ್ಘ 102 ವರ್ಷಗಳ ಕಾಲ ನಿರಂತರವಾಗಿ ನಡೆಯುತ್ತಿರುವ ಅಪರೂಪದ ಕತೆ. ಕುಟುಂಬವೊಂದು ತಲೆಮಾರು ಬದಲಾದರೂ ಪತ್ರಿಕೆಯನ್ನು ನಿಲ್ಲಿಸದೆ ಮುಂದುವರಿಸುತ್ತಿರುವ ಪಯಣ.

ಅದು 1902  ರ ಸಮಯ ಕುಮಟಾದ ಕೃಷ್ಣರಾವ್ ಕೇಶವ ಶೇಣ್ವಿ ಚಿಕ್ಕದಾದ ಪ್ರಿಂಟಿಂಗ್ ಪ್ರೆಸ್ ಆರಂಭಿಸಿದ್ದರು. ಇವರಿಗೆ ವಿಶ್ವನಾಥ ಪ್ರಭು ಎನ್ನುವವರು ಪತ್ರಿಕೆಯೊಂದನ್ನು ಆರಂಭಿಸುವಂತೆ ನೀಡಿದ ಸಲಹೆ ಮೇರೆಗೆ 1916 ರಲ್ಲಿ ಕಾನಡಾ ವೃತ್ತ (ದ ಕೆನರಾ ನ್ಯೂಸ್) ಆರಂಭವಾಯಿತು. ಪ್ರಿಂಟರ್, ಪಬ್ಲೀಷರ್ ಹಾಗೂ ಸಂಪಾದಕರು ಶೇಣ್ವಿ ಅವರೇ ಆಗಿದ್ದರು. ಅಂದು ಹುಟ್ಟಿಕೊಂಡ ಪತ್ರಿಕೆ ಇಂದಿಗೂ ಮುಂದುವರೆದು ಬಂದಿದೆ. ಮೊದಲಿಗೆ ಶೇಣ್ವಿ ಅವರೇ ಸಂಪಾದಕರು. ನಂತರ ಅವರ ಮಗ ಪಾಂಡುರಂಗ ಶಾನಭಾಗ 1924 ರಿಂದ 1988 ರ ತನಕ ಪತ್ರಿಕೆ ನಿರ್ವಹಿಸಿದ್ದರೆ, ಈಗ ಪಾಂಡುರಂಗ ಅವರ ಮಗ ಶ್ರೀಕಾಂತ ಶಾನಭಾಗ ಸಾರಥ್ಯ ವಹಿಸಿದ್ದಾರೆ.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರ ಜಿಲ್ಲೆಯ ರಾಷ್ಟ್ರೀಯ ಚಳವಳಿಯ ಇತಿಹಾಸದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಬ್ರಿಟಿಷ್ ಸರಕಾರದ ದಮನಕಾರಿ ನೀತಿಗೆ ಬಲಿಯಾಗಿ ದಂಡವನ್ನೂ ತೆತ್ತಿದೆ. 1931 ರಲ್ಲಿ ನಾಲ್ಕು ತಿಂಗಳು ಮತ್ತು 1933-34 ರಲ್ಲಿ 1 ವರ್ಷ 8 ತಿಂಗಳು ಪತ್ರಿಕೆಗಳನ್ನು ಸ್ಥಗಿತ ಮಾಡಿದ್ದರಿ ಬ್ರಿಟಿಷರು  ನಾರಾಯಣ ಚಂದಾವರಕರ, ಎಸ್.ಜಿ. ವರ್ಟಿ, ವಿ.ಎಂ. ದುಭಾಷಿ, ಎನ್.ಎನ್. ಕಾಮತ್ ಮತ್ತು ವಿ.ಪಿ. ಪ್ರಭು. ಅನಂ ತರದ ಬರೆಹಗಾರರಲ್ಲಿ ಎನ್.ಜೆ. ಶಾನಭಾಗ, ಹನುಮಂತ ರಾವ ಮಾಂಜರೇಕರ, ಕೇಶವ ಯು. ಭಟ್ಟ ಮತ್ತಿತರರು ತಮ್ಮ ಲೇಖನಗಳಿಂದ ಜಿಲ್ಲೆಯ ಜನರಲ್ಲಿ ಜಾಗೃತಿ ಹೆಚ್ಚಿಸಿದ್ದಾರೆ.

ಜಿಲ್ಲೆಯೊಂದರ ಜೀವನಾಡಿ ಇಂದಿಗೂ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಗೋವಾ, ಮಹಾರಾಷ್ಟ್ರ ಹೀಗೆ 7 ರಾಜ್ಯಗಳಲ್ಲಿ ಪತ್ರಿಕೆಯ ಪ್ರಸಾರ ಇದೆ. ಬೇರೆ ಬೇರೆ ರಾಜ್ಯಗಳಲ್ಲಿ ನೆಲೆಸಿರುವ ಉತ್ತರ ಕನ್ನಡ ಮೂಲದ ಮಂದಿಗೆ ತಮ್ಮ ಜಿಲ್ಲೆಯ ಸುದ್ದಿಯನ್ನು ತಲುಪಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಳ್ಳುತ್ತಾ ಬಂದಿದೆ.

1950 ರ ವೇಳೆಯಲ್ಲಿ ಏಳನೆ ತರಗತಿ ಫಲಿತಾಂಶವನ್ನು ಒದಗಿಸುತ್ತಿದ್ದ ಏಕೈಕ ಪತ್ರಿಕೆ ಇದಾಗಿತ್ತು. ಆ ವೇಳೆಗೆ ವಿದ್ಯಾರ್ಥಿಗಳು, ಪೋಷಕರು ಪ್ರತಿಗಾಗಿ ಮುಂಚಿತವಾಗಿ ಅಡ್ವಾನ್ಸ್ ನೀಡುತ್ತಿದ್ದರು. ದಶಕಗಳ ಕಾಲ ಒಂದು ಜಿಲ್ಲೆಯ ಸಮಗ್ರ ನೋಟವನ್ನು ತೆರೆದಿಟ್ಟ ಹೆಮ್ಮೆ ಈ ಪತ್ರಿಕೆಯದ್ದು. ದೇಶದ ಬೇರೆ ಬೇರೆ ಕಡೆಗಳಲ್ಲಿನ ವ್ಯಾಪಾರ, ವಹಿವಾಟುದಾರರಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾರುಕಟ್ಟೆ, ಇಲ್ಲಿನ ವಸ್ತುಗಳ ಬಗ್ಗೆ ಬೇರೆ ಜನರಿಗೆ ಮಾಹಿತಿ ನೀಡುವ ಏಕೈಕ ಸಾಧನವಾಗಿತ್ತು. ಕಾನಡಾ ವೃತ್ತ. ಅಂದಿನಿಂದಲೂ ಜಿಲ್ಲೆಯ ಜೀವನಾಡಿಯಾಗಿ, ಸುದ್ದಿ ನೀಡುತ್ತಲೇ ಬಂದಿದೆ ದ ಕೆನರಾ ನ್ಯೂಸ್. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?