ವಿಕಿಲೀಕ್ಸ್ ಅಸಾಂಜೆ ವಿರುದ್ಧ ಅತ್ಯಾಚಾರ ಕೇಸ್ ತನಿಖೆ ಕೈಬಿಟ್ಟ ಸ್ವೀಡನ್

By Suvarna Web DeskFirst Published May 20, 2017, 4:06 PM IST
Highlights

ಪ್ರಾಸಿಕ್ಯೂಟರ್‌ ನಿರ್ಧಾರದ ಬಳಿಕ ಪ್ರತಿಕ್ರಿಯಿಸಿರುವ ಅಸಾಂಜೆ, ಇದು ನನ್ನ ಪಾಲಿನ ಅತ್ಯಂತ ದೊಡ್ಡ ಜಯ ಎಂದಿದ್ದಾರೆ.

ಸ್ಟಾಕ್‌ಹೋಮ್‌(ಮೇ.20): ಅಮೆರಿಕ ಸೇರಿದಂತೆ ವಿಶ್ವದ ಇತರೆ ರಾಷ್ಟ್ರಗಳ ಸರ್ಕಾರದ ರಹಸ್ಯಗಳನ್ನು ಬಯಲು ಮಾಡಿದ್ದ ವಿಕಿಲೀಕ್ಸ್‌ ಸಂಸ್ಥಾಪಕ ಜೂಲಿಯನ್‌ ಅಸಾಂಜ್‌ ವಿರುದ್ಧದ ಅತ್ಯಾಚಾರ ಆರೋಪದ ತನಿಖೆಯನ್ನು ಸ್ವೀಡನ್‌'ನ ಪ್ರಾಸಿಕ್ಯೂಟರ್‌ಗಳು ಅಂತ್ಯಗೊಳಿಸಿದ್ದಾರೆ.

ಈ ಮೂಲಕ 7 ವರ್ಷಗಳ ಕಾಲ ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಅಸಾಂಜ್‌ ಇದೀಗ ನಿರಾಳರಾಗಿದ್ದಾರೆ.

ಅಸಾಂಜ್‌ ವಿರುದ್ಧದ ಅತ್ಯಾಚಾರ ಆರೋಪದ ತನಿಖೆ ಮುಂದುವರಿಕೆ ಅಥವಾ ಅಂತ್ಯಗೊಳಿಸಲು ಶುಕ್ರವಾರ ಕೊನೆಯ ದಿನವಾಗಿತ್ತು. ಈ ಹಿನ್ನೆಲೆಯಲ್ಲಿ ಪಬ್ಲಿಕ್‌ ಪ್ರಾಸಿಕ್ಯೂಷನ್‌ ನಿರ್ದೇಶಕಿ ಮಾರಿಯನ್‌ ಅವರು ಜೂಲಿಯನ್‌ ಅಸ್ಸಾಂಜ್‌ ವಿರುದ್ಧದ ತನಿಖೆ ಕೈ ಬಿಟ್ಟಿದ್ದಾರೆ ಎಂದು ಪ್ರಾಸಿಕ್ಯೂಟರ್‌ ಕಚೇರಿಯ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಾಸಿಕ್ಯೂಟರ್‌ ನಿರ್ಧಾರದ ಬಳಿಕ ಪ್ರತಿಕ್ರಿಯಿಸಿರುವ ಅಸಾಂಜೆ, ಇದು ನನ್ನ ಪಾಲಿನ ಅತ್ಯಂತ ದೊಡ್ಡ ಜಯ ಎಂದಿದ್ದಾರೆ.

click me!