12ರ ಶಾಲಾ ಬಾಲಕಿ ಮೇಲೆ ಮೂವರಿಂದ ಅತ್ಯಾಚಾರ..!

By Suvarna Web DeskFirst Published Jan 16, 2017, 12:32 PM IST
Highlights

ಈ ಬಗ್ಗೆ ಎಫ್‌'ಐಆರ್ ದಾಖಲಾಗಿದೆ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಪಿ ಕೆ ಶ್ರೀವಾಸ್ತವ ತಿಳಿಸಿದ್ದಾರೆ.

ಜೆಹಾನಾಬಾದ್(ಜ.16): ಸರ್ಕಾರಿ ಶಾಲೆಯ 12 ವರ್ಷದ ಬಾಲಕಿ ಮೇಲೆ ಶಾಲೆಯ ಮುಖ್ಯೋಪಾಧ್ಯಾಯ ಸೇರಿದಂತೆ ಮೂರು ಶಿಕ್ಷಕರು ಸಾಮೂಹಿಕ ಅತ್ಯಾಚಾರವೆಸಗಿದ ಹೀನ ಕೃತ್ಯ ಬಿಹಾರದ ಜೆಹಾನಾಬಾದ್‌'ನಲ್ಲಿ ನಡೆದಿದೆ.

ಕಕೊ ಸೆಕೆಂಡರಿ ಶಾಲೆಯ ಪ್ರಿನ್ಸಿಪಾಲ್ ಅಜು ಅಹಮ್ಮದ್ ಹಾಗೂ ಮೂರು ಶಿಕ್ಷಕರಾದ ಅತುಲ್ ರೆಹಮಾನ್, ಅಬ್ದುಲ್ ಬರಿ ಮತ್ತು ಮ. ಶಕ್ತಿಯಾತ್ ಸಾಮೂಹಿಕ ಅತ್ಯಾಚಾರಗೈದ ಆರೋಪಿಗಳು.

ಭಾನುವಾರ ಬಾಲಕಿ ಶಾಲಾ ಕಟ್ಟಡದಲ್ಲಿ ಒಬ್ಬಳೇ ಇರುವಾಗ ಆರೋಪಿಗಳು ಆಕೆಯನ್ನು ಶಾಲೆಯ ಛಾವಣಿ ಮೇಲೆ ಕರೆದೊಯ್ದು ಈ ಕೃತ್ಯವೆಸಗಿದ್ದಾರೆ, ಬಾಲಕಿಯನ್ನು ತಾಯಿ ಪತ್ತೆ ಮಾಡಿ ನಂತರ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಎಫ್‌'ಐಆರ್ ದಾಖಲಾಗಿದೆ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಪಿ ಕೆ ಶ್ರೀವಾಸ್ತವ ತಿಳಿಸಿದ್ದಾರೆ.

click me!