ಗೌರಿ ಹತ್ಯೆ: ‘ಆರೋಪಿಗಳ ಬಂಧನಕ್ಕಿಂತ ಹಿಂದೂ ನಾಯಕರ ಬಂಧನವೇ ಮುಖ್ಯ’

By Web DeskFirst Published Aug 31, 2018, 6:12 PM IST
Highlights
  • ಬಂಧನಗಳ ಹಿಂದೆ ರಾಜಕೀಯ ಕುಟೀಲ ನೀತಿ: ಮುತಾಲಿಕ್ ಆರೋಪ
  • ಈವರೆಗೆ 13 ಆರೋಪಿಗಳನ್ನು ಬಂಧಿಸಿರುವ ಎಸ್‌ಐಟಿ

ಮಂಗಳೂರು: ವಿಚಾರವಾದಿಗಳ ಹತ್ಯೆಯ ತನಿಖೆಗೆ ಸಂಬಂಧಿಸಿ ಶ್ರೀರಾಮ ಸೇನೆ ಮುಖ್ಯಸ್ಥ  ಪ್ರಮೋದ್ ಮುತಾಲಿಕ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಇಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುತಾಲಿಕ್, ವಿಚಾರವಾದಿಗಳ ಹತ್ಯೆಗೆ ಸಂಬಂಧಿಸಿ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ವಿನಾ ಕಾರಣ ಬಂಧಿಸಲಾಗುತ್ತಿದೆ, ಎಂದು ಕಿಡಿಕಾರಿದ್ದಾರೆ.

ಗೌರಿ ಹತ್ಯೆ ಕೇಸಿನಲ್ಲಿ ಆರೋಪಿಗಳ ಬಂಧನಕ್ಕಿಂತ ಜಾಸ್ತಿ ಹಿಂದೂ ನಾಯಕರ ಬಂಧನವೇ ಮುಖ್ಯವಾಗಿದೆ. ಇದರ ಹಿಂದೆ ರಾಜಕೀಯ ಕುಟಿಲ ನೀತಿ ಇದೆ ಎಂದು ಮುತಾಲಿಕ್ ಈ ಸಂದರ್ಭದಲ್ಲಿ ಆರೋಪಿಸಿದ್ದಾರೆ.

ಕಳೆದ ವರ್ಷ ನಡೆದ ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ, ತನಿಖೆ ನಡೆಸುತ್ತಿರುವ ಎಸ್ ಐಟಿಯು ಸುಮಾರು 13 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಕೆಲವರು ಶ್ರೀರಾಮ ಸೇನೆ ಸೇರಿದಂತೆ ಮತ್ತಿತರ ಹಿಂದುತ್ವ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದರೆನ್ನಲಾಗಿದೆ. 
 

click me!