ಮತ್ತೆ ಟ್ರಾಕ್ಟರ್ ರ‍್ಯಾಲಿಗೆ ಸಜ್ಜಾದ ರೈತರು, ಕ್ರಿಕೆಟ್ ಮೈದಾನಕ್ಕೆ ಮೋದಿ ಹೆಸರು; ಫೆ.24ರ ಟಾಪ್ 10 ಸುದ್ದಿ!

By Suvarna NewsFirst Published Feb 24, 2021, 5:17 PM IST
Highlights

ರೈತ ಸಂಘಟನೆಗಳು 40 ಲಕ್ಷ ಟ್ರ್ಯಾಕ್ಟರ್ ಮೂಲಕ ಸಂಸತ್ತಿಗೆ ಮುತ್ತಿಗೆ ಹಾಕುವುದಾಗಿ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ. ಮಾರ್ಚ್ 1 ರಿಂದ 2ನೇ ಹಂತದ ಲಸಿಕೆ ಉಚಿತವಾಗಿ ನಡೆಯಲಿದೆ. ವಿಶ್ವದ ಅತೀ ದೊಡ್ಡ ಕ್ರೀಡಾಂಗಣ ಮೊಟೆರಾಗೆ ಮೋದಿ ಹೆಸರಿಡಲಾಗಿದೆ. ಟಾಲಿವುಡ್‌ನಲ್ಲಿ ಮಂಚಿಲು ರೆಡಿಯಾದ ಉಪೇಂದ್ರ, ವಿಶ್ವದ ಅತ್ಯಂತ ದುಬಾರಿ ಬಿರಿಯಾನಿ ಸೇರಿದಂತೆ ಫೆಬ್ರವರಿ 24ರ ಟಾಪ್ 10 ಸುದ್ದಿ ಇಲ್ಲಿವೆ.

40 ಲಕ್ಷ ಟ್ರಾಕ್ಟರ್‌ನಿಂದ ಸಂಸತ್‌ ಮುತ್ತಿಗೆ, ಇಂಡಿಯಾ ಗೇಟ್‌ ಬಳಿ ಉಳುಮೆ: ಕೇಂದ್ರಕ್ಕೆ ವಾರ್ನಿಂಗ್!...

ರೈತ ಮುಖಂಡ ರಾಕೇಶ್ ಟಿಕಾಯತ್ ಈ ಬಾರಿ ತಾವು 40 ಲಕ್ಷ ಟ್ರ್ಯಾಕ್ಟರ್ ಮೂಲಕ ಸಂಸತ್ತಿಗೆ ಮುತ್ತಿಗೆ ಹಾಕುವುದಾಗಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ದಿಲ್ಲಿ ಮಾರ್ಚ್‌ಗೆ ಸಿದ್ಧರಾಗುವಂತೆ ರೈತರಿಗೆ ಸೂಚಿಸಿದ್ದಾರೆ. ರಾಜಸ್ಥಾನದ ಸೀಕರ್‌ನಲ್ಲಿ ನಡೆದ ಸಂಯುಕ್ತ ರೈತ ;ರೈತ ಮಹಾಪಂಚಾಯತ್‌ನಲ್ಲಿ ಅವರು ಇಂತಹುದ್ದೊಂದು ಕರೆ ನೀಡಿದ್ದಾರೆ.

ಮಾ.1 ರಿಂದ 2ನೇ ಹಂತದ ಲಸಿಕೆ ವಿತರಣೆ; 60 ವರ್ಷ ಮೇಲ್ಪಟ್ಟವರಿಗೆ ಉಚಿತ ವ್ಯಾಕ್ಸಿನ್!...

ಕೊರೋನಾ ವೈರಸ್ ವಿರುದ್ಧ  ಭಾರತ ಯಶಸ್ವಿಯಾಗಿ ಲಸಿಕೆ ವಿತರಣೆ ಮಾಡುತ್ತಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಮೀಸಲಿಡಲಾಗಿದೆ. ಇದೀಗ ಮಾರ್ಚ್ 1 ರಿಂದ 2ನೇ ಹಂತದ ಲಸಿಕೆ ವಿತರಣೆ ಆರಂಭಗೊಳ್ಳುತ್ತಿದೆ. 2ನೇ ಹಂತದಲ್ಲಿ ಯಾರಿಗೆಲ್ಲ ಲಸಿಕೆ ಸಿಗಲಿದೆ? ಖಾಸಗಿ ಕೇಂದ್ರದಲ್ಲಿ ಲಸಿಕೆ  ಕುರಿತು ಕೇಂದ್ರ ಸಚಿವ ಪ್ರಕಾಶ್ ಜಾವೇಡಕರ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಕೊರೋನಾ ಹೆಚ್ಚಳ: 5 ರಾಜ್ಯಗಳಲ್ಲಿ ಹೈ ಅಲರ್ಟ್, ಗಡಿಗಳಲ್ಲಿ ಟೆಸ್ಟ್ ಕಡ್ಡಾಯ...

ಕೊರೋನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ 5 ರಾಜ್ಯಗಳು ಕೊರೋನಾ ಸಂಬಂಧ ಹೊಸ ನಿರ್ಬಂಧಗಳನ್ನು ಹೇರಿದೆ. ಹಾಗೆಯೇ ವಿಮಾನ ನಿಲ್ದಾಣ ಮತ್ತು ಗಡಿ ಪ್ರದೇಶಗಳಲ್ಲಿ ಕೊರೋನಾ ಪರೀಕ್ಷೆ ಮಾಡುವುದನ್ನು ಕಡ್ಡಾಯ ಮಾಡಿದೆ.

ಒಂದು ಟ್ವೀಟ್‌ ಮಾಡಿ ‌8800 ಕೋಟಿ ರು. ಕಳೆದುಕೊಂಡ ಮಸ್ಕ್!...

ವಿಶ್ವದ ನಂ.1 ಶ್ರೀಮಂತ ಎಂಬ ಹಿರಿಮೆ ಹೊಂದಿದ್ದ ಅಮೆರಿಕದ ಟೆಸ್ಲಾ ಕಂಪನಿಯ ಮಾಲೀಕ ಎಲಾನ್‌ ಮಸ್ಕ್‌, ಸೋಮವಾರ ತಾವೇ ಮಾಡಿದ ಒಂದು ಟ್ವೀಟ್‌ನಿಂದ ಭರ್ಜರಿ 8800 ಕೋಟಿ ರು. ಕಳೆದುಕೊಂಡಿದ್ದಾರೆ. ಅಲ್ಲದೆ ವಿಶ್ವದ ನಂ.1 ಶ್ರೀಮಂತ ಎಂಬ ಪಟ್ಟವೂ ಅವರ ಕೈತಪ್ಪಿದೆ.

ವಿಶ್ವದ ಅತಿದೊಡ್ಡ ಕ್ರಿಕೆಟ್‌ ಮೈದಾನಕ್ಕೆ ನರೇಂದ್ರ ಮೋದಿ ಹೆಸರು ಮರುನಾಮಕರಣ...

ವಿಶ್ವದ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಎನಿಸಿಕೊಂಡಿರುವ ಮೊಟೇರಾ ಸ್ಟೇಡಿಯಂ ಇನ್ಮುಂದೆ ನರೇಂದ್ರ ಮೋದಿ ಸ್ಟೇಡಿಯಂ ಹೆಸರಿನೊಂದಿಗೆ ಗುರುತಿಸಿಕೊಳ್ಳಲಿದೆ. ರಾಷ್ಟ್ರಪತಿ ಕೋವಿಂದ್‌ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಉದ್ಭಾಟಿಸಿದ್ದಾರೆ. 

ಖ್ಯಾತ ಗಾಲ್ಫರ್‌ ಟೈಗರ್‌ ವುಡ್ಸ್‌ ಕಾರು ಭೀಕರ ಅಪಘಾತ..! ನೂರಾರು ಅಡಿ ಪ್ರಪಾತಕ್ಕೆ ಬಿದ್ದ ಕಾರು...

ಅಮೆರಿಕದ ಖ್ಯಾತ ವೃತ್ತಿಪರ ಗಾಲ್ಫರ್‌ ಟೈಗರ್ ವುಡ್ಸ್‌ ಕಾರು ಭೀಕರ ಅಪಘಾತಕ್ಕೆ ತುತ್ತಾಗಿದ್ದು, ಗಂಭೀರ ಗಾಯಗೊಂಡಿರುವ ವುಡ್ಸ್‌ರನ್ನು ಲಾಸ್‌ ಏಂಜಲೀಸ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಟಾಲಿವುಡ್‌ನಲ್ಲಿ ರಿಯಲ್ ಸ್ಟಾರ್: ಹೊಸ ಲುಕ್‌ನಲ್ಲಿ ಉಪ್ಪಿ...

ಉಪೇಂದ್ರ ಮತ್ತೆ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಪ್ಪಿ ಯಾವ ಸಿನಿಮಾದಲ್ಲಿ ಯಾವ ಪಾತ್ರ ಮಾಡ್ತಿದ್ದಾರೆ..? ಇಲ್ನೋಡಿ ವಿಡಿಯೋ

100 ರೂ ತರಕಾರಿ ಖರೀದಿಸಲು 75 ಲಕ್ಷ ರೂಪಾಯಿ ಬೈಕ್‌ನಲ್ಲಿ ಬಂದ ಮಾಲೀಕ!...

ತರಕಾರಿ, ಹಣ್ಣು ಸೇರಿದಂತೆ ಕಲ ವಸ್ತುಗಳನ್ನು ಖರೀದಿಸಲು ವಿಶ್ವದ ಅತ್ಯಂತ ದುಬಾರಿ ಬೈಕ್ ಹೊಂಡಾ ಗೋಲ್ಡ್ ವಿಂಗ್ ಸ್ಥಳೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳೋ ಮೂಲಕ ಭಾರಿ ಸದ್ದು ಮಾಡಿದೆ.  ಲೋಕಲ್ ಮಾರ್ಕೆಟ್‌ನಲ್ಲಿ ವಸ್ತುಗಳ ಖರೀದಿಗೆ 75 ಲಕ್ಷ ರೂಪಾಯಿ ಬೈಕ್ ಕಂಡ ಸ್ಥಳೀಯರಿಗೆ ಅಚ್ಚರಿಯಾಗಿದೆ.

ಡಾರ್ಕ್‌ ಸರ್ಕಲ್‌ ಹೋಗಿದೆ.. ಜೀನ್ಸ್..ಬ್ರಾ .. ಪ್ಯಾಕ್ ಮಾಡಿ ಇಟ್ಟಿದ್ದೇನೆ.. ಆಫೀಸ್‌ಗೆ  ಬರಲ್ಲ!...

ಕೊರೋನಾ  ಲಾಕ್ ಡೌನ್ ನಂತರ  ಬಹುಪಾಲು ಕಂಪನಿಗಳು ವರ್ಕ್ ಫ್ರಾಂ ಹೋಂ ಅಂದರೆ ಮನೆಯಿಂದಲೇ ಕೆಲಸದ ಮೊರೆ ಹೋಗಿವೆ. ಕೆಲಸ-ಕಾರ್ಯಗಳು ಸಸೂತ್ರವಾಗಿಯೇ ನಡೆದುಕೊಂಡು ಹೋಗುತ್ತಿದೆ. ಜನರು ಕೂಡ ಮನೆಯಲ್ಲೇ ಕುಳೀತು ಕೆಲಸ ಮಾಡುವುದಕ್ಕೆ ಒಗ್ಗಿ ಹೋಗಿದ್ದಾರೆ.

ದುಬೈನಲ್ಲಿ ಸಿಗುತ್ತೆ ವಿಶ್ವದ ದುಬಾರಿ ಬಿರಿಯಾನಿ, 23 ಕ್ಯಾರೆಟ್ ಚಿನ್ನದಿಂದ ಅಲಂಕಾರ!...

ಬಿರಿಯಾನಿ ಅಂದ್ರೆ ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಅದು ಹೇಗೇ ಇರಲಿ, ಜನರು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಸದ್ಯಕ್ಕೀಗ ಸೋಶಿಯಲ್ ಮೀಡಿಯಾದಲ್ಲಿ ಬಿರಿಯಾನಿಯೊಂದು ಭಾರೀ ಸದ್ದು ಮಾಡುತ್ತಿದೆ. ಇನ್ನು ಲಾಕ್‌ಡೌನ್ ಸಂದರ್ಭದಲ್ಲೂ ಅತಿ ಹೆಚ್ಚು ಆರ್ಡರ್‌ ಮಾಡಲಾದ ಆಹಾರದ ಪಟ್ಟಿಯಲ್ಲಿ ಬಿರಿಯಾನಿ ಮೊದಲ ಸ್ಥಾನ ಪಡೆದುಕೊಂಡಿದೆ. 

click me!