ಮಾ.1 ರಿಂದ 2ನೇ ಹಂತದ ಲಸಿಕೆ ವಿತರಣೆ; 60 ವರ್ಷ ಮೇಲ್ಪಟ್ಟವರಿಗೆ ಉಚಿತ ವ್ಯಾಕ್ಸಿನ್!

By Suvarna NewsFirst Published Feb 24, 2021, 4:18 PM IST
Highlights

ಕೊರೋನಾ ವೈರಸ್ ವಿರುದ್ಧ  ಭಾರತ ಯಶಸ್ವಿಯಾಗಿ ಲಸಿಕೆ ವಿತರಣೆ ಮಾಡುತ್ತಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಮೀಸಲಿಡಲಾಗಿದೆ. ಇದೀಗ ಮಾರ್ಚ್ 1 ರಿಂದ 2ನೇ ಹಂತದ ಲಸಿಕೆ ವಿತರಣೆ ಆರಂಭಗೊಳ್ಳುತ್ತಿದೆ. 2ನೇ ಹಂತದಲ್ಲಿ ಯಾರಿಗೆಲ್ಲ ಲಸಿಕೆ ಸಿಗಲಿದೆ? ಖಾಸಗಿ ಕೇಂದ್ರದಲ್ಲಿ ಲಸಿಕೆ  ಕುರಿತು ಕೇಂದ್ರ ಸಚಿವ ಪ್ರಕಾಶ್ ಜಾವೇಡಕರ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ನವದೆಹಲಿ(ಫೆ.24): ಕೊರೋನಾ ವೈರಸ್ ವಿರುದ್ದದ ಹೋರಾಟದಲ್ಲಿ ಭಾರತದ ಇತರ ಎಲ್ಲಾ ದೇಶಗಳಿಗಿಂತ ಮುಂಚೂಣಿಯಲ್ಲಿದೆ. ಜನವರಿ 16ರಿಂದ ಭಾರತದಲ್ಲಿ ಕೊರೋನಾ ಲಸಿಕೆ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೇಂದ್ರ ಸರ್ಕಾರ ಉಚಿತ ಲಸಿಕೆ ನೀಡುತ್ತಿದೆ. ಇದೀಗ ಮಾರ್ಚ್ 1 ರಿಂದ 2ನೇ ಹಂತದ ಲಸಿಕೆ ವಿತರಣೆ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವೇಡಕರ್ ಹೇಳಿದ್ದಾರೆ.

ಒಲಿಂಪಿಕ್ಸ್‌ ಸ್ಪರ್ಧಿಗಳಿಗೆ ಶೀಘ್ರದಲ್ಲೇ ಲಸಿಕೆ: ಕಿರಣ್‌ ರಿಜಿಜು

ಎರಡನೇ ಹಂತದ ಲಸಿಕೆ ವಿತರಣೆ 10,000 ಸರ್ಕಾರಿ ಕೇಂದ್ರ ಹಾಗೂ 20,000 ಖಾಸಗಿ ಕೇಂದ್ರಗಳಲ್ಲಿ ನಡೆಯಲಿದೆ. 45 ವರ್ಷಕ್ಕಿಂತ ಮೇಲ್ಪಟ್ಟ ಅನಾರೋಗ್ಯ ಪೀಡಿತರು, ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಮಂದಿಗೆ ಲಸಿಕೆ ನೀಡಲಾಗುತ್ತಿದೆ. ಇನ್ನು 60 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗುವುದು ಎಂದು ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

 

From March 1, people above 60 years of age and those above 45 years of age with comorbidities will be vaccinated at 10,000 govt & over 20,000 private vaccination centres. The vaccine will be given free of cost at govt centres: Union Minister Prakash Javadekar pic.twitter.com/Rxhkkk8eSC

— ANI (@ANI)

ಎರಡನೇ ಹಂತದ ವ್ಯಾಕ್ಸಿನೇಶನ್ ಕೂಡ ಸಂಪೂರ್ಣ ಉಚಿತ. ಲಸಿಕೆಯ ಎಲ್ಲಾ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ಜಾವೇಡಕರ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಆರೋಗ್ಯ ಕಾರ್ಯಕರ್ತರ ಬಳಿಕ ಹಿರಿಯ ನಾಗರೀಕರಿಕರಿಗೂ ಕೇಂದ್ರ ಉಚಿತ ಲಸಿಕೆ ನೀಡಲು ಮುಂದಾಗಿದೆ.

ಕೊರೋನಾ ಲಸಿಕೆ ವಿತರಣೆಯಲ್ಲಿ ದಾಖಲೆ ಬರೆದ ಭಾರತ; 1 ಕೋಟಿ ಮಂದಿಗೆ ವ್ಯಾಕ್ಸಿನ್!

ಕರ್ನಾಟಕದಲ್ಲಿ ಕೊರೋನಾ ಲಸಿಕೆ:
ಲಸಿಕೆ ವಿತರಣೆಯಲ್ಲಿ ಇತರ ರಾಜ್ಯಗಳಿಗಿಂತ ಕರ್ನಾಟಕ ಅಗ್ರಸ್ಥಾನದಲ್ಲಿದೆ. 1 ಲಕ್ಷ ಮಂದಿಗೆ 2ನೇ ಡೋಸ್ ನೀಡಿದ ಮೊದಲ ರಾಜ್ಯ  ಅನ್ನೋ ಹೆಗ್ಗಳಿಕೆಗೂ ಕರ್ನಾಟಕ ಪಾತ್ರವಾಗಿದೆ. ಫೆಬ್ರವರಿ 21ರ ಅಂಕಿ ಅಂಶದ ಪ್ರಕಾರ ಒಟ್ಟು 4.24 ಲಕ್ಷ ಮಂದಿಗೆ ಮೊದಲ ಕೊರೋನಾ ಲಸಿಕೆ ಡೋಸೇಜ್ ನೀಡಲಾಗಿದೆ.

ಮೋದಿ ರಾಜತಾಂತ್ರಿಕತೆಗೆ ಕೆರಿಬಿಯನ್‌ ದೇಶಗಳ ಶ್ಲಾಘನೆ

ಆರೋಗ್ಯ ಕಾರ್ಯಕರ್ತರು, ಫ್ರಂಟ್‌ಲೈನ್ ವಾರಿಯರ್ಸ್ ಸೇರಿದಂತೆ ಒಟ್ಟು 11 ಲಕ್ಷ ಮಂದಿ ಹೆಸರು ನೋಂದಾಯಿಸಿಕೊಂಡಿದ್ದರು.  ಬಿಬಿಎಂಪಿ ವ್ಯಾಪ್ತಿಯಲ್ಲಿ ಲಸಿಕೆ ಪಡೆದವರ ಸಂಖ್ಯೆ ಶೇಕಾಡ 50ಕ್ಕಿಂತ ಕಡಿಮೆಯಾಗಿದೆ. ಹೀಗಾಗಿ ರಾಜ್ಯದಲ್ಲಿ ಲಸಿಕೆ ವಿತರಣೆ ಚುರುಕುಗೊಳಿಸಲು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಸೂಚಿಸಿದ್ದಾರೆ.

ಬೆಂಗಳೂರು, ದಾವಣೆಗೆರೆ, ಧಾರವಾಡ ಜಿಲ್ಲೆಗಳಲ್ಲಿ ಕೊರೋನಾ ಲಸಿಕೆ ಪಡೆದವರ ಸಂಖ್ಯೆ ಶೇಕಡಾ 50ಕ್ಕಿಂತ ಕಡಿಮೆಯಾಗಿದೆ. ಗರಿಷ್ಠ ಲಸಿಕೆ ಪಡೆದವರಲ್ಲಿ ಉತ್ತರ ಕನ್ನಡ ಶೇಕಡಾ 73, ಚಿಕ್ಕಬಳ್ಳಾಪುರದಲ್ಲಿ ಶೇಕಡಾ 70, ಗದಗ, ಮಂಡ್ಯ, ತುಮಕೂರು, ಚಾಮರಾಜನಗರ ಹಾಗೂ ಚಿಕ್ಕಮಗಳೂರಿನಲ್ಲಿ ಶೇಕಡಾ 70 ರಷ್ಟು ಮಂದಿ ಕೊವಿಡ್ ಲಸಿಕೆ ಪಡೆದಿದ್ದಾರೆ. ಫೆಬ್ರವರಿ 20ರ ವೇಳೆಗೆ ಶೇಕಡಾ 80 ರಿಂದ 90ರಷ್ಟು ಗುರಿ ಇಟ್ಟುಕೊಳ್ಳಲಾಗಿತ್ತು. 

ದೇಶದಲ್ಲಿ ಇನ್ನೂ 18-19 ಲಸಿಕೆಗಳು ಬರಲಿವೆ: ಹರ್ಷವರ್ಧನ್‌!

ರಾಜ್ಯದಲ್ಲಿ ಲಸಿಕೆ ಪಡೆದವರ ಪೈಕಿ 20 ಮಂದಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಇದನ್ನು ಹೊರತು ಪಡಿಸಿದರೆ ಕರ್ನಾಟಕದಲ್ಲಿ ಲಸಿಕೆ ವಿತರಣೆ ಅತ್ಯಂತ ಯಶಸ್ವಿಯಾಗಿದೆ. ಸದ್ಯ ಕರ್ನಾಟಕದಲ್ಲಿ  6,062 ಸಕ್ರಿಯ ಕೊರೋನಾ ಪ್ರಕರಣಗಳಿವೆ.  ಇನ್ನು 5,940 ಮಂದಿ ಐಸೋಲೇಶನ್‌ನಲ್ಲಿದ್ದಾರೆ.  ಇದರಲ್ಲಿ 122 ಮಂದಿ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

click me!