40 ಲಕ್ಷ ಟ್ರಾಕ್ಟರ್‌ನಿಂದ ಸಂಸತ್‌ ಮುತ್ತಿಗೆ, ಇಂಡಿಯಾ ಗೇಟ್‌ ಬಳಿ ಉಳುಮೆ: ಕೇಂದ್ರಕ್ಕೆ ವಾರ್ನಿಂಗ್!

Published : Feb 24, 2021, 04:22 PM IST
40 ಲಕ್ಷ ಟ್ರಾಕ್ಟರ್‌ನಿಂದ ಸಂಸತ್‌ ಮುತ್ತಿಗೆ, ಇಂಡಿಯಾ ಗೇಟ್‌ ಬಳಿ ಉಳುಮೆ: ಕೇಂದ್ರಕ್ಕೆ ವಾರ್ನಿಂಗ್!

ಸಾರಾಂಶ

ಕೇಂದ್ರಕ್ಕೆ ವಾರ್ನಿಂಗ್ ಕೊಟ್ಟ ರೈತ ಮುಖಂಡ| ಕೇಂದ್ರ ಕೃಷಿ ಮಸೂದೆ ಹಿಂಪಡೆಯದಿದ್ದರೆ ಸಂಸತ್‌ಗೆ ಮುತ್ತಿಗೆ| ಇಂಡಿಯಾ ಗೇಢಟ್‌ ಬಳಿಯೇ ಉಳುಮೆ ಮಾಡುತ್ತೇವೆ ಎಂದ ಟಿಕಾಯತ್

ಜೈಪುರ(ಫೆ.24): ರೈತ ಮುಖಂಡ ರಾಕೇಶ್ ಟಿಕಾಯತ್ ಈ ಬಾರಿ ತಾವು 40 ಲಕ್ಷ ಟ್ರ್ಯಾಕ್ಟರ್ ಮೂಲಕ ಸಂಸತ್ತಿಗೆ ಮುತ್ತಿಗೆ ಹಾಕುವುದಾಗಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ದಿಲ್ಲಿ ಮಾರ್ಚ್‌ಗೆ ಸಿದ್ಧರಾಗುವಂತೆ ರೈತರಿಗೆ ಸೂಚಿಸಿದ್ದಾರೆ. ರಾಜಸ್ಥಾನದ ಸೀಕರ್‌ನಲ್ಲಿ ನಡೆದ ಸಂಯುಕ್ತ ರೈತ ;ರೈತ ಮಹಾಪಂಚಾಯತ್‌ನಲ್ಲಿ ಅವರು ಇಂತಹುದ್ದೊಂದು ಕರೆ ನೀಡಿದ್ದಾರೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ರಾಕೇಶ್ ಟಿಕಾಯತ್ ಕೇಂದ್ರ ಸರ್ಕಾರ ಕೃಷಿ ಕಾನೂನು ಹಿಂಪಡೆಯದಿದ್ದರೆ ಈ ಬಾರಿ ಸಂಸತ್ತಿಗೆ ಮುತ್ತಿಗೆ ಹಾಕುತ್ತೇವೆ. ಅಲ್ಲದೇ ನಾಲ್ಕು ಲಕ್ಷವಲ್ಲ ನಲ್ವತ್ತು ಲಕ್ಷ ಟ್ರ್ಯಾಕ್ಟರ್‌ಗಳು ಎಂಟ್ರಿ ನೀಡಲಿವೆ. ಯಾವಾಗ ಬೇಕಾದರೂ ಇಂತಹುದ್ದೊಂದು ಘೋಷಣೆಯಾಗಬಹುದು. ಹೀಗಾಗಿ ಸಿದ್ಧರಾಗಿರಿ ಎಂದು ಟಿಕಾಯತ್ ರೈತರಿಗೆ ಸೂಚಿಸಿದ್ದಾರೆ.

ಇಂಡಿಯಾ ಗೇಟ್‌ ಬಳಿ ಕೃಷಿ

ಇದೇ ವೇಳೆ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಟಿಕಾಯತ್ ರೈತರೂ ದೆಹಲಿಯಲ್ಲಿದ್ದಾರೆ, ಟ್ರ್ಯಾಕ್ಟಟರ್‌ಗಳೂ ಅಲ್ಲೇ ಇವೆ. ಹೀಗಾಗಿ ಇಮಡಿಯಾ ಗೇಟ್‌ ಆಸುಪಾಸಿನ ಪಾರ್ಕ್‌ಗಳಲ್ಲೇ ಉಳುಮೆ ಮಾಡಿ, ಬೆಳೆ ಕೂಡ ಬೆಳೆಯುತ್ತೇವೆ. ಸಂಸತ್‌ ಘೇರಾವ್‌ ಯಾವಾಗ ಎಂದು ಸಂಯುಕ್ತ ಮೋರ್ಚಾ ನಿರ್ಧರಿಸಲಿದೆ ಎಂದೂ ತಿಳಿಸಿದ್ದಾರೆ.

ಕಂಪನಿಗಳ ಗೋದಾಮುಗಳು ನಾಶವಾಗುತ್ತವೆ

ಇನ್ನು ಗಣರಾಜ್ಯೋವದಂದು ನಡೆದ ಘಟನೆ ಬಗ್ಗೆ ಉಲ್ಲೇಖಿಸಿದ ರೈತ ಮುಖಂಡ ಟಿಕಾಯತ್ 'ಜನವರಿ 26ರ ಘಟನೆಯಿಂದ ರೈತರ ಹೆಸರು ಕೆಡಿಸುವ ಷಡ್ಯಂತ್ರ ರೂಪಿಸಲಾಯ್ತು. ದೇಶದ ರೈತರಿಗೆ ತ್ರಿವರ್ಣ ಧ್ವಜದ ಮೇಲೆ ಗೌರವ ಪ್ರೀತಿ ಇದೆ. ಆದರೆ ಈ ದೇಶದ ರಾಜಕೀಯ ನಾಯಕರಿಗಿಲ್ಲ. ಒಂದು ವೇಳೆ ಕೇಂದ್ರ ತಾನು ಜಾರಿಗೊಳಿಸಿದ ಕೃಷಿ ಕಾನೂನು ಹಿಂಪಡೆಯದಿದ್ದರೆ, ರೈತರು ಕಂಪನಿಗಳ ಗೋದಾಮುಗಳು ನಾಶ ಮಾಡುತ್ತಾರೆ' ಎಂದೂ ಎಚ್ಚರಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ