ಕರ್ನಾಟಕದಲ್ಲಿ 19ಕ್ಕೇರಿದ ಕೊರೋನಾ, ಕನ್ನಡ ನಟಿಯ ಮದ್ವೆ ನಿಜಾನಾ? ಮಾ.21ರ ಟಾಪ್ 10 ಸುದ್ದಿ!

Suvarna News   | Asianet News
Published : Mar 21, 2020, 05:24 PM IST
ಕರ್ನಾಟಕದಲ್ಲಿ 19ಕ್ಕೇರಿದ ಕೊರೋನಾ, ಕನ್ನಡ ನಟಿಯ ಮದ್ವೆ ನಿಜಾನಾ? ಮಾ.21ರ ಟಾಪ್ 10 ಸುದ್ದಿ!

ಸಾರಾಂಶ

ಕರ್ನಾಟಕದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಒಂದೇ ದಿನ 4 ಜನರಲ್ಲಿ ಕೊರೋನಾ ವೈರಸ್ ದೃಢಪಟ್ಟಿದೆ. ಇದೀಗ ಒಟ್ಟು ಸಂಖ್ಯೆ 19ಕ್ಕೇರಿದೆ. ಇದರ ಜೊತೆಗ ಕೊರೋನಾ ಸೋಂಕಿತ ವ್ಯಕ್ತಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಪ್ರಧಾನಿ ಮೋದಿ ಜನತಾ ಕರ್ಫ್ಯೂನಿಂದ ಭಾನುವಾರ ಇಡೀ ದೇಶ ಸಂಪೂರ್ಣ ಬಂದ್ ಆಗಲಿದೆ. ಕನ್ನಡದ ನಟಿಯೊಬ್ಬರು ಕದ್ದು ಮುಚ್ಚಿ ಮದುವೆಯಾಗಿದ್ದಾರೆ. ಆದರೆ ಫೋಟೋ ವೈರಲ್ ಆಗಿದೆ. ಬಿಗ್‌ಬಾಸ್ ಸ್ಪರ್ಧಿಯ ಫೋಟೋ, ನಂಬರ್ ಪೋರ್ನ್ ಸೈಟ್‌ನಲ್ಲಿ ವೈರಲ್ ಸೇರಿದಂತೆ ಮಾರ್ಚ್ 21ರ ಟಾಪ್ 10 ಸುದ್ದಿ ಇಲ್ಲಿವೆ.  

ಶನಿವಾರ ಒಂದೇ ದಿನ 4 ಕೊರೋನಾ ಪತ್ತೆ: ಕರುನಾಡಲ್ಲಿ 19ಕ್ಕೆ ಏರಿಕೆ

ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಮಾಹಾಮಾರಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಇಂದು (ಶನಿವಾರ) ಒಂದೇ ದಿನ ನಾಲ್ವರಿಗೆ ಕೊರೋನಾ ವೈರಸ್ ಇರುವುದು ಪತ್ತೆಯಾಗಿದೆ.

ಕೊರೋನಾ ಅಟ್ಟಹಾಸ: ದಿನಗೂಲಿ ಕಾರ್ಮಿಕರಿಗೆ ಸರ್ಕಾರದಿಂದ ಪ್ರತಿದಿನ 1000 ರೂ.!


 
ಕೊರೋನಾ ಅಬ್ಬರಕ್ಕೆ ಜೀವನ ಶೈಲಿ ಬದಲಾಗಿದೆ. ಹೀಗಿರುವಾಗ ಸರ್ಕಾರ ಸುಮಾರು 35 ಲಕ್ಷ ಮಂದಿ ಕಾರ್ಮಿಕರಿಗೆ ಪ್ರತಿನಿತ್ಯ ಸಾವಿರ ರೂ. ನೀಡುವುದಾಗಿ ಘೋಷಿಸಿದೆ. 

ಶುಲ್ಕ ಪಡೆಯದೇ ನಿರ್ಭಯಾ ಪರ 7 ವರ್ಷ ಹೋರಾಡಿದ ಸೀಮಾಗಿದು ಮೊದಲ ಕೇಸ್!

ನಿರ್ಭಯಾಗೆ ನ್ಯಾಯ ತಂದುಕೊಡುವಲ್ಲಿ, ಆಕೆಯ ತಾಯಿ  ಜೊತೆ ಅಷ್ಟೇ ಧೈರ್ಯದಿಂದ 7 ವರ್ಷ ಹೋರಾಡಿದ ಸೀಮಾ ಕುಶ್ವಾಹಾ. ಇವರು ಮೊದಲ ಪ್ರಕರಣದಲ್ಲೇ ಗೆದ್ದ ನಿರ್ಭಯಾ ಪರ ವಾದ ಮಾಡಿ ಗೆಲುವು ತಂದುಕೊಟ್ಟಿದ್ದಾರೆ ಇನ್ನು ಸೀಮಾ ಈ ಪ್ರಕರಣದಲ್ಲಿ ವಾದ ಮಾಡಲು ಯಾವುದೇ ಶುಲ್ಕ ಪಡೆದಿಲ್ಲ ಎಂಬುವುದು ಮತ್ತೊಂದು ಇಂಟರೆಸ್ಟಿಂಗ್ ಸಂಗತಿ

ಕೊರೋನಾ: ರಾಜ್ಯದ ಮೊದಲ ವ್ಯಕ್ತಿ ಗುಣಮುಖ, ಡಿಸ್ಚಾರ್ಜ್!...

ನಾಲ್ಕು ದಿನಗಳ ಬಳಿಕ ಕೊರೋನಾ ಸೋಂಕು ರಾಜ್ಯದಲ್ಲಿ ಬ್ರೇಕ್‌ ನೀಡಿದ್ದು, ಯಾವುದೇ ಸೋಂಕು ದೃಢಪಟ್ಟಪ್ರಕರಣ ಶುಕ್ರವಾರ ವರದಿಯಾಗಿಲ್ಲ. ಜತೆಗೆ, ಇದೇ ಮೊದಲ ಬಾರಿಗೆ ಸೋಂಕಿತರೊಬ್ಬರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ರಾಜ್ಯದಲ್ಲಿ ಇಂದಿನಿಂದ ಮಾ.31ರವರೆಗೆ ಬಾರ್‌, ಪಬ್‌ ಬಂದ್‌!

 ಮಹಾಮಾರಿ ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ಈಗಾಗಲೇ ಚಿತ್ರಮಂದಿರ, ಮಾಲ್‌ಗಳು ಸೇರಿದಂತೆ ಜನಸಂದಣಿಯ ವಾಣಿಜ್ಯ ಪ್ರದೇಶಗಳಿಗೆ ನಿರ್ಬಂಧ ವಿಧಿಸಿರುವ ಸರ್ಕಾರ ಇದೀಗ ಶನಿವಾರದಿಂದ ಅನ್ವಯವಾಗುವಂತೆ ರಾಜ್ಯಾದ್ಯಂತ ಬಾರ್‌ ಮತ್ತು ಪಬ್‌ಗಳಿಗೂ ಮಾ.31ರವರೆಗೆ ನಿಷೇಧ ಹೇರಿದೆ.

ಕೊರೋನಾ ವಿರುದ್ಧ ಹೋರಾಡಲು ಯುವಿ-ಕೈಫ್ ಜೊತೆಯಾಟ ನೆನಪಿಸಿದ ಪ್ರಧಾನಿ ಮೋದಿ!

ಕೊರೋನಾ ವೈರಸ್ ಹರಡದಂತೆ ತಡೆಯಲು ಪ್ರಧಾನಿ ಮೋದಿ ಜನತಾ ಕರ್ಫ್ಯೂಗೆ ಕರೆನೀಡಿದ್ದಾರೆ. ಮೋದಿ ನಿರ್ಧಾರ ಬೆಂಬಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಟ್ವೀಟ್ ಮೂಲಕ ಜನರಲ್ಲಿ ಮನವಿ ಮಾಡಿದ್ದರು. ಇದೀಗ ಪ್ರಧಾನಿ ಮೋದಿ ಕೈಫ್ ಟ್ವೀಟ್‌ಗೆ ಅದ್ಬುತ ಪ್ರತಿಕ್ರಿಯೆ ನೀಡಿದ್ದಾರೆ. 

ಅಯ್ಯೋ! ಪೋರ್ನ್ ಸೈಟ್‌ನಲ್ಲಿ ಸಿಗ್ತಿದೆ ಬಿಗ್ ಬಾಸ್‌ ಸ್ಪರ್ಧಿ ನಂಬರ್‌, ಫೋಟೋ!

ಬಿಗ್ ಬಾಸ್‌ ಸ್ಪರ್ಧಿ ಮೀರಾ ಮಿಥುನ್‌ ಮೊಬೈಲ್‌ ನಂಬರ್‌ ವಿಥ್ ಫೋಟೋ ಪೋರ್ನ್ ವೆಬ್‌ಸೈಟ್‌ನಲ್ಲಿ ಫುಲ್ ವೈರಲ್ ಆಗುತ್ತಿದೆ....

ಕದ್ದುಮುಚ್ಚಿ ಮದುವೆಯಾದ ಕನ್ನಡದ ನಟಿ; ವೈರಲ್‌ ಆಯ್ತು ಅಂತ ಫೋಟೋ ಡಿಲಿಟ್!

ಪ್ರಿಯಕರನ ಜೊತೆ ಕದ್ದುಮುಚ್ಚಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೆಬ್ಬುಲಿ ಬೆಡಗಿ ಅಮಲಾ. ಫೋಟೋ ಅಪ್ಲೋಡ್‌ ಮಾಡಿದ ಪ್ರಿಯಾಕರ ಕೆಲವೇ ಕ್ಷಣದಲ್ಲಿ ಡಿಲಿಟ್‌ ಮಾಡಿದ್ದು ಯಾಕೆ? 

BSNLನಿಂದ 1 ತಿಂಗಳು ಉಚಿತ ಬ್ರಾಡ್ ಬ್ಯಾಂಡ್!

ಕೊರೊನಾ ಪರಿಣಾಮ: ಬಿಎಸ್‌ಎನ್‌ಎಲ್‌ನಿಂದ 1 ತಿಂಗಳು ಡೇಟಾ ಫ್ರೀ| ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಅನುಕೂಲವಾಗಲು ಈ ನಿರ್ಧಾರ

ಹ್ಯುಂಡೈ ಕಾರಿಗೆ 2.5 ಲಕ್ಷ ರೂ ಡಿಸ್ಕೌಂಟ್; ಆಫರ್ ಕೆಲ ದಿನ ಮಾತ್ರ!

ಕೊರೋನಾ ವೈರಸ್ ಎಲ್ಲಾ ಉದ್ಯಮಗಳಿಗೆ ತೀವ್ರ ಹೊಡೆತ ನೀಡಿದೆ. 2018ರಲ್ಲಿ ಆರ್ಥಿಕತ ಹಿಂಜರಿತ ಸೇರಿದಂತೆ ಹಲವು ಕಾರಣಗಳಿಂದ ನಷ್ಟ ಅನುಭವಿಸಿದ್ದ ಆಟೋಮೊಬೈಲ್ ಕಂಪನಿಗಳಿಗೆ ಇದೀಗ ಕೊರೋನಾ ವೈರಸ್ ಇನ್ನಿಲ್ಲದಂತೆ ಕಾಡುತ್ತಿದೆ. ಇದರ ನಡುವೆ ಸುಪ್ರೀಂ ಕೋರ್ಟ್ BS6 ಎಂಜಿನ್ ಗಡುವು ಸಮೀಪಿಸುತ್ತಿದೆ. ಹೀಗಾಗಿ ಹ್ಯುಂಡೈ ಕಾರುಗಳ ಮೇಲೆ  2.5 ಲಕ್ಷ ರೂಪಾಯಿ ಡಿಸ್ಕೌಂಟ್ ಘೋಷಿಸಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ