ಹಿರಿಯ ನಾಗರಿಕರಿಗೆ ನೀಡ್ತಿದ್ದ ರಿಯಾಯಿತಿ ದರ ಕಡಿತಗೊಳಿಸಿದ KSRTC

Published : Mar 21, 2020, 03:55 PM IST
ಹಿರಿಯ ನಾಗರಿಕರಿಗೆ ನೀಡ್ತಿದ್ದ ರಿಯಾಯಿತಿ ದರ ಕಡಿತಗೊಳಿಸಿದ KSRTC

ಸಾರಾಂಶ

ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ ರಿಯಾಯಿತಿಯನ್ನ ಕೆಎಸ್‌ಆರ್‌ಟಿಸಿ ತಾತ್ಕಾಲಿಕವಾಗಿ ಕಡಿತಗೊಳಿಸಿದೆ. ಕಾರಣ ಏನು..? ಈ ಕೆಳಗಿನಂತಿದೆ ನೋಡಿ.

ಬೆಂಗಳೂರು, (ಮಾ.21): ಕೊರೋನಾ ವೈರಸ್ ಪರಿಣಾಮ ಕೆಎಸ್‌ಆರ್‌ಟಿಸಿಯಲ್ಲಿ ನೀಡಲಾಗುತ್ತಿದ್ದ ಹಿರಿಯ ನಾಗರಿಕರಿಗೆ ರಿಯಾಯಿತಿಯನ್ನ ಕ್ಯಾನ್ಸ್‌ಲ್ ಮಾಡಿದೆ.

ಕೊರೋನಾ ವೈರಸ್ ಹಿನ್ನೆಯಲ್ಲಿ ಹಿರಿಯ ನಾಗರಿಕರನ್ನ ಬಸ್ಸುಗಳಲ್ಲಿ ಪ್ರಯಾಣಿಸಲು ಪ್ರೋತ್ಸಾಹಿಸಬಾರದು ಎನ್ನುವ ಕಾರಣಕ್ಕೆ ರಿಯಾಯಿತಿ ದರವನ್ನ ಕೆಎಸ್‌ಆರ್‌ಟಿಸಿ ಸಂಸ್ಥೆ ಹಿಂಪಡೆದಿದೆ.

ಶನಿವಾರ ಒಂದೇ ದಿನ 4 ಕೊರೋನಾ ಪತ್ತೆ: ಕರುನಾಡಲ್ಲಿ 19ಕ್ಕೆ ಏರಿಕೆ

ಕೆಎಸ್‌ಆರ್‌ಟಿಸಿ ಸದ್ಯ ಹಿರಿಯ ನಾಗರಿಕರಿಗೆ ಶೇ. 21ರಷ್ಟು ಟಿಕೆಟ್‌ ದರದಲ್ಲಿ ರಿಯಾಯಿತಿಯನ್ನ ನೀಡುತ್ತಿತ್ತು. ಇದೀಗ ಅದನ್ನ ಕಡಿತಗೊಳಿಸಿದೆ.

ಇನ್ನು 60 ವರ್ಷದ ಮೇಲ್ಪಟ್ಟವರು  ಸಾಮೂಹಿಕವಾಗಿ ಸಾರಿಗೆ ಬಸ್ ಬಳಸದಂತೆ ಮನವಿ ಮಾಡಿದ್ದು, ಇದಕ್ಕೆ ನಾಗರಿಕರು ಸಹರಿಸಬೇಕೆನ್ನುವ ಮನವಿ ಸುತ್ತೋಲೆಯನ್ನ ಹೊರಡಿಸಿದೆ.

ಈಗಾಗಲೇ ರಾಜ್ಯದಲ್ಲಿ ಕೊರೋನಾ ವೈರಸ್ ಸೊಂಕಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಆದಷ್ಟೂ ಎಚ್ಚರಿಕೆ ಇರುವುದು ಒಳಿತು. ಯಾವುದೇ ಕಾರಣಕ್ಕೂ ಈ ವೈರಸ್ ಬಗ್ಗೆ ನಿರ್ಲಕ್ಷ್ಯ ಮಾಡಬಾರದರು, ನಮ್ಮ ಆರೋಗ್ಯ ನಮ್ಮ ಕೈಯಲ್ಲಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ: 24,300 ಹುದ್ದೆ ಭರ್ತಿಗೆ ಅಂಕಿತ! ಇಲಾಖಾವಾರು ಮಾಹಿತಿ ಇಲ್ಲಿದೆ!