ಕೊರೋನಾ ಲಸಿಕೆ ನೀಡುವಿಕೆಯಲ್ಲಿ ಭಾರತ ದಾಖಲೆ ಬರೆದಿದೆ. ಅಮೆರಿಕ ಇಸ್ರೇಲ್ ದೇಶವನ್ನೇ ಹಿಂದಿಕ್ಕಿದೆ. ತಮಿಳುನಾಡಿನಿಂದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪೆಟ್ರೋಲ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಅರ್ಧಕರ್ಧ ಕಲ್ಲು ಕ್ವಾರಿಗಳು ಅಕ್ರಮ ಮಾಹಿತಿ ಬಹಿರಂಗ, ರಾಜ್ಯದಲ್ಲಿ ಲವ್ ಜಿಜಾದ್ ಕಾನೂನು, ಬೆಂಗಳೂರುಲ್ಲಿ ರೈತರ ರ‍್ಯಾಲಿ ಸೇರಿದಂತೆ ಜ.24ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
6 ದಿನ 10 ಲಕ್ಷ ಮಂದಿಗೆ ಲಸಿಕೆ; ಅಮೆರಿಕ, ಇಸ್ರೇಲ್ ಹಿಂದಿಕ್ಕಿ ದಾಖಲೆ ಬರೆದ ಭಾರತ!...
undefined
ಕೊರೋನಾ ವೈರಸ್ ವಿಚಾರದಲ್ಲಿ ಭಾರತ ತೆಗೆದುಕೊಂಡ ಹಲವು ನಿರ್ಧಾರಗಳು ವಿಶ್ವದಲ್ಲೇ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕೊರೋನಾ ಹರಡದಂತೆ ತಡೆಯಲು ಲಾಕ್‌ಡೌನ್, ಕಟ್ಟು ನಿಟ್ಟಿನ ಕ್ರಮ, ಬಳಿಕ ಹಂತ ಹಂತವಾಗಿ ಅನ್‌ಲಾಕ್ ಸೇರಿದಂತೆ ಹಲವು ನಿಯಮಗಳನ್ನು ಇತರ ದೇಶಗಳು ಪಾಲಿಸಿದೆ. ಇದೀಗ ಕೊರೋನಾ ಲಸಿಕೆ ವಿಚಾರದಲ್ಲಿ ಭಾರತಕ್ಕೆ ಯಾರೂ ಸರಿಸಾಟಿ ಇಲ್ಲ. ಅಮೆರಿಕ, ಇಸ್ರೇಲ್ ಹಿಂದಿಕ್ಕಿ ದಾಖಲೆ ಬರೆದಿದೆ.
ತಮಿಳ್ನಾಡಲ್ಲಿ ರಾಹುಲ್ ಭರ್ಜರಿ ರೋಡ್ ಶೋ, ಮೋದಿ ವಿರುದ್ಧ ವಾಗ್ದಾಳಿ!...
ಈ ಬೇಸಿಗೆಯಲ್ಲಿ ಚುನಾವಣೆ ನಡೆಯಲಿರುವ ತಮಿಳುನಾಡಿನಲ್ಲಿ ಪ್ರಚಾರ ಆರಂಭಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಶನಿವಾರ ಕೊಯಮತ್ತೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಈ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪೆಟ್ರೋಲ್ ದರ ಸಾರ್ವಕಾಲಿಕ ಗರಿಷ್ಠ: ಅಬಕಾರಿ ಸುಂಕ ಇಳಿಕೆಗೆ ಕೇಂದ್ರದ ಮೇಲೆ ಒತ್ತಡ!...
ತೈಲ ಕಂಪನಿಗಳು ಶನಿವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀ.ಗೆ 25 ಪೈಸೆಯಷ್ಟುಏರಿಕೆ ಮಾಡಿವೆ. ಇದರೊಂದಿಗೆ ಪೆಟ್ರೋಲ್ ಬೆಲೆ ಮುಂಬೈನಲ್ಲಿ 92.28 ರು., ಬೆಂಗಳೂರಿನಲ್ಲಿ 88.59 ರು., ಚೆನ್ನೈ 88.29 ರು., ಕೋಲ್ಕತಾ 87.11, ದೆಹಲಿಯಲ್ಲಿ 85.70 ರು. ಗೆ ತಲುಪಿದೆ.
ಕರ್ನಾಟಕದಲ್ಲಿವೆ ಸುಮಾರು 5000ಕ್ಕೂ ಹೆಚ್ಚು ಕಲ್ಲು ಕ್ವಾರಿಗಳು, ಅರ್ಧಕ್ಕರ್ಧ ಅಕ್ರಮ!...
ರಾಜ್ಯದ 27 ಜಿಲ್ಲೆಗಳಲ್ಲಿ 5350ಕ್ಕೂ ಹೆಚ್ಚು ಕಲ್ಲು ಕ್ವಾರಿಗಳಿದ್ದು, ಜಲ್ಲಿ ಹಾಗೂ ಎಂ-ಸ್ಯಾಂಡ್‌ಗಳನ್ನು ಉತ್ಪಾದಿಸುತ್ತಿವೆ. ಈ ಪೈಕಿ 2850ರಷ್ಟುಕ್ವಾರಿಗಳು ಅಧಿಕೃತ ಪರವಾನಗಿ ಪಡೆದು ಕಾರ್ಯನಿರ್ವಹಿಸುತ್ತಿದ್ದರೆ, ಸುಮಾರು 2500ರಷ್ಟುಕ್ವಾರಿಗಳಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಭೂಮಿ ಅಗೆಯಲಾಗುತ್ತಿದೆ. ವಿಶೇಷ ಎಂದರೆ, ಅತಿ ಹೆಚ್ಚು ಅವಘಡಗಳು ಹಾಗೂ ಸಾವುನೋವುಗಳು ಸಂಭವಿಸಿರುವುದು ಇಂತಹ ಅಕ್ರಮ ಕ್ವಾರಿಗಳಲ್ಲೇ!
ರಾಜ್ಯದಲ್ಲಿ ಲವ್ ಜಿಹಾದ್ ತಡೆ ಕಾನೂನು ಜಾರಿ ಫಿಕ್ಸ್: ಖಚಿತಪಡಿಸಿದ ಬಿಜೆಪಿ ಸಾರಥಿ...
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯಂತೆ ಲವ್ ಜಿಹಾದ್ ಕಾನೂನು ಕೂಡ ಜಾರಿಗೆ ತರಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ.
ಫೆ.5 ರಿಂದ ಭಾರತ-ಇಂಗ್ಲೆಂಡ್ ತವರಿನ ಸರಣಿ; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ!...
ಆಸ್ಟ್ರೇಲಿಯಾ ಪ್ರವಾಸ ಯಶಸ್ವಿಯಾಗಿ ಮುಗಿಸಿ ತವರಿಗೆ ವಾಪಸ್ ಆಗಿರುವ ಟೀಂ ಇಂಡಿಯಾ ಇದೀಗ ಇಂಗ್ಲೆಂಡ್ ವಿರುದ್ದ ತವರಿನ ಸರಣಿಗೆ ಸಜ್ಜಾಗಿದೆ. ಜನವರಿ 27ಕ್ಕೆ ಉಭಯ ತಂಡದ ಆಟಗಾರರ ಚೆನ್ನೈಗೆ ಆಗಮಿಸಲಿದ್ದಾರೆ. ಫೆ.5 ರಿಂದ ಟೆಸ್ಟ್, ಟಿ20 ಹಾಗೂ ಏಕದಿನ ಸರಣಿ ಆರಂಭಗೊಳ್ಳಲಿದೆ.
ಸ್ಟಾರ್ ನಿರ್ದೇಶಕನ ಬಹು ನಿರೀಕ್ಷಿತ ಚಿತ್ರಕ್ಕೆ ನಾಯಕನಾಗಲು ಒಪ್ಪಿಗೆ ಕೊಟ್ಟ ಯಶ್?...
ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಿತ್ರದ ನಂತರ ಯಾವ ಸಿನಿಮಾದಲ್ಲಿ ಆ್ಯಕ್ಟ್ ಮಾಡುತ್ತಾರೆ ಅನ್ನೋ ಕುತೂಹಲ ಎಲ್ಲಿರಿಗಿದೆ, ಇದು ಕೇವಲ ಅಭಿಮಾನಿಗಳು ಮಾತ್ರವಲ್ಲ, ಸಿನಿಮಾ ರಂಗದವರು ಕೇಳುತ್ತಿರುವ ಪ್ರಶ್ನೆ. ಕೆಲವು ಮೂಲಗಳ ಪ್ರಕಾರ ಯಶ್ ನಿರ್ದೇಶಕ ಶಂಕರ್ ಚಿತ್ರಕ್ಕೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಒಪ್ಪಿಕೊಂಡಿರುವುದ ನಿಜಾನಾ?
ಮತ್ತೊಂದಿಷ್ಟು ಆಪ್‌ಗಳಿಗೆ ಈಗ ಕೇಂದ್ರ ಸರ್ಕಾರದ ಲಗಾಮು...
ಈ ಹಿಂದೆ ಅನೇಕ ಚೀನಾ ಆಪ್‌ಗಳನ್ನು ಭಾರತದಲ್ಲಿ ನಿಷೇಧ ಮಾಡಲಾಗಿತ್ತು ಇದೀಗ ಇನ್ನೊಂದಿಷ್ಟು ಆಪ್‌ಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.
5 ಸ್ಟಾರ್ ಸುರಕ್ಷತೆಯ ಏಕೈಕ ಹ್ಯಾಚ್‌ಬ್ಯಾಕ್; ಟಾಟಾ ಅಲ್ಟ್ರೋಜ್ i ಟರ್ಬೋ ಬಿಡುಗಡೆ!...
ಅಲ್ಟ್ರೋಜ್ ಕಾರು ಒಂದು ವರ್ಷ ಪೂರೈಸಿದ ಬೆನ್ನಲ್ಲೇ ಇದೀಗ ಟಾಟಾ ಮೋಟಾರರ್ಸ್ ಐ ಟರ್ಬೋ ಕಾರು ಬಿಡುಗಡೆ ಮಾಡಿದೆ. ಕಡಿಮೆ ಬೆಲೆಯಲ್ಲಿ ಲಭ್ಯವಿರುವ 5 ಸ್ಟಾರ್ ಸುರಕ್ಷತೆ ಏಕೈಕ ಹ್ಯಾಚ್‌ಬ್ಯಾಕ್ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಅಲ್ಟ್ರೋಜ್ ಟರ್ಬೋ ಐ ಕಾರಿನ ವಿಶೇಷ ಇಲ್ಲಿದೆ.
ಜ.26 ರಂದು ಬೆಂಗಳೂರಿಗೆ 10 ಸಾವಿರ ರೈತರ ಲಗ್ಗೆ : ಕೋಡಿಹಳ್ಳಿ ಚಂದ್ರಶೇಖರ್...
ಕೃಷಿಕಾಯ್ದೆ ಹಿಂಪಡೆಯುವವರೆಗೆ ಚಳುವಳಿ ಮಾಡ್ತೀವಿ. ಜ. 26 ಕ್ಕೆ ಬೆಂಗಳೂರಿನಲ್ಲಿ 25 ಸಾವಿರ ವಾಹನಗಳ ಪರೇಡ್ ನಡೆಯುತ್ತದೆ. ಟ್ರಾಕ್ಟರ್, ಬೈಕ್, ಜೀಪ್‌ಗಳಲ್ಲಿ ಬೆಂಗಳೂರಲ್ಲಿ ಪರೇಡ್ ಮಾಡ್ತೀವಿ' ಎಂದು ರೈತ ಮುಖಂಡ ಕುರಬೂರು ಶಾಂತಕುಮಾರ್ ಹೇಳಿದ್ದಾರೆ.