ಪಾಕ್ ಇನ್ನು ಏಕಾಂಗಿ| ಪಾಕ್ ಜತೆ ವ್ಯಾಪಾರ ವಹಿವಾಟು ಸ್ಥಗಿತ| ಪಾಕ್ ಆಪ್ತ ರಾಷ್ಟ್ರ ಪಟ್ಟ ಹಿಂದಕ್ಕೆ| ಮಾಡಿದ್ದುಣ್ಣೋ ಪಾಪಿ ಪಾಕಿಸ್ತಾನ
ನವದೆಹಲಿ[ಫೆ.15]: ಕಣಿವೆ ಪ್ರದೇಶ ಪುಲ್ವಾಮದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 42 ಯೋಧರು ಹುತಾತ್ಮರಾಗಿದ್ದಾರೆ. ಈ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿದ್ದಾರೆ. ಅಲ್ಲದೇ ದಾಳಿಯ ಬೆನ್ನಲ್ಲೇ ನಡೆದಿದ್ದ ತುರ್ತು ಸಚಿವ ಸಂಪುಟ ಸಭೆಯಲ್ಲಿ ಪಾಕಿಸ್ತಾನಕ್ಕೆ ಭಾರತ ನೀಡಿರುವ ಆಪ್ತ ರಾಷ್ಟ್ರ ಪಟ್ಟ( Most Favoured Nation)ವನ್ನು ಹಿಂದಕ್ಕೆ ಪಡೆಯಲು ನಿರ್ಧಾರ ತೆಗೆದುಕೊಂಡಿದ್ದಾರೆ ಹಾಗೂ ಪಾಕಿಸ್ತಾನವನ್ನು ಏಕಾಂಗಿಯಾಗಿಸುವ ರಾಜಕೀಯ ನಡೆ ತೆಗೆದುಕೊಳ್ಳಲಾಗಿದೆ.
undefined
ಪಾಪಿ ಉಗ್ರರನ್ನು ಸದೆಬಡಿಯಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ: ಮೋದಿ
ಏನಿದು ಆಪ್ತ ರಾಷ್ಟ್ರ ಪಟ್ಟ?
ಆಪ್ತ ರಾಷ್ಟ್ರ ಪಟ್ಟ ಅಂದರೆ ಅತಿ ಹೆಚ್ಚು ಆದ್ಯತೆ ನೀಡುವ ದೇಶ. ವಿಶ್ವ ವ್ಯಾಪಾರ ಸಂಘಟನೆ ಹಾಗೂ ಅಂತರಾಷ್ಟ್ರೀಯ ವ್ಯಾಪಾರ ನಿಯಮದ ಅನುಸಾರ ಈ ಪಟ್ಟ ನೀಡಲಾಗುತ್ತದೆ. ಈ ಪಟ್ಟ ನೀಡುವ ಮೂಲಕ ವ್ಯಾಪಾರದಲ್ಲಿ ಯಾವುದೇ ರೀತಿಯ ನಷ್ಟ ಮಾಡುವುದಿಲ್ಲ ಎಂಬ ಭರವಸೆ ನೀಡಲಾಗುತ್ತದೆ.
ಹಲವು ದಿನಗಳ ಹಿಂದೆಯೇ ಗುಪ್ತಚರ ಸಂಘಟನೆಗಳಿಂದ ಎಚ್ಚರಿಕೆ
ವ್ಯಾಪಾರಕ್ಕಾಗಿ ನೀಡುವ ಈ ಪಟ್ಟದಿಂದಾಗಿ, ಸಾಮಾಗ್ರಿಗಳನ್ನು ಆಮದು ಹಾಗೂ ರಫ್ತು ಮಾಡುವಾಗ ವಿಶೇಷ ರಿಯಾಯ್ತಿಯನ್ನೂ ನೀಡಲಾಗುತ್ತದೆ. ಸಿಮೆಂಟ್, ಉಪ್ಪು, ಆರ್ಗಾನಿಕ್ ಕೆಮಿಕಲ್ಸ್, ಹತ್ತಿ, ತರಕಾರಿ ಹಾಗೂ ಕೆಲ ಆಯ್ದ ಹಣ್ಣುಗಳು, ಮಿನರಲ್ ಆಯ್ಲ್, ಒಣ ಹಣ್ಣುಗಳು, ಸ್ಟೀಲ್ ವಸ್ತುಗಳು ಸೇರಿದಂತೆ ಇನ್ನಿತರ ಸಾಮಾಗ್ರಿಗಳ ವ್ಯಾಪಾರ ವ್ಯವಹಾರ ಎರಡೂ ದೇಶಗಳ ನಡುವೆ ಸುಗಮವಾಗಿ ನಡೆಯುತ್ತದೆ.
ವಿಡಿಯೋ ಬಿಡುಗಡೆ ಆಗುವ ವೇಳೆಗೆ ನಾನು ಸ್ವರ್ಗದಲ್ಲಿರುತ್ತೇನೆ ಎಂದಿದ್ದ ಪಾತಕಿ
ಪರಿಣಾಮಗಳೇನು?
ಸದ್ಯ ಪಾಕಿಸ್ತಾನ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಭಾರತದೊಂದಿಗೆ ಉತ್ತಮ ವ್ಯಾಪಾರ ವಹಿವಾಟನ್ನು ಕೂಡಾ ಹೊಂದಿತ್ತು. ಗಡಿಯಲ್ಲಿ ಅದೆಷ್ಟೇ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದರೂ, ವ್ಯಾಪಾರದ ಮೇಲೆ ಯಾವುದೇ ಪರಿಣಾಮ ಬೀರಿರಲಿಲ್ಲ. ಆದರೀಗ ಆಪ್ತ ರಾಷ್ಟ್ರ ಪಟ್ಟ ಹಿಂಪಡೆಯುವುದರಿಂದ ಪಾಕಿಸ್ತಾನ ಆರ್ಥಿಕವಾಗಿ ಇನ್ನುಷ್ಟು ಕುಸಿಯಲಿದೆ. ಆದರೆ ತಜ್ಞರ ಅನ್ವಯ ಭಾರತ ಈ ಪಟ್ಟ ಹಿಂಪಡೆದರೆ ಅತ್ತ ಪಾಕಿಸ್ತಾನವೂ ಭಾರತದೊಂದಿಗಿನ ವ್ಯಾಪಾರನನ್ನು ಬಂದ್ ಮಾಡುವ ಸಾಧ್ಯತೆಗಳಿವೆ ಎಂದಿದ್ದಾರೆ. ಆದರೆ ವರ್ತಮಾನ್ನು ಗಮನಿಸಿದರೆ ಭಾರತ ಆರ್ಥಿಕ ನಷ್ವವಾಗುತ್ತದೆ ಎಂದು ಚಿಂತಿಸಿ ಪಾಕಿಸ್ತಾನವನ್ನು ಕ್ಷಮಿಸುವ ಮಾತೇ ಇಲ್ಲ ಎನ್ನಬಹುದು.
ರಕ್ತಕ್ಕೆ ರಕ್ತ, ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ ಅಂತಿದೆ ಭಾರತ..!
ಭಾರತದ ಬೆಂಬಲಕ್ಕೆ ಬಂತು ಜಗತ್ತು: ಪಾಕ್‌ಗೆ ಕಾದಿದೆ ಆಪತ್ತು!
ಆತ್ಮಾಹುತಿ ದಾಳಿಗೆ ಮಂಡ್ಯದ ವೀರಪುತ್ರ ಹುತಾತ್ಮ
ಈ ನಾಯಿಯೇ ಇಂದು ಬೊಗಳಿದ್ದು: ಪ್ಲ್ಯಾನ್ ಹೇಗೆ ಮಾಡಿದ್ದು?