
ನವದೆಹಲಿ : ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭೀಕರ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರೋರ್ವರ ತಂದೆ ದೇಶಕ್ಕಾಗಿ ಮನ ಮಿಡಿಯುವ ಸಂದೇಶವೊಂದನ್ನು ನೀಡಿದ್ದಾರೆ.
ದೇಶಕ್ಕಾಗಿ ಈಗ ತಮ್ಮ ಓರ್ವ ಪುತ್ರನನ್ನು ಕಳೆದುಕೊಂಡಿದ್ದು, ತಮ್ಮ ಇನ್ನೋರ್ವ ಪುತ್ರನ ಪ್ರಾಣವನ್ನು ನೀಡಲು ಸಿದ್ಧವಿದ್ದೇನೆ. ಈ ಮೂಲಕ ಪಾಕಿಸ್ತಾನದ ಪೈಶಾಚಿಕ ಕೃತ್ಯಕ್ಕೆ ಸೂಕ್ತ ಉತ್ತರ ನೀಡಲೇಬೇಕು ಎಂದಿದ್ದಾರೆ.
ವಿಡಿಯೋ ಬಿಡುಗಡೆ ಆಗುವ ವೇಳೆಗೆ ನಾನು ಸ್ವರ್ಗದಲ್ಲಿರುತ್ತೇನೆ ಎಂದಿದ್ದ ಪಾತಕಿ
ಒಟ್ಟು 42 ಯೋಧರು ಹುತಾತ್ಮರಾಗಿದ್ದು, ಇವರಲ್ಲಿ ಬಿಹಾರ ಮೂಲದ ಭಾಗಲ್ಪುರ್ ಮೂಲದ ರತನ್ ಠಾಕೂರ್ ಕೂಡ ಓರ್ವರು.
ದೇಶ ಸೇವೆಗೆ ತಮ್ಮ ಪುತ್ರನನ್ನು ಅರ್ಪಿಸಿದ ಈ ತಂದೆಯ ಮಾತು ಕಣ್ಣಲ್ಲಿ ನೀರು ತರಿಸಿದ್ದು, ಭಾರತ ಮಾತೆಗೆ ಸೇವೆ ಸಲ್ಲಿಸಲು ಇನ್ನೊಬ್ಬ ಮಗನನ್ನು ತಾವು ಕಳುಹಿಸುವುದಾಗಿ ದುಃಖದ ನಡುವೆಯೂ ಮನಮಿಡಿಯುವ ಸಂದೇಶ ನೀಡಿದ್ದಾರೆ.
ಹಲವು ದಿನಗಳ ಹಿಂದೆಯೇ ಗುಪ್ತಚರ ಸಂಘಟನೆಗಳಿಂದ ಎಚ್ಚರಿಕೆ
ಸಿಆರ್‌ಪಿಎಫ್ ಯೋಧರನ್ನು ಹೊತ್ತು ಸಾಗುತ್ತಿದ್ದ ಬಸ್‌ಗೆ 20 ವರ್ಷದ ಜೈಷ್ ಎ ಮೊಹಮ್ಮದ್ ಉಗ್ರನೊಬ್ಬ ಸ್ಫೋಟಕ ತುಂಬಿದ್ದ ವಾಹನ ಡಿಕ್ಕಿ ಹೊಡೆಸಿ ನಡೆಸಿದ ಈ ದಾಳಿಯಲ್ಲಿ 42 ಯೋಧರು ವೀರಮರಣವನ್ನಪ್ಪಿದ್ದರು. ಇತಿಹಾಸದಲ್ಲೇ ಅತ್ಯಂತ ಘೋರ ದುರಂತ ಇದಾಗಿದ್ದು, ಈ ಕೃತ್ಯಕ್ಕೆ 350ಕೆಜಿಯಷ್ಟು ಸ್ಫೋಟಕ ಸಾಮಾಗ್ರಿ ಬಳಕೆ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ