
ನವದೆಹಲಿ[ಫೆ.15]: ದೇಶದ 42 ವೀರಯೋಧರನ್ನು ಬಲಿ ಪಡೆದ ಪುಲ್ವಾನಾ ಉಗ್ರ ದಾಳಿಯ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. 'ಜೈಶ್ ಉಗ್ರರು ನಡೆಸಿದ ಈ ದಾಳಿಯ ಬಳಿಕ ದೇಶದ ಜನರಲ್ಲಿರುವ ಅಪೇಕ್ಷೆ ಹಾಗೂ ಉಗ್ರರ ಧಮನಕ್ಕೆ ಏನಾದರೂ ಮಾಡಬೇಕೆಂದ ತುಡಿತ ಸ್ವಾಭಾವಿಕ. ಸದ್ಯ ನಮ್ಮ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡುತ್ತಿದ್ದೇವೆ. ನಮ್ಮ ಸೈನಿಕರ ಶೌರ್ಯ ಹಾಗೂ ಅವರ ಧೈರ್ಯದ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ' ಎಂದಿದ್ದಾರೆ.
"
ಹಲವು ದಿನಗಳ ಹಿಂದೆಯೇ ಗುಪ್ತಚರ ಸಂಘಟನೆಗಳಿಂದ ಎಚ್ಚರಿಕೆ
ಉಗ್ರರಿಗೆ ಹಾಗೂ ಭಯೋತ್ಪಾದಕ ಸಂಘಟನೆಗಳಿಗೆ ಎಚ್ಚರಿಕೆ ನೀಡಿರುವ ಮೋದಿ 'ನಮ್ಮ ಯೋಧರ ಮೇಲೆ ದಾಳಿ ನಡೆಸುವ ಮೂಲಕ ನೀವು ಬಹುದೊಡ್ಡ ತಪ್ಪು ಮಾಡಿದ್ದೀರಿ. ಇದಕ್ಕಾಗಿ ತಕ್ಕ ಬೆಲೆ ತೆರಬೇಕಾಗುತ್ತದೆ' ಎಂದು ಗುಡುಗಿದ್ದಾರೆ.
ವಿಡಿಯೋ ಬಿಡುಗಡೆ ಆಗುವ ವೇಳೆಗೆ ನಾನು ಸ್ವರ್ಗದಲ್ಲಿರುತ್ತೇನೆ ಎಂದಿದ್ದ ಪಾತಕಿ
'ನಮ್ಮ ವಿರುದ್ಧ ಸಂಚು ಮಾಡುವವರು ಯಾವತ್ತೂ ಸಫಲರಾಗಲ್ಲ. ಈ ಸಮಯದಲ್ಲಿ ತಾಳ್ಮೆ ಅವಶ್ಯಕ. ನನಗೆ ತಿಳಿದಿದೆ ಈ ಘಟನೆಯಿಂದ ದೇಶದ ಜನರು ಆಕ್ರೋಶಗೊಂಡಿದ್ದಾರೆ, ಎಲ್ಲರ ರಕ್ತ ಕುದಿಯತೊಡಗಿದೆ. ಇದರ ಹಿಂದೆ ಯಾರಿದ್ದಾರೆ ಅವರಿಗೆ ತಕ್ಕ ಶಿಕ್ಷೆ ಆಗಿಯೇ ಆಗುತ್ತದೆ ಎಂದು ನಾನು ಭರವಸೆ ನೀಡುತ್ತೇನೆ' ಎಂದಿದ್ದಾರೆ.
'ಈ ಸಂದರ್ಭದಲ್ಲಿ ಆಡಳಿತ ಹಾಗೂ ವಿಪಕ್ಷಗಳು ರಾಜಕೀಯವನ್ನು ಬದಿಗಿಡಿ. ಇಡೀ ದೇಶವೇ ಒಂದಾಗಿ ಈ ದಾಳಿಯನ್ನೆದುರಿಸಬೇಕು. ದೇಶ ಒಂದಾಗಿದೆ ಹಾಗೂ ಒಂದೇ ಧ್ವನಿ ಹೊಂದಿದೆ ಎಂಬ ಸಂದೇಶ ವಿಶ್ವಕ್ಕೆ ನೀಡಬೇಕು. ನಾವು ವೀರ ಯೋಧರ ಮರಣಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ಭಾರತ ಇನ್ನು ಆ ದೇಶದ ಮೇಲೆ ಕರುಣೆ ತೋರಲ್ಲ. ನಮ್ಮ ಮೊದಲ ಗುರಿ ದೇಶದ ರಕ್ಷಣೆ, 2ನೇ ಗುರಿ ದೇಶದ ಅಭಿವೃದ್ಧಿ’ ಎನ್ನುವ ಮೂಲಕ ಭಯೋತ್ದಾದಕರಿಗೆ ಖಡಕ್ ಸಂದೇಶ ನೀಡಿದ್ದಾರೆ.
ರಕ್ತಕ್ಕೆ ರಕ್ತ, ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ ಅಂತಿದೆ ಭಾರತ..!
ಭಾರತದ ಬೆಂಬಲಕ್ಕೆ ಬಂತು ಜಗತ್ತು: ಪಾಕ್‌ಗೆ ಕಾದಿದೆ ಆಪತ್ತು!
ಆತ್ಮಾಹುತಿ ದಾಳಿಗೆ ಮಂಡ್ಯದ ವೀರಪುತ್ರ ಹುತಾತ್ಮ
ಈ ನಾಯಿಯೇ ಇಂದು ಬೊಗಳಿದ್ದು: ಪ್ಲ್ಯಾನ್ ಹೇಗೆ ಮಾಡಿದ್ದು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ