ಹೊಸ ಸಚಿವರಿಗೆ ಖಾತೆ ಹಂಚಿಕೆ, ನಟ-ನಟಿಯರಿಗೆ ಕಿಸ್ ಅಂಜಿಕೆ; ಫೆ.10ರ ಟಾಪ್ 10 ಸುದ್ದಿ!

By Suvarna NewsFirst Published Feb 10, 2020, 5:04 PM IST
Highlights

ಬಿಎಸ್ ಯಡಿಯೂರಪ್ಪ ಸರ್ಕಾರದ ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿದೆ. ರಮೇಶ್ ಜಾರಕಿಹೊಳಿ ಹಾಗೂ ಸೋಮಶೇಖರ್ ತಮಗಿಷ್ಟದ ಖಾತೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಕೊರೊನಾವೈರಸ್ ಭೀತಿಯಿಂದ ಕಿಸ್ಸಿಂಗ್ ದೃಶ್ಯಗಳ ಅಭಿನಯಕ್ಕೆ ಬ್ರೇಕ್ ಹಾಕಲಾಗಿದೆ. ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥ, ಮಕ್ಕಳ ಅತ್ಯಾಚಾರಿಗಳಿಗೆ ಸಾರ್ವಜನಿಕ ಗಲ್ಲು ಸೇರಿದಂತೆ ಫೆಬ್ರವರಿ 10ರ ಟಾಪ್ 10 ಸುದ್ದಿ ಇಲ್ಲಿವೆ.

ಬಿಎಸ್‌ವೈ ಸಂಪುಟದ ಹೊಸ ಸಚಿವರಿಗೆ ಸಿಕ್ತು ಖಾತೆ, ಇಲ್ಲಿದೆ ಫೈನಲ್ ಲಿಸ್ಟ್

ಅಂತೂ ಇಂತೂ ಯಡಿಯೂರಪ್ಪ ಸರ್ಕಾರದ ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿದ್ದು, ಫೈನಲ್ ಪಟ್ಟಿ ರೆಡಿಯಾಗಿದೆ. ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಸಿದ್ಧಪಡಿಸಿರುವ ಈ ಪಟ್ಟಿಗೆ ರಾಜ್ಯಪಾಲ ವಜುಭಾಯಿ ವಾಲಾ ಅಂಕಿತ ಹಾಕಿದ್ದಾರೆ. 

ಕೊರೋನಾ ವೈರಸ್ ಭೀತಿ: ಸಿನಿಮಾ ಕಿಸ್ಸಿಂಗ್ ದೃಶ್ಯಗಳಿಗೂ ಕತ್ತರಿ!

ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಾರಕ ವೈರಸ್ ನಿಂದಾಗಿ ತೈವಾನ್ ನ ಧಾರಾವಾಹಿ ಹಾಗೂ ಸಿನಿಮಾಗಳಿಂದ ಕಿಸ್ಸಿಂಗ್ ದೃಶ್ಯವನ್ನು ತೆಗೆದು ಹಾಕುವ ನಿರ್ಧಾರ ಕೈಗೊಳ್ಳಲಾಗಿದೆ. ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. 

ಕಲ್ಲಿಗೆ ಕಲ್ಲು, ಖಡ್ಗಕ್ಕೆ ಖಡ್ಗ: ಪೌರತ್ವ ಕಾಯ್ದೆ ಪರ ಠಾಕ್ರೆ ಬ್ಯಾಟಿಂಗ್!

ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಪಿಆರ್‌, ಎನ್‌ಆರ್‌ಸಿ ಬಗ್ಗೆ ರಾಜ್ಯದಲ್ಲಿನ ಆಡಳಿತಾರೂಢ ಶಿವಸೇನೆ- ಕಾಂಗ್ರೆಸ್‌- ಎನ್‌ಸಿಪಿ ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೇ, ಈ ಮೂರೂ ವಿಷಯಗಳ ಬಗ್ಗೆ ಎಂಎನ್‌ಎಸ್‌ ನಾಯಕ ರಾಜ್‌ಠಾಕ್ರೆ ಬಹಿರಂಗವಾಗಿಯೇ ಬೆಂಬಲ ಘೋಷಿಸಿದ್ದಾರೆ. 

ಮಕ್ಕಳ ಅತ್ಯಾಚಾರಿಗೆ ಸಾರ್ವಜನಿಕ ಗಲ್ಲು ಶಿಕ್ಷೆ, ಮಸೂದೆ ಪಾಸ್!

ಮಕ್ಕಳ ಮೇಲೆ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ದಿನೇ ದಿನೇ ಹೆಚ್ಚುತ್ತಿವೆ. ಹೀಗಿರುವಾಗ ನೆರೆ ರಾಷ್ಟ್ರ ಪಾಕಿಸ್ತಾನ ಸಂಸತ್ತು ಶುಕ್ರವಾರದಂದು ಇಂತಹ ಅಪರಾಧಿಗಳನ್ನು ಸಾರ್ವಜನಿಕ ಗಲ್ಲು ಶಿಕ್ಷೆ ವಿಧಿಸುವ ಮಸೂದೆಗೆ ಗ್ರೀನ್ ಸಿಗ್ನಲ್ ನೀಡಿದೆ.

ನಿಖಿಲ್‌ ಕುಮಾರಸ್ವಾಮಿ ಬಾಳಲ್ಲಿ ಇನ್ನು ರೇವತಿ ನಕ್ಷತ್ರದ್ದೇ ಮೆರಗು

'ಜಾಗ್ವರ್‌' ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಿಖಿಲ್‌ ಕುಮಾರಸ್ವಾಮಿ ಇಂದು ವಿಜಯನಗರದ ಮಾಜಿ ಶಾಸಕ ಎಂ.ಕೃಷ್ಣಪ್ಪ ಅವರ ಮೊಮ್ಮಗಳೊಂದಗೆ ಬೆಂಗಳೂರಿನ ತಾಜ್‌ ವೆಸ್ಟೆಂಡ್‌ನಲ್ಲಿ ಗುರು- ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಸಲ್ಮಾನ್‌ ಖಾನ್‌ನ ಫಾರಿನ್‌ ಪ್ರೇಯಸಿ ಈಗೆಲ್ಲಿದಾಳೆ? ಏನ್‌ ಮಾಡ್ತಿದಾಳೆ?

ಸಲ್ಮಾನ್‌ ಖಾನ್‌ನ ಇತ್ತೀಚಿನ ಪ್ರೇಯಸಿ, ರೊಮೇನಿಯಾದ ಲುಲಿಯಾ ವಂಟೂರ್‌ ಇತ್ತೀಚೆಗೆ ಸಲ್ಮಾನ್‌ ಜೊತೆಗೆ ಕಾಣಿಸ್ತಿಲ್ಲ. ಎಲ್ಲಿ ಹೋದಳು? ಇಬ್ಬರ ಮಧ್ಯೆ ಬ್ರೇಕಪ್‌ ಆಯ್ತಾ? ಈ ಕುರಿತ ರೋಚಕ ಮಾಹಿತಿ ಬಹಿರಂಗವಾಗಿದೆ.

ಪ್ರೀಪೆಯ್ಡ್ ಮೊಬೈಲ್ ರೀಚಾರ್ಜ್ ಚಿಂತೆ ಬಿಡಿ; ಗೂಗಲ್ ತಂದಿದೆ ಹೊಸ ಫೀಚರ್!

ಒಂದು ಅಂದಾಜಿನ ಪ್ರಕಾರ  ಭಾರತದಲ್ಲಿ ಸುಮಾರು 1.1 ಬಿಲಿಯನ್ ಮೊಬೈಲ್ ಸಂಪರ್ಕಗಳಿವೆ. ಅದರಲ್ಲಿ ಶೇ.95 ಪ್ರೀಪೆಯ್ಡ್ ಸಂಪರ್ಕಗಳೇ!ಮೊಬೈಲ್ ರೀಚಾರ್ಜ್ ಮಾಡೋ ಮುನ್ನ, ಯಾವ ಪ್ಲಾನ್ ಹಾಕಿಸ್ಕೊಳ್ಳಬೇಕು,  ಏನಾದ್ರೂ ಆಫರ್ ಇದೆಯಾ? ಯಾವ ಆಫರ್ ಚೆನ್ನಾಗಿದೆ ಎಂದು ಒಂದು ಕ್ಷಣ ಯೋಚಿಸೋದು ಸಾಮಾನ್ಯ. ಇದೀಗ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. 

ಹೊಸ ಟ್ಯಾಕ್ಸ್ ಸ್ಲ್ಯಾಬ್ ದರ: ಈಗ CA ಸಹಾಯವಿಲ್ಲದೇ ITR ಮಾಡಬಹುದು!

ಮುಂದಿನ ವರ್ಷ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಅಥವಾ ಇನ್ನಾವುದೇ ವೃತ್ತಿಪರರ ಸಹಾಯದ ಅಗತ್ಯವಿರುವುದಿಲ್ಲ ಎಂದು ನಿರೀಕ್ಷಿಸಲಾಗಿದೆ. ಹೌದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ನೂತನ ಆದಾಯ ತೆರಿಗೆ ಸ್ಲ್ಯಾಬ್ ಗಳನ್ನ ಪರಿಚಯಿಸಿದ್ದಾರೆ.

ಒಂದೇ ದಿನ 1 ಲಕ್ಷ ಜನ ಭೇಟಿ, ದಾಖಲೆ ಬರೆದ Auto Expo 2020

ಭಾರತ ಅತೀ ದೊಡ್ಡ ಅಟೋ ಎಕ್ಸ್ಪೋ 2020 ಹೊಸ ದಾಖಲೆ ಬರೆದಿದೆ. ಬರೋಬ್ಬರಿ 30 ಬ್ರ್ಯಾಂಡ್ ಆಟೋಮೊಬೈಲ್ ಕಂಪನಿಗಳು ಪಾಲ್ಗೊಂಡಿರುವ ಈ ಆಟೋ ಎಕ್ಸ್ಪೋದಲ್ಲಿ 70 ವಾಹನಗಳು ಅನಾವರಣಗೊಂಡಿದೆ. ವಾಹನ ಅನಾವರಣದ ನಡುವೆ ಆಟೋ ಎಕ್ಸ್ಪೋ 2020 ಹೊಸ ಇತಿಹಾಸ ನಿರ್ಮಿಸಿದೆ.

ಹುಬ್ಬಳ್ಳಿಯಲ್ಲಿ ಸಿಎಂ ಮರಿ ಮೊಮ್ಮಗಳ ನಾಮಕರಣ: BSY ಭಾಗಿ

ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮರಿ ಮೊಮ್ಮಗಳ ನಾಮಕರಣ ಕಾರ್ಯಕ್ರಮ ನಡೆದಿದೆ. ತಮ್ಮ ಮಗಳು ಪದ್ಮಾವತಿ ಹಾಗೂ ಅಳಿಯ ವಿರೂಪಾಕ್ಷಪ್ಪ ಅವರ ಮಗ ಶಶಿಧರ ಯಮಕನಮರಡಿ ಅವರ ಮಗಳ ನಾಮಕರಣದಲ್ಲಿ ಪಾಲ್ಗೊಂಡು ಕುಟುಂಬಸ್ಥರ ಜತೆ ಕೆಲಕ್ಷಣ ಕಳೆದರು. ಮೊಮ್ಮಗಳಿಗೆ ನೈರಾ ಎಂದು ನಾಮಕಾರಣ ಮಾಡಲಾಯಿತು.

click me!