ಕಷ್ಟದಲ್ಲಿರುವವರಿಗೆ BSY ಸಹಾಯಧನ, ಕೋಟಿಗೊಬ್ಬ ಹಾಡು ಮೆಚ್ಚಿನ ಜನ: ಮೇ.06ರ ಟಾಪ್ 10 ಸುದ್ದಿ!

By Suvarna NewsFirst Published May 6, 2020, 5:05 PM IST
Highlights

ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ರೈತರು, ಹೂ ಬೆಳೆಗಾರರು, ಕ್ಷೌರಿಕರು, ಚಾಲಕರು ಸೇರಿದಂತೆ ವಿವಿಧ ಕ್ಷೇತ್ರದ ಜನರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ 1610 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಪ್ರಧಾನಿ ಮೋದಿ ಕ್ರಮಗಳನ್ನು ಶೇಕಡಾ 87 ರಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಹೆಚ್ಚಳ ಮಾಡಲಾಗಿದೆ. ಕೋಟಿಗೊಬ್ಬ 3 ಹಾಡು ದಾಖಲೆ ವೀಕ್ಷಣೆ, ಸರ್ಕಾರ ಅನುಮತಿ ನೀಡಿದರೂ ಶೂಟಿಂಗ್ ಆರಂಭಿಸಲು ಸಂಘ ಹಿಂದೇಟು ಸೇರಿದಂತೆ ಮೇ.06ರ ಟಾಪ್ 10 ಸುದ್ದಿ ಇಲ್ಲಿವೆ.

ಕೋಲಾರ: ಕುಡಿದ ಮತ್ತಿನಲ್ಲಿ ಹಾವನ್ನು ಬಾಯಿಯಿಂದಲೇ ಕಚ್ಚಿ ತಿಂದವ ಅರೆಸ್ಟ್..!...

ಹಾವು ಮನುಷ್ಯನಿಗೆ ಕಚ್ಚಿದರೆ ಸುದ್ದಿಯಲ್ಲ, ಮನುಷ್ಯನೇ ಹಾವಿಗೆ ಕಚ್ಚಿದರೆ ಸುದ್ದಿ ಎನ್ನುವುದನ್ನು ಜರ್ನಾಲಿಸಂ ಪಾಠದಲ್ಲಿ ಹೇಳಲಾಗುತ್ತಿದೆ. ಅದರಂತೆ ಇಲ್ಲೊಬ್ಬ ಕುಡಿದ ಆಮಾಲಿನಲ್ಲಿ ಕೈಗೆಸಿಕ್ಕಂತ ಹಾವನ್ನೇ ತಿಂದಿದ್ದವನನ್ನು ಅರಣ್ಯಾಧಿಗಳು ಬಂಧಿಸಿದ ಜೈಲಿಗಟ್ಟಿದ್ದಾರೆ. 


ಕೊರೋನಾ ನಿರ್ವಹಣೆ ಪ್ರಧಾನಿ ಮೋದಿಗೆ ಶೇ.87 ನಗರ ಜನರ ಬಹುಪರಾಕ್‌!...

ದೇಶಾದ್ಯಂತ ಲಾಕ್‌ಡೌನ್‌ ಸೇರಿದಂತೆ ಕೊರೋನಾ ನಿಗ್ರಹಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡಿರುವ ಕ್ರಮಗಳ ಬಗ್ಗೆ ದೇಶದ ನಗರ ಪ್ರದೇಶಗಳ ಶೇ.87ರಷ್ಟುಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂಬ ಸಂಗತಿ ಸಮೀಕ್ಷೆಯೊಂದರಿಂದ ತಿಳಿದುಬಂದಿದೆ.

ಮೇ 31ರವರೆಗೆ ಲಾಕ್‌ಡೌನ್ ವಿಸ್ತರಿಸಿದ ರಾಜ್ಯ!...

ದೇಶವ್ಯಾಪಿ ಕೊರೋನಾ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹೀಗಿರುವಾಗ ಕೇಂದ್ರ ಸರ್ಕಾರ ಮೂನೇ ಹಂತದ ಲಾಕ್‌ಡೌನ್ ಮೇ 17ರವರೆಗೆ ವಿಸ್ತರಿಸಿದೆ. ಇದರೊಂದಿಗೆ ಕೊಂಚ ಸಡಿಲಿಕೆ ಕೂಡಾ ನೀಡಿದೆ. ಆದರೀಗ ಕೆಲ ರಾಜ್ಯಗಳು ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದು, ಲಾಕ್‌ಡೌನ್ ಅವಧಿಯನ್ನು ವಿಸ್ತರಿಸಿವೆ. ಈವರೆಗೂ ಕೊರೋನಾ ನತಡೆಯುವ ಲಸಿಕೆ ಲಭ್ಯವಾಗದಿರುವ ಹಿನ್ನೆಲೆ, ಸೋಂಕಿತರನ್ನು ಸಂಪರ್ಕಿಸದಿರುವುದು ಹಾಗೂ ಸಾಮಾಜಿಕ ಅಂತರವಷ್ಟೇ ಕೊರೋನಾದಿಂದ ಪಾರು ಮಾಡಲಿದೆ.


1610 ಕೋಟಿ ಪ್ಯಾಕೇಜ್: ಆಟೋ ರಿಕ್ಷಾ, ಕ್ಷೌರಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ!...

ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ಆಯ್ದ ಕ್ಷೇತ್ರಕ್ಕೆ ಸಹಾಯಧನ ನೀಡಿಕೆ ವಿಚಾರವಾಗಿ ಲಾಕ್‌ಡೌನ್‌ ಸಡಿಲಿಕೆ ವಿಚಾರವಾಗಿ ಸಿಎಂ ಯಡಿಯೂರಪಪ್ಪ ಮಹತ್ವದ ಸುದ್ದಿಗೋಷ್ಟಿ ನಡೆಸಿದ್ದು, 1610 ಕೋಟಿ ಪ್ಯಾಕೇಜ್ ಘೋಷಿಸಿದ್ದಾರೆ. ಆಟೋ ರಿಕ್ಷಾ, ಕ್ಷೌರಿಕರಿಗೆ, ಹೂವು, ತರಕಾರಿ ಹಣ್ಣು ಬೆಳೆಗಾರರಿಗೆ ವಿಶೇಷ ನೆರವು ಘೋಷಿಸಿದ್ದಾರೆ.  


ಟೀಂ ಇಂಡಿಯಾ ಬೌಲಿಂಗ್‌ ಕೋಚ್‌ ಆಗುವಾಸೆ ಎಂದ ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್

ಭಾರತ ಕ್ರಿಕೆಟ್‌ ತಂಡದ ಬೌಲಿಂಗ್‌ ಕೋಚ್‌ ಆಗುವ ಆಸೆ ಇದೆ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್‌ ಅಖ್ತರ್‌ ಹೇಳಿದ್ದಾರೆ. 

5.5 ಮಿಲಿಯನ್ ಹಿಟ್ಸ್ ದಾಟಿದ ಕೋಟಿಗೊಬ್ಬ-3 ಸಿನಿಮಾದ ಟೈಟಲ್ ಸಾಂಗ್

ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರದ ಮೊದಲ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ 5.5 ಮಿಲಿಯನ್ ವೀಕ್ಷಣೆ ಪಡೆದಿದೆ. 

ಪೆಟ್ರೋಲ್, ಡೀಸೆಲ್ ಮೇಲಿನ ಸೀಮಾ ಸುಂಕ ಹೆಚ್ಚಳ; ಗ್ರಾಹಕರಿಗಿಲ್ಲ ಹೊರೆ!...

ಒಂದೆಡೆ ಕೊರೋನಾ ವೈರಸ್ ವಿರುದ್ಧ ಹೋರಾಟ, ಮತ್ತೊಂದೆಡೆ ಪಾತಾಳಕ್ಕೆ ಕುಸಿದಿರುವ ಆರ್ಥಿಕತೆ ಸರಿದೂಗಿಸುವ ಹರಸಾಹಸದ ನಡುವೆ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸೀಮಾ ಸುಂಕ ಹೆಚ್ಚಿಸಿದೆ. ಮಂಗಳವಾರ ಮಧ್ಯ ರಾತ್ರಿಯಿಂದಲೇ(ಮೇ.06) ಸುಂಕ ಹೆಚ್ಚಳ ಆದೇಶ ಜಾರಿಯಾಗಲಿದೆ.

ಪಾಕ್ ವಾಯುಸೇನೆಯಲ್ಲಿ ಮೊದಲ ಹಿಂದೂ ಪೈಲಟ್, 26ರ ಯುವಕನ ಕಮಾಲ್!...

ಸೋಶಿಯಲ್ ಮೀಡಿಯಾದಲ್ಲಿ ಕಳೆದೆರಡು ದಿನಗಳಿಂದ ರಾಹುಲ್ ದೇವ್ ಎಂಬ ಹೆಸರು ಭಾರೀ ವೈರಲ್ ಆಗಿದೆ. ಈ 26 ವರ್ಷದ ಯುವಕ ನೆರೆ ರಾಷ್ಟ್ರ ಪಾಕಿಸ್ತಾನದ ವಾಯುಸೇನೆಯಲ್ಲಿ ಪೈಲಟ್ ಆಗಿ ನೇಮಕಗೊಂಡಿದ್ದಾನೆ. ಈ ಮೂಲಕ ಮುಸ್ಲಿಂ ರಾಷ್ಟ್ರ ಪಾಕಿಸ್ತಾನ ಏರ್‌ಫೋರ್ಸ್‌ನಲ್ಲಿ ಪೈಲಟ್ ಆದ ಮೊದಲ ಹಿಂದೂ ಯುವಕ ಎನಿಸಿಕೊಂಡಿದ್ದಾನೆ.  


ಈಕೆ ವಿದ್ಯಾರ್ಥಿನಿ, ತುಂಬು ಗರ್ಭಿಣಿ... ತಿಹಾರ್ ಜೈಲು ಸೇರಿ ಮೂರು ವಾರ!...

ಜಾಮೀಯಾ ಮಿಲಿಯಾ ಇಸ್ಲಾಮೀಯಾ ವಿವಿ ವಿದ್ಯಾರ್ಥಿನಿ ಸಫೋರಾ ಜಾರ್ಗರ್ (27)  ಜೈಲು ಸೇರಿ ಮೂರು ವಾರಗಳು ಕಳೆದಿವೆ.  ಆಕೆ ತುಂಬು ಗರ್ಭಿಣಿ. 
ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡ ಆರೋಪದಲ್ಲಿ ಆಕೆಯನ್ನು ಬಂಧಿಸಿ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.   ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿ ಆಕೆಯನ್ನು ಬಂಧನ ಮಾಡಲಾಗಿದ್ದು ಗಂಡ ಮಂಗಳವಾರ ಎರಡನೇ ಸಾರಿ  ಮಾತನಾಡಿದ್ದಾರೆ.

ಸರಕಾರಿ ಅನುಮತಿಸಿದರೂ ಒಪ್ಪದ ಸಂಘ, ಸೀರಿಯಲ್ ಶೂಟಿಂಗ್ ಸದ್ಯಕ್ಕಿಲ್ಲ

ಕಿರುತೆರೆ ಉದ್ಯಮ ಲಾಕ್‌ಡೌನ್‌ ಸಂಕಷ್ಟದಿಂದ ಪಾರಾಗಿದೆ. ಕೊರೋನಾದಿಂದ ಮನೆ ಸೇರಿಕೊಂಡಿದ್ದ ಧಾರಾವಾಹಿ ತಂಡಗಳು ಈಗ ಶೂಟಿಂಗ್‌ ಮೈದಾನಕ್ಕೆ ಇಳಿಯುವ ತಯಾರಿ ಮಾಡಿಕೊಳ್ಳುತ್ತಿವೆ. ಮೇ 11 ರಿಂದ ಧಾರಾವಾಹಿಗಳ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ಕೊಟ್ಟಿದ್ದು, ಕಿರುತೆರೆ ಮಂದಿ ಶೂಟಿಂಗ್‌ಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಶೀಘ್ರವೇ ಧಾರಾವಾಹಿ ಪ್ರಿಯರು ಹೊಸ ಎಪಿಸೋಡುಗಳನ್ನು ನೋಡಬಹುದಾಗಿದೆ.
 

click me!