
ನವದೆಹಲಿ(ಮೇ.06): ಚೀನಾದಿಂದ ವಿಶ್ವಕ್ಕೇ ವ್ಯಾಪಿಸಿರುವ ಕೊರೋನಾ ವೈರಸ್ ವೇಗವಾಗಿ ಹಬ್ಬಲಾರಂಭಿಸಿದೆ. ಬಲಿಷ್ಟ ರಾಷ್ಟ್ರಗಳೇ ಇದರೆದುರು ಶರಣಾಗಿವೆ ಎಂಬುವುದರಿಂದಲೇ ಇದು ಸೃಷ್ಟಿಸಿರುವ ಆತಂಕ ಎಷ್ಟು ಎಂಬುವುದನ್ನು ಅಂದಾಜು ಮಾಡಬಹುದು. ಇವೆಲ್ಲದರ ನಡುವೆ ಭಾರತ ಕೊರೋನಾ ವಿರುದ್ಧ ಸಮರ ಸಾರಿದೆ. ಪಿಎಂ ನರೇಂದ್ರ ಮೋದಿ ಭಾರತವನ್ನು ಈ ಸಮರದಲ್ಲಿ ಜಯಶಾಲಿಯಾಗಿಸುವುದರೊಂದಗೆ, ಇತರ ರಾಷ್ಟ್ರಗಳನ್ನೂ ಈ ಸಂಕಟದಿಂದ ಪಾರು ಮಾಡಲು ಯತ್ನಿಸುತ್ತಿದ್ದಾರೆ.
ಪಿಎಂ ಮೋದಿ ಹೇಗೆ ದೇಶದಲ್ಲಿ ಕೊರೋನಾ ವೈರಸ್ ಸರಪಳಿ ತುಂಡರಿಸಲು ಆರಂಭದಲ್ಲೇ ಲಾಕ್‌ಡೌನ್ ಘೋಷಿಸಿದರು, ಕೊರೋನಾ ಯೋಧರಲ್ಲಿ ವಿಶ್ವಾಸ ಹೆಚ್ಚಿಸಲು ಚಪ್ಪಾಳೆ ಮೊದಲಲಾದ ಪ್ರಯೋಗಗಳನ್ನು ಮಾಡಿದರೋ ಆ ಕುರಿತು ವಿಶ್ವಾದ್ಯಂತ ಚರ್ಚೆಯಾಗುತ್ತಿದೆ. ಹೀಗಿರುವಾಗ ಆಸ್ಟ್ರೇಲಿಯಾದ ಭಾರತದ ರಾಯಭಾರಿ ಬೈರಿ ಓ ಫೈರಲ್ ಪಿಎಂ ಮೋದಿಯನ್ನು ಸೂಪರ್ ಹ್ಯೂಮನ್(ಅದ್ಭುತ ಶಕ್ತಿಯುಳ್ಳ ಮನುಷ್ಯ) ಎಂದು ಕರೆದಿದ್ದಾರೆ.
ಸರ್ಕಾರಿ ವಾಹಿನಿ ಡಿಡಿ ಇಂಡಿಯಾಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಬೈರಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಓರ್ವ ಸೂಪರ್ ಹ್ಯೂಮನ್‌ರಂತೆ. ಮೋದಿ ಯಾವ ರೀತಿ ಕೊರೋನಾ ಸಮರದಲ್ಲಿ ಹೋರಾಡುತ್ತಿದ್ದಾರೋ ಅದು ಶ್ಲಾಘನೀಯ. ಮೋದಿ ಜನಸಂಖ್ಯೆಯಲ್ಲಿ ವಿಶ್ವದ ಎರಡನೇ ಅತಿದೊಡ್ಡ ರಾಷ್ಟ್ರವಾಗಿರುವ ಭಾರತದ ಪಗ್ರಧಾನಿ. ಇಂತಹ ಸಂಕಟದ ಸಮಯದಲ್ಲಿ ಯಾವ ರೀತಿ ಅವರು ಪ್ರತಿದಿನ ವಿಶ್ವದ ಇತರ ರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆ ನಡೆಸಲು ಸಮಯ ಉಳಿಸುತ್ತಾರೋ ಅದು ಶ್ಲಾಘನೀಯ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ