ಹನುಮಂತಪ್ಪ ಕೊಪ್ಪದ್‌ ಮಾದರಿ ಹಿಮದಡಿ ಸಿಕ್ಕಿಬಿದ್ದ ಬಾಲಕನ ರಕ್ಷಣೆ

By Web DeskFirst Published Dec 28, 2018, 9:16 AM IST
Highlights

ಹನುಮಂತಪ್ಪ ಕೊಪ್ಪದ್‌ ಮಾದರಿ ಹಿಮದಡಿ ಸಿಕ್ಕಿಬಿದ್ದ ಬಾಲಕನ ರಕ್ಷಣೆ | ಇದೇ ರೀತಿಯ ಘಟನೆಯೊಂದು ಫ್ರಾನ್ಸ್‌ನ ಆಲ್ಫ್ ಪರ್ವತ ಶ್ರೇಣಿಯಲ್ಲಿ ನಡೆದಿದೆ | 

ಪ್ಯಾರಿಸ್‌ (ಡಿ. 28): 2016 ರಲ್ಲಿ ಕನ್ನಡಿಗ ಹನುಮಂತಪ್ಪ ಕೊಪ್ಪದ್‌ ಸಿಯಾಚಿನ್‌ ಪರ್ವತದಲ್ಲಿ 35 ಅಡಿ ಆಳದಲ್ಲಿ ಹಿಮದಡಿ 6 ದಿನ ಸಿಕ್ಕಿಹಾಕಿಕೊಂಡು, ಕೊನೆಗೆ ಜೀವ ಸಮೇತ ಹೊರಬಂದು, ಬಳಿಕ ನಿಧನರಾಗಿದ್ದ ಸುದ್ದಿ ಎಲ್ಲರಿಗೂ ಗೊತ್ತು. ಹೆಚ್ಚು ಕಡಿಮೆ ಇದೇ ರೀತಿಯ ಘಟನೆಯೊಂದು ಫ್ರಾನ್ಸ್‌ನ ಆಲ್ಫ್ ಪರ್ವತ ಶ್ರೇಣಿಯಲ್ಲಿ ನಡೆದಿದೆ.

ಇಲ್ಲಿನ ಲಾ ಪ್ಲೇಗ್ನೆ ರೆಸಾರ್ಟ್‌ನಲ್ಲಿ ಸ್ಕೀಯಿಂಗ್‌ ಮಾಡುತ್ತಿದ್ದ 12 ವರ್ಷದ ಬಾಲಕನೊಬ್ಬನ ಮೇಲೆ ಏಕಾಏಕಿ ಹಿಮ ಕುಸಿದು ಬಿದ್ದಿತ್ತು. ಪರಿಣಾಮ ಆತ 100 ಮೀಟರ್‌ ದೂರದವರೆಗೆ ಹಿಮದಲ್ಲಿ ಕೊಚ್ಚಿ ಹೋಗಿ ಕೊನೆಗೆ ಹಿಮದಾಳದಲ್ಲಿ ಸಿಕ್ಕಿಹಾಕಿಕೊಂಡಿದ್ದ.

ಹೀಗೆ ಆತ 40 ನಿಮಿಷ ಹಿಮದಡಿಯಲ್ಲಿ ಸಿಕ್ಕಿಬಿದ್ದರೂ, ಜೀವ ಉಳಿಸಿಕೊಂಡಿದ್ದ. ಅಷ್ಟರಲ್ಲಿ ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ಆತನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಿಮದಾಳದಲ್ಲಿ 15 ನಿಮಿಷಕ್ಕಿಂತ ಹೆಚ್ಚಿನ ಸಮಯ ಬದುಕುವುದು ಕಷ್ಟ. ಹೀಗಾಗಿ ಇದೊಂದು ಪವಾಡವೇ ಸರಿ ಎಂದು ರಕ್ಷಣಾ ಸಿಬ್ಬಂದಿ ಹರ್ಷಿಸಿದ್ದಾರೆ.

click me!