
ಬಿಹಾರ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ಬಿಗ್ ಶಾಕ್!...
ಒಂದೆಡೆ ಕೊರೋನಾ ಅಟ್ಟಹಾಸ ದೇಶಾದ್ಯಂತ ಜನರನ್ನು ಕಂಗೆಡಿಸಿದೆ. ಹೀಗಿರುವಾಗಲೇ ಬಿಹಾರ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ. ಬಿಜೆಪಿ ಹಾಗೂ ನಿತೀಶ್ ಕುಮಾರ್ ಈ ಚುನಾವಣೆಯಲ್ಲಿ ಗೆಲ್ಲಲು ಎಲ್ಲಾ ರೀತಿಯ ಯತ್ನ ನಡೆಸುತ್ತಿದೆ. ಹೀಗಿರುವಾಗಲೇ ಇತ್ತ ಯುಪಿಎ ಕೂಡಾ ಚುನಾವಣೆಯಲ್ಲಿ ಗೆಲ್ಲಲು ಎಲ್ಲಾ ರೀತಿಯ ಕಸರತ್ತು ನಡೆಸುತ್ತಿದೆ. ಆದರೀಗ ಈ ಎಲ್ಲಾ ಪೈಪೋಟಿಯ ನಡುವೆ ಬಿಜೆಪಿಗೆ ಬಹುದೊಡ್ಡ ಆಘಾತಕಾರಿ ಸುದ್ದಿ ಬಂದೆರಗಿದೆ.
ಗಡಿಗೆ ಸನಿಹದಲ್ಲಿ ಚೀನಾದಿಂದ ಬೃಹತ್ ಕಟ್ಟಡಗಳ ನಿರ್ಮಾಣ!...
ಭಾರತದ ಜತೆಗೆ ಸಂಘರ್ಷದ ವಾತಾವರಣ ಮುಂದುವರಿದಿರುವಾಗಲೇ, ಚೀನಾ ಸೇನೆ ಅಕ್ಸಾಯ್ ಚಿನ್ ಪ್ರದೇಶದಲ್ಲಿ ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯಿಂದ ಕೇವಲ 10 ಕಿ.ಮೀ. ದೂರದಲ್ಲಿ 4 ಫುಟ್ಬಾಲ್ ಮೈದಾನದಷ್ಟುದೊಡ್ಡದಾದ ಪ್ರದೇಶದಲ್ಲಿ ಬೃಹತ್ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿದೆ.
ಕರ್ನಾಟಕ ಸೇರಿ 16 ರಾಜ್ಯಕ್ಕೆ 6000 ಕೋಟಿ ಜಿಎಸ್‌ಟಿ ಸಾಲ!...
ಕೊರೋನಾ ಸಂಕಷ್ಟದಿಂದಾಗಿ ಯೋಜಿತ ರೀತಿಯಲ್ಲಿ ಜಿಎಸ್‌ಟಿ ಸಂಗ್ರಹವಾಗದೆ ಸಮಸ್ಯೆ ಎದುರಿಸುತ್ತಿದ್ದ ಕರ್ನಾಟಕ ಸೇರಿದಂತೆ 16 ರಾಜ್ಯಗಳಿಗೆ ಕೇಂದ್ರ ಸರ್ಕಾರ ಒಟ್ಟಾರೆ 6000 ಕೋಟಿ ರು. ಸಾಲದ ನೆರವು ಒದಗಿಸಿದೆ. ರಾಜ್ಯಗಳ ಹೆಸರಿನಲ್ಲಿ ಮಾರುಕಟ್ಟೆಯಿಂದ ಸಾಲ ಪಡೆದಿರುವ ಕೇಂದ್ರ ಸರ್ಕಾರ, ಆ ಹಣವನ್ನು ಇದೀಗ ರಾಜ್ಯಗಳಿಗೆ ವರ್ಗಾಯಿಸಿದೆ.
ಬಿಗ್‌ಬ್ಯಾಶ್ ಲೀಗ್‌ನಲ್ಲಿ ಆಡ್ತಾರಂತೆ ಧೋನಿ, ರೈನಾ?...
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ಎಂ ಎಸ್ ಧೋನಿ, ಸುರೇಶ್ ರೈನಾ, ಯುವರಾಜ್ ಸಿಂಗ್ ಈ ಬಾರಿಯ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.
ಎಲ್ಲೋದ್ರು ಬಿಗ್ ಬಾಸ್ ಶ್ರುತಿ ಪ್ರಕಾಶ್? ಈ ಫೋಟೋ ವೈರಲ್!...
ಬಿಗ್ ಬಾಸ್ ಸೀಸನ್ 5ರಲ್ಲಿ ಸಿಕ್ಕಾಪಟ್ಟೆ ಫೇಮಸ್ ಆದ ಗಾಯಕಿ ಕಮ್ ನಟಿ ಶ್ರುತಿ ಪ್ರಕಾಶ್ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ, ಅವರ ಕೈಯಲ್ಲಿ ಯಾವ ಸಿನಿಮಾಗಳಿವೆ?
ಟ್ಯಾಟೂ ಹಾಕಿಸ್ತಿದೀರಾ? ಆರೋಗ್ಯದ ಮೇಲೆ ಈ ದುಷ್ಪರಿಣಾಮ ಬೀರ್ಬಹುದು!...
ಟ್ಯಾಟೂ ಹಾಕಿಸ್ತಿದೀರಾ? ಹಾಕಿದ್ರೆ ಈ ಸುದ್ದಿನಾ ನೀವು ಓದಲೇ ಬೇಕು. ಟ್ಯಾಟೂ ಹಾಕಿಸಿದರೆ ಸ್ಟೈಲಿಶ್ ಆಗಿ ಕಾಣಿಸಬಹುದು. ಆದರೆ ಇದರಿಂದ ಅರೋಗ್ಯ ಸಮಸ್ಯೆಗಳು ಸಹ ಕಂಡು ಬರುತ್ತದೆ.ಟ್ಯಾಟೂ ನೈಸರ್ಗಿಕ ಬೆವರುವಿಕೆಯನ್ನು ದುರ್ಬಲಗೊಳಿಸಬಹುದು ಎಂದು ಯುಎಸ್ ನ ಟೆಕ್ಸಾಸ್ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಹಿಡಿದಿದ್ದಾರೆ, ಇದು ದೇಹದ ದೊಡ್ಡ ಪ್ರದೇಶವನ್ನು ಆವರಿಸಿದರೆ ದೇಹವು ಹೆಚ್ಚು ಬಿಸಿಯಾಗಲು ಕಾರಣವಾಗಬಹುದು.
ಹೊಚ್ಚ ಹೊಸ BMW G310 R ಮತ್ತು BMW 310 GS ಬೈಕ್ ಬಿಡುಗಡೆ!...
ಸ್ಟೈಲೀಷ್ ಡಿಸೈನ್, ದಕ್ಷ ಎಂಜಿನ್ ಹೊಂದಿರುವ BMW G310 R ಮತ್ತು BMW 310 GS ಬೈಕ್ ಬಿಡುಗಡೆಯಾಗಿದೆ. ಕೇವಲ 4500 ರೂಪಾಯಿ ಮಾಸಿಕ ಕಂತಿನಲ್ಲಿ ಹೊಚ್ಚ ಹೊಸ ಬೈಕ್ ನಿಮ್ಮದಾಗಿಸುವ ಅವಕಾಶವೂ ಇದೆ.
ಚಿಲ್ಲರೆ ವ್ಯಾಪಾರಿಗಳು 2 ಟನ್‌ಗಿಂತ ಅಧಿಕ ಈರುಳ್ಳಿ ಇಡುವಂತಿಲ್ಲ!...
ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳು ಹೊಂದುವ ಈರುಳ್ಳಿ ದಾಸ್ತಾನಿನ ಮೇಲೆ ಮಿತಿ ಹೇರಿದೆ.
ಡಿಕೆಶಿ ಭರ್ಜರಿ ಗಾಳ: ಜೆಡಿಎಸ್‌ನ ಮತ್ತಷ್ಟು ನಾಯಕರು ಕಾಂಗ್ರೆಸ್ ಸೇರ್ಪಡೆ..!...
ಆರ್.ಆರ್.ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ವೇಳೆ ಪಕ್ಷಾಂತರ ಪರ್ವ ಜೋರಾಗಿದ್ದು, ಡಿಕೆಶಿ ಮೇಲಿಂದ ಮೇಲೆ ಜೆಡಿಎಸ್ ಪಕ್ಷದ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ.
ಬೆಂಗಳೂರು ಮಳೆ: ಮನೆ ಕಳೆದುಕೊಂಡ ಪ್ರತಿ ಕುಟುಂಬಕ್ಕೂ 25 ಸಾವಿರ ರೂ ಪರಿಹಾರ...
ಮಳೆಯಲ್ಲಿ ಮನೆಗಳನ್ನು ಕಳೆದುಕೊಂಡ ಪ್ರತಿ ಕುಟುಂಬಕ್ಕೂ 25 ಸಾವಿರ ರೂ ಕೊಡಲು ತೀರ್ಮಾನಿಸಲಾಗಿದೆ. ಇವತ್ತು ನಾಳೆ ಮಳೆ ಬಿದ್ರೆ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಚರ್ಚಿಸಿದ್ದೇವೆ. ಶಾಶ್ವತ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದ್ದೇನೆ. ಇನ್ನು ಸಂಪೂರ್ಣವಾಗಿ ಮನೆ ಕಳೆದುಕೊಂಡವರ ಜಾಗ ನೋಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ' ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.