
ಕೇವಲ 10 ದಿನದಲ್ಲಿ ಕೊರೋನಾ ಕಂಟ್ರೋಲ್, ದೀಪಾವಳಿ ಮುನ್ನ ಸಿಎಂ ಭರವಸೆ!...
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ದೀಪಾವಳಿಗೂ ಒಂದು ದಿನ ಮೊದಲು ಡಿಜಿಟಲ್ ಪ್ರೆಸ್ ಕಾನ್ಫರೆನ್ಸ್ ನಡೆಸಿ ರಾಷ್ಟ್ರೀಯ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳಿಗೆ ವಾಯು ಮಾಲಿನ್ಯ ಪ್ರಮುಖ ಕಾರಣ ಎಂದಿದ್ದಾರೆ.
ಜೈಲಿನಲ್ಲಿ ನಾನಿದ್ದ ಕೋಣೆ, ಸ್ನಾನದ ಕೊಠಡಿಯಲ್ಲೂ ಕ್ಯಾಮೆರಾ ಇಟ್ಟಿದ್ರು: ಮಾಜಿ ಪಿಎಂ ಪುತ್ರಿ ಆರೋಪ!...
ಪಾಕಿಸ್ತಾನ ಮಾಜಿ ಪ್ರಧಾನ ಮಂತ್ರಿ ನಾವಜ್ ಷರೀಫ್ ಮಗಳು ಹಾಗೂ ಅವರ ಪಕ್ಷ ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್‌ನ ಉಪಾಧ್ಯಕ್ಷೆ ಮರಿಯಮ್ ನವಾಜ್ ಷರೀಫ್ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ತಾನು ಜೈಲಿನಲ್ಲಿದ್ದಾಗ ಅಧಿಕಾರಿಗಳು ತನ್ನ ಸೆಲ್ ಹಾಗೂ ಬಾತ್‌ರೂಂಗೆ ಕ್ಯಾಮೆರಾ ಅಳವಡಿಸಿದ್ದರು ಎಂದು ಆರೋಪಿಸಿದ್ದಾರೆ. ಮರಿಯಮ್ ಓರ್ವ ಸಂಸದೆಯೂ ಹೌದು.
ದೀಪಾವಳಿ ಕೊನೆಯ ದಿನ ಬಲಿಪಾಡ್ಯದಂದು ನಿತೀಶ್ ಪ್ರಮಾಣ?...
ನಿತೀಶ್ ಕುಮಾರ್ ಅವರು ದೀಪಾವಳಿಯ ಕೊನೆಯ ದಿನವಾದ ಬಲಿಪಾಡ್ಯಮಿ (ನವೆಂಬರ್ 16) ದಿನದಂದು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.
ನಿಮ್ಮ ಪ್ರೀತಿಗೆ ಸದಾ ಅಭಾರಿ, ಮತ್ತೆ ಹುಟ್ಟಿ ಬರ್ತೇನೆ ಕಾಯ್ತಿರಿ...!...
ಕರ್ನಾಟಕದ ಖ್ಯಾತ ಪತ್ರಕರ್ತ, ಬರಹಗಾರ ರವಿ ಬೆಳಗೆರೆ ಶುಕ್ರವಾರ ತಡರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಹಾಯ್ ಬೆಂಗಳೂರು ಪತ್ರಿಕೆ ಮೂಲಕವೇ ಕರುನಾಡ ಮಂದಿಗೆ ಚಿರಪರಿಚಿತರಾದ ರವಿ ಬೆಳಗೆರೆ ಬಳಿಕ ಓ ಮನಸೇ ಮೂಲಕ ಜನಪ್ರಿಯಾಗಿದ್ದರು. ಕಾದಂಬರಿ,ಅನುವಾದ, ಜೀವನ ಕಥನ ಸೇರಿದಂತೆ ಇನ್ನಿತರ ಬರಹಗಳನ್ನು ಬರೆದಿದ್ದ ಬೆಳಗೆರೆಯವರ ಪುಸ್ತಕಗಳು ಅಚ್ಚರಿಯ ರೀತಿಯಲ್ಲಿ ಮಾರಾಟವಾಗುತ್ತಿದ್ದವು.
ಆಸ್ಪ್ರೇಲಿಯಾ ಸರಣಿಗೆ ಟೀಂ ಇಂಡಿಯಾ ರೆಟ್ರೋ ಜೆರ್ಸಿ...
ಆಸ್ಟ್ರೆಲಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಟೀಂ ಇಂಡಿಯಾ 1992 ರ ಕಾಲಘಟ್ಟದಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರು ತೊಡುತ್ತಿದ್ದ ಜೆರ್ಸಿಯ ಹೋಲಿಕೆಯ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ ಎಂದು ವರದಿಯಾಗಿದೆ.
ರಾಗಿಣಿ ಕಾರು ಮಾರಾಟ ಮಾಡ್ತಾರಾ ಪೋಷಕರು?...
ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಜೈಲು ಸೇರಿ 2 ತಿಂಗಳಾಗ್ತ ಬಂತು. ಆದರೂ ಇನ್ನೂ ಬೇಲ್ ಸಿಕ್ಕಿಲ್ಲ. ಮಗಳನ್ನು ಬಿಡಿಸಲು ತಂದೆ -ತಾಯಿ ಒದ್ದಾಡುತ್ತಿದ್ದಾರೆ.
ಇತಿಹಾಸದಲ್ಲಿ ಮೊದಲ ಬಾರಿ ಭಾರತದಲ್ಲಿ ಆರ್ಥಿಕ ಕುಸಿತ!...
ಕೊರೋನಾ ವೈರಸ್‌ನಿಂದಾಗಿ ದೇಶದ ಆರ್ಥಿಕ ಪ್ರಗತಿಯ ದರ ಸತತ 2ನೇ ತ್ರೈಮಾಸಿಕದಲ್ಲೂ ಋುಣಾತ್ಮಕ ಬೆಳವಣಿಗೆ ದಾಖಲಿಸುವುದು ದಟ್ಟವಾಗಿದ್ದು, ಅದರೊಂದಿಗೆ ಭಾರತವು ತಾಂತ್ರಿಕವಾಗಿ ‘ಆರ್ಥಿಕ ಹಿಂಜರಿಕೆ’ ಎಂದು ಗುರುತಿಸಲಾಗುವ ಘಟ್ಟವನ್ನು ಪ್ರವೇಶಿಸಿದಂತಾಗಿದೆ. ಇದು ದೇಶದ ಇತಿಹಾಸದಲ್ಲೇ ಮೊದಲ ಆರ್ಥಿಕ ಹಿಂಜರಿಕೆಯಾಗಿದೆ.
11 ಸಾವಿರಕ್ಕೆ ಬುಕ್ ಮಾಡಿ ನಿಸಾನ್ ಮ್ಯಾಗ್ನೈಟ್; ಭಾರತದ ಕಡಿಮೆ ಬೆಲೆಯ SUV ಕಾರು1...
ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಸಂಚಲನ ಮೂಡಿಸಲು ನಿಸಾನ್ ಮ್ಯಾಗ್ನೈಟ್ ರೆಡಿಯಾಗಿದೆ. ಭಾರತದಲ್ಲಿ ಲಭ್ಯವಿರುವ ಅತ್ಯಂತ ಕಡಿಮೆ ಬೆಲೆಯ SUV ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ನಿಸಾನ್ ಮ್ಯಾಗ್ನೈಟ್ ಕಾರಿನ ಬುಕಿಂಗ್ ಆರಂಭಗೊಂಡಿದೆ.
24ರ ಹರೆಯದ ಯುವತಿಯ ಸ್ನೇಹ ಬೆಳೆಸಿದ ತರುಣ : ನಿರಂತರ ಸಂಪರ್ಕದ ಬಳಿಕ ವಂಚಿಸಿದ...
ಫೇಸ್‌ಬುಕ್‌ನಲ್ಲಿ ಯುವತಿಯ ಸ್ನೇಹಗಳಿಸಿ ಆಕೆಯೊಂದಿಗೆ ತೀರ್ಥಯಾತ್ರೆ ನಡೆಸಿ ಅಲ್ಲಿ ಭಾವಚಿತ್ರ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಯುವಕನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.
ಅವರಿಬ್ಬರ ನಡುವೆ ನಡೆದಿತ್ತು ಅದೆಲ್ಲವೂ : ಆ ಫೋಟೊ ಇಟ್ಕೊಂಡು ತಿರುಗಿಬಿದ್ಲು ಆಕೆ...
ಅವರಿಬ್ಬರ ನಡುವೇ ಫೋನಲ್ಲೇ ಎಲ್ಲಾ ನಡೆದಿತ್ತು. ಬಳಿಕ ಅದನ್ನೇ ಇಟ್ಕೊಂಡು ಅವನ ಮೇಲೆ ತಿರುಗಿ ಬಿದ್ದಳು ಆಕೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.