ಸಂಪುಟ ವಿಸ್ತರಣೆ ಸಂಬಂಧ ಬಿಜೆಪಿ ಶಾಸಕರು ತಂಡವೊಂದು ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ರಹಸ್ಯ ಸಭೆ ನಡೆಸಿದೆ. ಈ ಸಭೆಯ ರೂವಾರಿಯ ಹೆಸರನ್ನ ಸ್ವತ ಸಿಎಂ ಬಿಎಸ್ ಯಡಿಯೂರಪ್ಪ ಬಹಿರಂಗ ಪಡಿಸಿದ್ದಾರೆ
ಬೆಂಗಳೂರು, (ನ.13): ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಗೆಲುವಿನ ಬೆನ್ನಲ್ಲೇ ಸಂಪುಟ ವಿಸ್ತರಣೆ ಸರ್ಕಸ್ ತೀವ್ರಗೊಂಡಿದೆ. ಶೀಘ್ರದಲ್ಲಿಯೇ ಬಿಎಸ್ ಯಡಿಯೂರಪ್ಪ ದೆಹಲಿಗೆ ತೆರಳುವ ಸಾಧ್ಯತೆ ಇದ್ದು ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದರ ನಡುವೆ ಇತ್ತ ಸಚಿವ ಆಕಾಂಕ್ಷಿಗಳ ಕಸರತ್ತು ಸಹ ಜೋರಾಗಿದ್ದು, ಈ ವಿಚಾರವಾಗಿ ಕೆಲ ಬಿಜೆಪಿ ಶಾಸಕರು ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ರಹಸ್ಯ ಸಭೆ ನಡೆಸಿದ್ದಾರೆ. ಇದು ರಾಜ್ಯ ಬಿಜೆಪಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸಾಹುಕಾರ್ ಮನೆಯಲ್ಲಿ ಬಿಜೆಪಿ ಶಾಸಕರ ರಹಸ್ಯ ಸಭೆ: ಇಲ್ಲಿದೆ ಇನ್‍ಸೈಡ್ ಮಾಹಿತಿ
ಇನ್ನು ಈ ಬಗ್ಗೆ ಇಂದು (ಶುಕ್ರವಾರ) ಸ್ವತಃ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿದ್ದು, ಈಗ ಮಾಡದೇ ಇನ್ಯಾವಾಗ ಮಾಡ್ತಾರೆ. ಆ ಸಭೆಯನ್ನ ಈಶ್ವರಪ್ಪನವರೇ ಮಾಡಿಸಿದ್ದು ಎಂದು ಹೇಳಿ ತೆರೆಳಿದರು.
ಈ ಮಾತನ್ನು ಸಿಎಂ ಬಿಎಸ್ ಯಡಿಯೂರಪ್ಪ ಅವರು ತಮಾಷೆಗೆ ಹೇಳಿದ್ರೋ ಅವಥಾ ಜೋಕ್‌ನಲ್ಲಿಯೇ ಸಿರೀಯಸ್ ಆಗಿ ಹೇಳಿದ್ದಾರೋ ಎನ್ನುವ ಪ್ರಶ್ನೆ ಬಿಜೆಪಿ ನಾಯಕರಲ್ಲಿ ಕಾಡಡತೊಡಗಿದೆ.
ಮೊದಲಿನಿಂದಲೂ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಯಡಿಯೂರಪ್ಪ ಅವರಿಗೆ ಅಷ್ಟಕಷ್ಟೇ. ಮೇಲ್ನೋಟಕ್ಕೆ ಇಬ್ಬರು ಚೆನ್ನಾಗಿ ಮತನಾಡುತ್ತಿದ್ದರೂ ಒಳಗೆ ಹಾವು-ಮುಂಗಸಿಯಂತಿದ್ದಾರೆ.
ಈ ಹಿಂದೆ ಬಹಿರಂಗವಾಗಿಯೇ ಕಿತ್ತಾಡಿಕೊಂಡಿದ್ದು, ಈಶ್ವರಪ್ಪನವರು ಯಡಿಯೂರಪ್ಪ ವಿರುದ್ಧ ರಾಯಣ್ಣ ಬ್ರಿಗೇಡ್ ಕಟ್ಟಿದ್ದು. ಇವೆಲ್ಲ ಗುಟ್ಟಾಗಿ ಉಳಿದಿಲ್ಲ.