ಕೊರೋನಾ ಆತಂಕ, ಬಾಲಿವುಡ್ ಕರ್ಮಕಾಂಡ ಸೇರಿದಂತೆ ಜು.17ರ ಟಾಪ್ 10 ಸುದ್ದಿ!

By Suvarna News  |  First Published Jul 17, 2020, 4:53 PM IST

ಕೊರೋನಾ ವೈರಸ್‌ನಿಂದ ತತ್ತರಿಸಿರುವ ಬೆಂಗಳೂರು ಮತ್ತೊಂದು ವಾರ ಲಾಕ್‌ಡೌನ್ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಇತ್ತ ಐಪಿಎಲ್ ಟೂರ್ನಿ ಆಯೋಜನೆಗೆ ಕಸರತ್ತುಗಳು ನಡೆಯುತ್ತಿದೆ. ಬಾಲಿವುಡ್ ಕರ್ಮಕಾಂಡವನ್ನು ನಟಿ ಬಿಚ್ಚಿಟ್ಟಿದ್ದಾರೆ. ಮಹಾರಾಷ್ಟ್ರ ಪೊಲೀಸ್ ಸಿಬ್ಬಂದಿಗೆ 25 ಸಾವಿರ ಫೇಸ್‌ಶೀಲ್ಡ್ ಕೊಟ್ಟ ಸೋನು ಸೂದ್. ರಾಜಸ್ಥಾನ ರಾಜಕೀಯದಲ್ಲಿ ಟ್ವಿಸ್ಟ್ ಸೇರಿದಂತೆ ಜುಲೈ 17ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.


ರಾಜಸ್ಥಾನ ರಾಜಕೀಯಕ್ಕೆ ದೊಡ್ಡ ಟ್ವಿಸ್ಟ್, ಕೈ ಬ್ರಹ್ಮಾಸ್ತ್ರಕ್ಕೆ ಪೈಲಟ್ ಪಡೆ ಕಕ್ಕಾಬಿಕ್ಕಿ

Latest Videos

undefined

ರಾಜಸ್ಥಾನದ ರಾಜಕಾರಣ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಇದೆ. ಬಂಡಾಯ ಎದ್ದಿದ್ದ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗ ಶಾಸಕರ ಮೇಲೆ ಕಾಂಗ್ರೆಸ್ ಶಿಸ್ತು ಕ್ರಮ ಜಾರಿ ಮಾಡಿದೆ. 

ವೆಂಟಿಲೇಟರ್ ಚಿಕಿತ್ಸೆ ಪಡೆದ 97% ಸೋಂಕಿತರು ಬದುಕುಳಿದಿಲ್ಲ, ಬೆಚ್ಚಿ ಬೀಳಿಸುತ್ತಿದೆ ವರದಿ!

ಕೊರೋನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ಸಿಗುತ್ತಿಲ್ಲ, ಬೆಡ್ ಸಿಗುತ್ತಿಲ್ಲ ಅನ್ನೋ ಆರೋಪಗಳು ಕೇಳಿ ಬರುತ್ತಲೇ ಇದೆ. ಇನ್ನೂ ಅಲೆದಾಡಿ ಬೆಡ್ ಪಡೆದು ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಗೋಳು ಹೇಳತೀರದು. ಆದರಲ್ಲೂ ವೆಂಟಿಲೇಟರ್ ಮೂಲಕ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಸ್ಥಿತಿ ಶೋಚನೀಯವಾಗಿದೆ. ಕಾರಣ ಬೆಂಗಳೂರಿನ ಪ್ರತಿಷ್ಠಿತ ಕೋವಿಡ್ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ಗೆ ಒಳಗಾದ ಸೋಂಕಿತರ ಪೈಕಿ ಶೇಕಡಾ 97 ರಷ್ಟು ಮಂದಿ ಬದುಕುಳಿದಿಲ್ಲ. 

ಬೆಂಗಳೂರು ಮತ್ತೊಂದು ವಾರ ಲಾಕ್‌ಡೌನ್ ?

ರಾಜ್ಯದಲ್ಲಿ ಕೊರೊನಾ ಸೋಂಕಿನ ಉಬ್ಬರ ದಿನದಿಂದ ದಿನಕ್ಕೆ ಅತ್ಯಂತ ವೇಗದಿಂದ ಸಾಗುತ್ತಿದೆ. ಗುರುವಾರ ದಾಖಲೆಯ 4169 ಮಂದಿಗೆ ಸೋಂಕು ತಗುಲಿದೆ. ಹೀಗಾಗಿ ಇದಕ್ಕೊಂದು ತಡೆ ಹಾಕಲು ಬೆಂಗಳೂರನ್ನು ಮತ್ತೊಂದು ವಾರ ಲಾಕ್‌ಡೌನ್ ಮಾಡುವಂತೆ ಬಿಬಿಎಂಪಿ ಕಮಿಷನರ್ ಸಿಎಂಗೆ ಮನವಿ ಮಾಡಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಮತ್ತೆ ಲಾಕ್‌ಡೌನ್ ಅಗತ್ಯ ಎಂದು ಅನಿಲ್ ಕುಮಾರ್ ಹೇಳಿದ್ದಾರೆ. 

ಐಪಿಎಲ್‌ ಹಣೆಬರಹ ಇಂದು ನಿರ್ಧಾರ?...

ಸೆಪ್ಟೆಂಬರ್‌ನಿಂದ ನವೆಂಬರ್‌ ವರೆಗೂ ಐಪಿ​ಎಲ್‌ ನಡೆ​ಸಲು ಬಿಸಿ​ಸಿಐ ಚಿಂತನೆ ನಡೆ​ಸಿದ್ದು, ಟೂರ್ನಿ ವಿದೇಶಕ್ಕೆ ಸ್ಥಳಾಂತರಗೊಳ್ಳು​ವುದು ಬಹು​ತೇಕ ಖಚಿತವಾಗಿದೆ.  

ಪಕ್ಕದಲ್ಲಿ ಮಲಗದೇ ಹೋದರೆ ನಿರ್ದೇಶಕರು ಸಿನಿಮಾದಿಂದ ಕಿತ್ತಾಕ್ತಾರೆ: ರಿಚಾ ಚಡ್ಡಾ...

ನಟ ಸುಶಾಂತ್‌ ಸಿಂಗ್ ರಜಪೂತ್ ಸಾವಿಗೆ ಸಂತಾಪ ಸೂಚಿಸೋ ನಿರ್ದೇಶಕರೇ ತಮ್ಮೊಂದಿಗೆ ಮಲಗದ ನಟಿಯನ್ನು ಸಿನಿಮಾದಿಂ ಕಿತ್ತಾಕುತ್ತಾರೆ ಎಂದು ಬಾಲಿವುಡ್ ನಟಿ ರಿಚಾ ಚಡ್ಡಾ ಆರೋಪಿಸಿದ್ದಾರೆ. ಮಾನಸಿಕ ನೋವಿಗಿಂತ ಬಾಲಿವುಡ್ ನೆಪೊಟಿಸಂ ಸಾವಿಗೆ ಕಾರಣ ಎಂದು ಅವರು ಒತ್ತಿ ಹೇಳಿದ್ದಾರೆ.

ಮಹಾರಾಷ್ಟ್ರ ಪೊಲೀಸ್ ಸಿಬ್ಬಂದಿಗೆ 25 ಸಾವಿರ ಫೇಸ್‌ಶೀಲ್ಡ್ ಕೊಟ್ಟ ಸೋನು ಸೂದ್..!...

ಕೊರೋನಾ ಕಷ್ಟಕಾಲ ಆರಂಭವಾದಾಗಿನಿಂದ ಜನರ ಸೇವೆಗೆ ನಿಂತಿರುವ ಬಾಲಿವುಡ್ ನಟ ಸೋನು ಸೂದ್ ಮತ್ತೊಮ್ಮೆ ತಮ್ಮ ಮಾನವೀಯ ಕೆಲಸದ ಮೂಲಕ ಸುದ್ದಿಯಾಗಿದ್ದಾರೆ. ಮಹಾರಾಷ್ಟ್ರದ ಪೊಲೀಸ್‌ ಸಿಬ್ಬಂದಿಗೆ ಸುಮಾರು 25 ಸಾವಿರ ಮುಖಗವಸುಗಳನ್ನು ವಿತರಿಸಿದ್ದಾರೆ.

ಲಿಂಗಭೇದ ಆರೋಪ, ಲೋಗೋ ಬದಲಿಸಲು ಸ್ಕಾಚ್ ಬ್ರೈಟ್ ನಿರ್ಧಾರ!...

ಅಮೆರಿಕದಲ್ಲಿ ಕಪ್ಪು ವರ್ಣೀಯನ ಮೇಲಿನ ದೌರ್ಜನ್ಯ ಖಂಡಿಸಿ ನಡೆದ ಪ್ರತಿಭಟನೆ ಬಳಿಕ ಬಹುತೇಕ ಎಲ್ಲಾ ದೇಶದಲ್ಲಿ ಈ ಕುರಿತು ಜಾಗೃತಿ ಮೂಡುತ್ತಿದೆ. ಜನಾಂಗೀಯ ನಿಂದನೆ, ವರ್ಣಭೇದ, ಲಿಂಗಭೇದ ಸೇರಿದಂತೆ ಯಾವುದೇ ಅಸಮಾನತೆಗೆ ಆಸ್ಪದ ನೀಡಲು ಯಾರೂ ಅವಕಾಶ ನೀಡುತ್ತಿಲ್ಲ. ಇದೇ ಆರೋಪದಡಿ ಭಾರತದಲ್ಲಿ ಫೇರ್‌ ಅಂಡ್ ಲವ್ಲಿ ಕಂಪನಿ ಬಳಿಕ ಇದೀಗ ಸ್ಕಾಚ್ ಬ್ರೈಟ್ ಕಂಪನಿ ಹೆಸರು ಬದಲಾಯಿಸುತ್ತಿದೆ.

ಟಿಕ್‌ಟಾಕ್‌ ನಿಷೇಧದ ಬಗ್ಗೆ ವಾರದೊಳಗೆ ನಿರ್ಧಾರ: ಅಮೆರಿಕ...

ಚೀನಾದ ಆ್ಯಪ್‌ಗಳನ್ನು ನಿಷೇಧಿಸುವ ಕುರಿತಂತೆ ಒಂದು ವಾರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶ್ವೇತ ಭವನದ ಮುಖ್ಯ ಕಾರ್ಯದರ್ಶಿ ಮಾರ್ಕ್ ಮೆಡೋಸ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ. 

ಬಿಟೌನ್ ಬೆಡಗಿಯರ ಇಮ್ಯೂನಿಟಿ ಮಂತ್ರ, ಹೀಗ್ ಮಾಡಿ ಸ್ಟ್ರಾಂಗ್ ಆಗಿ...

ಮಲೈಕಾ ಅರೋರಾಳಿಂದ ಹಿಡಿದು ಅನುಷ್ಕಾ ಶರ್ಮಾಳವರೆಗೆ ಬಾಲಿವುಡ್ ಬೆಡಗಿಯರೆಲ್ಲ ಸೋಷ್ಯಲ್ ಮೀಡಿಯಾದಲ್ಲಿ ತಾವು ಸೇವಿಸುತ್ತಿರುವ ಇಮ್ಯುನಿಟಿ ಬೂಸ್ಟರ್ ಬಗ್ಗೆ ಹಂಚಿಕೊಳ್ಳುತ್ತಿದ್ದಾರೆ. 

ಡ್ರೈವರ್‌ಗೆ ಕೊರೋನಾ: ಹೋಂ ಕ್ವಾರಂಟೈನ್‌ಗೊಳಗಾದ ಬೆಂಗ್ಳೂರು ಪೊಲೀಸ್ ಆಯುಕ್ತ...

ಕೊರೋನಾ ಮಧ್ಯೆ ತಮ್ಮ ಜೀವ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಮಹಾಮಾರಿ ಕೊರೋನಾ ಬಿಟ್ಟು ಬಿಡದೇ ಕಾಡುತ್ತಿದೆ. ಇದೀಗ ಪೊಲೀಸ್ ಆಯುಕ್ತರ ಕಾರು ಚಾಲಕನಿಗೆ ವಕ್ಕರಿಸಿದೆ.

click me!