ಕೊರೋನಾದಿಂದ ಗುಣಮುಖರಾದವರ ಸಹಕಾರ ಬೇಕೆಂದು ರಾಜ್ಯ ಆರೋಗ್ಯ ಸಚಿವ ಬಿ ಶ್ರೀರಾಮುಲು ಕರೆ ಕೊಟ್ಟಿದ್ದಾರೆ.
ಬಳ್ಳಾರಿ, (ಜುಲೈ.17): ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿ ಯಶಸ್ವಿಯಾಗಿ ನಡೆಯುತ್ತಿದೆ. ಕೋವಿಡ್ ಸೋಂಕಿನಿಂದ ಗುಣಮುಖರಾದವರು ಇದಕ್ಕೆ ಸಹಕಾರ ಕೊಡಬೇಕು.ಅವರಿಗೆ 5 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ಹೇಳಿದರು.
ಇಂದು (ಶುಕ್ರವಾರ) ಬಳ್ಳಾರಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಕೋವಿಡ್ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ನಮ್ಮ ಬಳಿ ಸಲಹೆ ಪಡೆದಿದ್ದಾರೆ. ನಾವು ಈಗಾಗಲೇ 2 ಲಕ್ಷ ಆಂಟಿಜೆನ್ ಕಿಟ್ ಆರ್ಡರ್ ಮಾಡಿದ್ದೇವೆ. ಇದರಲ್ಲಿ 1 ಲಕ್ಷ ಬಂದು ತಲುಪಿದೆ ಎಂದರು.
ಕೊರೋನಾದಿಂದ ಗುಣಮುಖರಾದವರಿಗೆ ಆರೈಕೆ ಭತ್ಯೆ ಘೋಷಣೆ: ಕಂಡಿಷನ್ ಅಪ್ಲೈ..!
ಎಲ್ಲಿ ಒಳ್ಳೆಯ ಕೆಲಸ ಆಗುತ್ತದೆ ಅಲ್ಲಿ ಟೀಕೆ ಬರುವುದು ಸಹಜ. ವಿರೋಧ ಪಕ್ಷದ ನಾಯಕರು ಸುಮ್ಮನೆ ಹೇಳಿಕೆ ಕೊಡುತ್ತಿದ್ದಾರೆ. ನಮ್ಮ ಸಿಎಂ, ಮಂತ್ರಿಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಆರೋಪ ಬೇಡ ಎಂದು ಹೇಳಿದರು.
ಖಾಸಗಿ ಆಸ್ಪತ್ರೆಗಳ ಒಡಂಬಡಿಕೆ ಸಮಯದಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದೇವೆ. 90ರಿಂದ 95 ಶೇಕಡಾ ಖಾಸಗಿ ಆಸ್ಪತ್ರೆಗಳು ಸಹಕಾರ ಕೊಡುತ್ತಿವೆ. ಸಹಕಾರ ಮಾಡದೇ ಇದ್ದರೆ ಕ್ರಮ ಕೈಗೊಳ್ಳುತ್ತೇವೆ ಎಚ್ಚರಿಕೆ ಕೊಟ್ಟರು.
ನಾನು ದೇವರ ಮೇಲೆ ಭಾರ ಹಾಕಿದ್ದೇನೆ ಎಂಬ ವಿಚಾರಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ನಾವು ಕೆಲಸ ಮಾಡುತ್ತಿದ್ದೇವೆ. ವಿಪಕ್ಷಗಳು ಅಧಿಕಾರ ಕಳೆದುಕೊಂಡು ಹತಾಶೆರಾಗಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕೋವಿಡ್ ನಿಯಂತ್ರಣಕ್ಕೆ ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ರಿಸ್ಕ್ ತೆಗೆದುಕೊಂಡು ಕೆಲಸ ಮಾಡುವವರಿಗೆ ಪ್ರೋತ್ಸಾಹ ಧನ ಅನ್ವಯಿಸುತ್ತದೆ. ಈ ಬಗ್ಗೆ ಮುಖ್ಯಂಂತ್ರಿಗಳು ನಿರ್ಧಾರ ಮಾಡುತ್ತಾರೆ. ಆಶಾ ಕಾರ್ಯಾಕರ್ತೆಯರ ವಿಚಾರವಾಗಿ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರೆ ಮುಷ್ಕರ ವಾಪಸ್ ತೆಗದುಕೊಳ್ಳಿ. ನಮ್ಮೊಂದಿಗೆ ಬಂದು ಚರ್ಚೆ ಮಾಡಿ ಎಂದು ಮನವಿ ಮಾಡಿದರು.