ವಾಜಪೇಯಿ ನಿಧನ: ಸರಕಾರಿ ಬಂಗಲೆ ಬಿಟ್ಟ ದತ್ತು ಪುತ್ರಿ

By Web DeskFirst Published Nov 27, 2018, 3:26 PM IST
Highlights

ಅಟಲ್ ಬಿಹಾರಿ ವಾಜಪೇಯಿ ಪುತ್ರಿ ಸರಳತೆಗೆ ಇನ್ನೊಂದು ಸಾಕ್ಷಿ | ತಂದೆಯಂತೆಯೇ ಸರಳತೆಯನ್ನು ರೂಢಿಸಿಕೊಂಡಿದ್ದಾರೆ ಅಟಲ್ ಪುತ್ರಿ | ಸರ್ಕಾರದ ಬಂಗಲೆ ಬಿಟ್ಟು ಖಾಸಗಿ ನಿವಾಸಕ್ಕೆ ಶಿಫ್ಟ್ 

ಬೆಂಗಳೂರು (ನ. 27): ಅಟಲ್ ಬಿಹಾರಿ ವಾಜಪೇಯಿ ತೀರಿಕೊಂಡ 3 ತಿಂಗಳಲ್ಲಿ ಅವರ ದತ್ತು ಪುತ್ರಿ ಗಂಡ ಮತ್ತು ಪುತ್ರಿ ಸಮೇತ ಸಿಟಿಯಿಂದ 15 ಕಿಮೀ ದೂರದಲ್ಲಿರುವ ಖಾಸಗಿ ನಿವಾಸಕ್ಕೆ ಶಿಫ್ಟ್ ಆಗಿದ್ದಾರೆ. 

ಅಟಲ್ ನೆನಪಿನ ವಸ್ತುಗಳನ್ನು ತೀನ್ ಮೂರ್ತಿ ಭವನದಲ್ಲಿ ನಿರ್ಮಾಣವಾಗುತ್ತಿರುವ ಎಲ್ಲ ಮಾಜಿ ಪ್ರಧಾನಿಗಳ ನೆನಪಿನ ಮ್ಯೂಸಿಯಂಗೆ ಕೊಟ್ಟಿರುವ ಪುತ್ರಿ ನಮಿತಾ ಭಟ್ಟಾಚಾರ್ಯ, 3 ಬೆಡ್ ರೂಮ್‌ನ ಖಾಸಗಿ ಮನೆಗೆ ಹೋಗಿದ್ದಾರೆ. ನಮ್ಮ ಕುಟುಂಬದ ಯಾರಿಗೂ ಸಕ್ರಿಯ ರಾಜಕಾರಣ ಇಷ್ಟವಿಲ್ಲ ಎಂದು ಪ್ರಧಾನಿ ಮೋದಿ ಅವರಿಗೆ ಹೇಳಿರುವ ನಮಿತಾ, ಕೇಂದ್ರ ಎಸ್‌ಪಿಜಿ ಭದ್ರತೆಯನ್ನೂ ಬೇಡ ಎಂದು ಲಿಖಿತವಾಗಿ ಬರೆದುಕೊಟ್ಟಿದ್ದಾರೆ.

ಅಂದ ಹಾಗೆ ಅಪ್ಪ ಸತ್ತು ಹತ್ತು ವರ್ಷ ಕಳೆದರೂ ಮನೆ ಖಾಲಿ ಮಾಡದೆ ಸತಾಯಿಸಿ ಕೊನೆಗೆ ಮ್ಯೂಸಿಯಂ ಮಾಡಿ ಎಂದು ದುಂಬಾಲು ಬೀಳುವ ಮಕ್ಕಳ ಮಧ್ಯೆ ಅಟಲ್ ಕುಟುಂಬ ನಡೆದುಕೊಂಡ ರೀತಿ ನಿಜಕ್ಕೂ ವಿಶೇಷ. 

-ಇಂಡಿಯಾ ಗೇಟ್ , ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ 

click me!