ನೆಮ್ಮದಿ ಪಡೆಯುವುದು ಹೇಗೆ? ವಿಜ್ಞಾನಿ ಐನ್ಸ್'ಟೀನ್ ಬರದುಕೊಟ್ಟಿದ್ದ ಚೀಟಿ ಈಗ ವೈರಲ್

Published : Oct 25, 2017, 06:41 PM ISTUpdated : Apr 11, 2018, 12:59 PM IST
ನೆಮ್ಮದಿ ಪಡೆಯುವುದು ಹೇಗೆ? ವಿಜ್ಞಾನಿ ಐನ್ಸ್'ಟೀನ್ ಬರದುಕೊಟ್ಟಿದ್ದ ಚೀಟಿ ಈಗ ವೈರಲ್

ಸಾರಾಂಶ

1922ರಲ್ಲಿ ಜಪಾನ್'ಗೆ ಅವರು ಭೇಟಿ ಕೊಟ್ಟ ಸಂದರ್ಭದಲ್ಲಿ ಅಲ್ಲಿಯ ಟೋಕಿಯೋ ಇಂಪೀರಿಯಲ್ ಹೋಟೆಲ್'ನಲ್ಲಿ ಕೆಲಸಗಾರರೊಬ್ಬರಿಗೆ ಐನ್ಸ್'ಟೀನ್ ಎರಡು ಚೀಟಿಗಳನ್ನು ಬರೆದುಕೊಟ್ಟಿದ್ದರು. ಇವೇ ಎರಡು ಚೀಟಿಗಳು 18 ಲಕ್ಷ ಡಾಲರ್(ಸುಮಾರು 11 ಕೋಟಿ ರೂಪಾಯಿ)ಗೆ ಮಾರಾಟವಾಗಿವೆ. ಅವುಗಳ ಪೈಕಿ ಒಂದು ಚೀಟಿಯಲ್ಲಿ ಅವರು ಸಂತೋಷ ದಕ್ಕಿಸಿಕೊಳ್ಳುವ ಮಾರ್ಗದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಜರ್ಮನ್ ಭಾಷೆಯಲ್ಲಿರುವ ಅದು ಐನ್ಸ್'ಟೀನ್ ಥಿಯರಿ ಆಫ್ ಹ್ಯಾಪಿನೆಸ್ ಎಂದು ಖ್ಯಾತವಾಗುತ್ತಿದೆ.

ನವದೆಹಲಿ(ಅ. 25): ಆಲ್ಬರ್ಟ್ ಐನ್ಸ್'ಟೀನ್ ವಿಶ್ವ ಕಂಡ ಅತ್ಯದ್ಭುತ ವಿಜ್ಞಾನಿಗಳಲ್ಲೊಬ್ಬರು. ಇವರ ಥಿಯರಿಗಳು ಅಥವಾ ಸೂತ್ರಗಳು ಬ್ರಹ್ಮಾಂಡದ ವರ್ತನೆಗಳನ್ನು ಅರಿಯಲು ವಿಜ್ಞಾನಿಗಳಿಗೆ ಈಗಲೂ ಮಾನದಂಡವಾಗಿವೆ. ಐನ್'ಸ್ಟೀನ್ ಕೇವಲ ವಿಜ್ಞಾನದ ಥಿಯರಿಗಳನ್ನಷ್ಟೇ ಬರೆಯಲಿಲ್ಲ, ಬದುಕಿನ ಸೂತ್ರಗಳನ್ನೂ ಕೊಟ್ಟಿದ್ದಾರೆ. ಅನೇಕ ಮಂದಿಗೆ ಅವರು ಚೀಟಿಯಲ್ಲಿ ಬದುಕಿನ ಟಿಪ್ಸ್ ಬರೆದುಕೊಟ್ಟಿದ್ದಾರಂತೆ. ಅಂಥ ಎರಡು ಚೀಟಿಗಳು ಈಗ ಹರಾಜಿನಲ್ಲಿ ಕೋಟಿಗಟ್ಟಲೆ ದುಡ್ಡಿಗೆ ಸೇಲ್ ಆಗಿವೆ. ನೆಮ್ಮದಿ ಅಥವಾ ಸಂತೋಷ ಪಡೆಯುವುದು ಹೇಗೆ ಎಂದು ಹೇಳಲು ಭಾರತದಲ್ಲಿ ಅಸಂಖ್ಯಾತ ಆದ್ಯಾತ್ಮಿಕ ಚಿಂತಕರು ಇದ್ದಾರೆ. ಆದರೆ, ಆಲ್ಬರ್ಟ್ ಐನ್ಸ್'ಟೀನ್ ಅವರು ಈ ವಿಚಾರದ ಬಗ್ಗೆ ಮಾತನಾಡಿರುವುದು ವಿಶೇಷ.

1922ರಲ್ಲಿ ಜಪಾನ್'ಗೆ ಅವರು ಭೇಟಿ ಕೊಟ್ಟ ಸಂದರ್ಭದಲ್ಲಿ ಅಲ್ಲಿಯ ಟೋಕಿಯೋ ಇಂಪೀರಿಯಲ್ ಹೋಟೆಲ್'ನಲ್ಲಿ ಕೆಲಸಗಾರರೊಬ್ಬರಿಗೆ ಐನ್ಸ್'ಟೀನ್ ಎರಡು ಚೀಟಿಗಳನ್ನು ಬರೆದುಕೊಟ್ಟಿದ್ದರು. ಇವೇ ಎರಡು ಚೀಟಿಗಳು 18 ಲಕ್ಷ ಡಾಲರ್(ಸುಮಾರು 11 ಕೋಟಿ ರೂಪಾಯಿ)ಗೆ ಮಾರಾಟವಾಗಿವೆ. ಅವುಗಳ ಪೈಕಿ ಒಂದು ಚೀಟಿಯಲ್ಲಿ ಅವರು ಸಂತೋಷ ದಕ್ಕಿಸಿಕೊಳ್ಳುವ ಮಾರ್ಗದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಜರ್ಮನ್ ಭಾಷೆಯಲ್ಲಿರುವ ಅದು ಐನ್ಸ್'ಟೀನ್ ಥಿಯರಿ ಆಫ್ ಹ್ಯಾಪಿನೆಸ್ ಎಂದು ಖ್ಯಾತವಾಗುತ್ತಿದೆ.

ಚೀಟಿಗಳಲ್ಲೇನಿದೆ?

ಸೂತ್ರ 1:
"Stilles bescheidenes Leben gibt mehr Glueck als erfolgreiches Streben, verbunden mit bestaendiger Unruhe" (ಜರ್ಮನ್ ಭಾಷೆ)
ಇಂಗ್ಲೀಷ್ ಭಾಷಾಂತರ: “A calm and modest life brings more happiness than the pursuit of success combined with constant restlessness,"
ಕನ್ನಡ ಅನುವಾದ: ನಿರಂತರ ಅವಿಶ್ರಾಂತತೆ ಮತ್ತು ಯಶಸ್ಸಿನ ಬೆನ್ನೇರುವಿಕೆ, ಇವೆರಡಕ್ಕಿಂತ ಶಾಂತ ಮತ್ತು ವಿನಮ್ರ ಬದುಕು ಹೆಚ್ಚು ಸಂತೋಷ ಕೊಡುತ್ತವೆ.

ಸೂತ್ರ 2:
"Wo ein Wille ist, da ist auch ein Weg" (ಜರ್ಮನ್ ಭಾಷೆ)
ಇಂಗ್ಲೀಷ್ ಭಾಷಾಂತರ: “When there's a will, there's a way,"
ಕನ್ನಡ ಅನುವಾದ: ಎಲ್ಲಿ ಇಚ್ಛಾಶಕ್ತಿ ಇರುತ್ತದೆಯೋ ಅಲ್ಲಿ ದಾರಿ ಇರುತ್ತದೆ

ಐನ್'ಸ್ಟೀನ್ ಬರೆದ ಮೊದಲನೆಯ ಸೂತ್ರವಿರುವ ಚೀಟಿಯೇ 15.6 ಲಕ್ಷ ಡಾಲರ್'ಗೆ ಮಾರಾಟವಾಗಿದೆ. ಎರಡನೇ ಚೀಟಿಯು 2.4 ಲಕ್ಷ ಡಾಲರ್'ಗೆ ಸೇಲ್ ಆಗಿದೆ.

ಐನ್'ಸ್ಟೀನ್ ಮತ್ತು ಜಪಾನ್:
1922ರಲ್ಲಿ ಐನ್'ಸ್ಟೀನ್ ಅವರು ಉಪನ್ಯಾಸಗಳನ್ನು ನೀಡಲು ಯೂರೋಪ್'ನಿಂದ ಜಪಾನ್'ಗೆ ತೆರಳಿರುತ್ತಾರೆ. ಆಗಿನ್ನೂ ಅವರಿಗೆ 43 ವರ್ಷ ವಯಸ್ಸು. ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದಿರುತ್ತಾರೆ. ವಿಶ್ವದ ಅತ್ಯಂತ ಪ್ರತಿಷ್ಠಿತ ವಿಜ್ಞಾನಿಗಳಲ್ಲೊಬ್ಬರೆನಿಸಿರುತ್ತಾರೆ. ವಿಜ್ಞಾನ-ತಂತ್ರಜ್ಞಾನದಲ್ಲಿ ಅಪಾರ ಆಸಕ್ತರಾದ ಜಪಾನೀಯರಿಗೆ ಐನ್'ಸ್ಟೀನ್ ಆಗಮನವು ದೇವರ ಆಗಮದಂತಾಗಿರುತ್ತದೆ. ಅವರು ಎಲ್ಲೇ ಹೋದರೂ ಜನರು ಮುತ್ತಿಕೊಳ್ಳುವುದು ಸಾಮಾನ್ಯವಾಗಿರುತ್ತಿತ್ತು. ತಮಗೋಸ್ಕರ ಜನಸಂದಣಿ ಸೇರುವುದು ಅವರಿಗೆ ಮುಜುಗರವಾಗುತ್ತಿತ್ತು. ಇದೇ ವೇಳೆ, ತಾನು ಅತ್ಯಂತ ಇಷ್ಟಪಡುವುದು ಜಪಾನೀಯರೇ ಎಂದು ಕೆಲವೊಮ್ಮೆ ಅವರು ಹೇಳಿಕೊಂಡಿದ್ದುಂಟು.

"ನಾನು ಭೇಟಿ ಮಾಡಿರುವ ಜನರ ಪೈಕಿ ಜಪಾನೀಯರೆಂದರೆ ನನಗೆ ಅತೀ ಹೆಚ್ಚು ಪ್ರೀತಿ. ಜಪಾನೀಯರ ವಿನಮ್ರತೆ, ಬುದ್ಧಿವಂತಿಕೆ ಮತ್ತು ಕಲಾಸಕ್ತಿ ಇದಕ್ಕೆ ಕಾರಣ" ಎಂದು ಐನ್'ಸ್ಟೀನ್ ಹೇಳಿರುವುದು ಪುಸ್ತಕವೊಂದರಲ್ಲಿ ದಾಖಲಾಗಿದೆ.

ಟಿಪ್ಸ್ ಬದಲು ಚೀಟಿ ಕೊಟ್ಟಿದ್ದ ಐನ್ಸ್'ಟೀನ್:
ಉಪನ್ಯಾಸದ ನಿಮಿತ್ತ ಐನ್'ಸ್ಟೀನ್ ಅವರು ಜಪಾನ್ ರಾಜಧಾನಿ ಟೋಕಿಯೋದ ಇಂಪೀರಿಯಲ್ ಹೋಟೆಲ್'ಗೆ ಹೋಗಿರುತ್ತಾರೆ. ಅಲ್ಲಿ, ಮೆಸೆಂಜರ್(ಸಂದೇಶವಾಹಕ)ವೊಬ್ಬ ಒಂದು ಪಾರ್ಸೆಲ್ ತಂದುಕೊಡುತ್ತಾನೆ. ಕೆಲಸಗಾರರಿಗೆ ಟಿಪ್ಸ್ ಕೊಡುವುದು ಐರೋಪ್ಯನ್ನರಿಗಿದ್ದ ಸಂಸ್ಕಾರ. ಇದು ಜಪಾನೀಯರಲ್ಲಿರಲಿಲ್ಲ. ಮೆಸೆಂಜರ್'ಗೆ ಹಣದ ಟಿಪ್ಸ್ ಕೊಡಲು ಐನ್'ಸ್ಟೀನ್ ಬಳಿ ಚಿಲ್ಲರೆ ಇರುವುದಿಲ್ಲ. ಆಗ, ಐನ್'ಸ್ಟೀನ್ ಅವರು ಎರಡು ಚೀಟಿಗಳಲ್ಲಿ ಏನೋ ಗೀಚಿ ಆ ಕೆಲಸಗಾರನಿಗೆ ಅವನ್ನು ಕೊಡುತ್ತಾರೆ. ಈ ಎರಡು ಚೀಟಿಗಳು ಮುಂದೊಂದು ದಿನ ನಿನಗೆ ಚಿಲ್ಲರೆ ಹಣಕ್ಕಿಂತ ಹೆಚ್ಚಿನ ಬೆಲೆ ತಂದುಕೊಡುತ್ತದೆ ಎಂದು ಆ ಕೆಲಸಗಾರನಿಗೆ ಐನ್'ಸ್ಟೀನ್ ಹೇಳಿರುತ್ತಾರೆ.

ಈ ಎರಡು ಚೀಟಿಗಳೇ ಈಗ ಹರಾಜಿನಲ್ಲಿ ಕೋಟಿ ಗಟ್ಟಲೆ ಹಣಕ್ಕೆ ಮಾರಾಟವಾಗಿದೆ. ಈ ಚೀಟಿಗಳು ಜರ್ಮನಿಯಲ್ಲಿರುವ ಆ ಕೆಲಸಗಾರ ಸಂಬಂಧಿಕರೊಬ್ಬರ ಮನೆಯಲ್ಲಿ ಇದೂವರೆಗೂ ಇತ್ತು. ಆ ಸಂಬಂಧಿಕರೇ ಈಗ ಈ ಚೀಟಿಗಳನ್ನು ಹರಾಜಿಗೆ ಹಾಕಿ ಮಾರಾಟ ಮಾಡಿದ್ದಾರೆ. ಐನ್'ಸ್ಟೀನ್ ಹೇಳಿದ್ದಕ್ಕಿಂತ ಆ ಚೀಟಿಗಳಿಗೆ ಹೆಚ್ಚಿನ ಬೆಲೆ ಸಿಕ್ಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾರಾಷ್ಟ್ರ ಸ್ಥಳೀಯ ಚುನಾವಣೆ; ಬಿಜೆಪಿ ಮೈತ್ರಿಕೂಟಕ್ಕೆ ಭರ್ಜರಿ ಮುನ್ನಡೆ, ಮಕಾಡೆ ಮಲಗಿದ MVA
ವೈರಲ್ ಆಗ್ತಿದೆ ಕನ್ನಡದಲ್ಲಿ ಮುದ್ರಣಗೊಂಡಿರುವ 1948ರ ಮುಸ್ಲಿಂ ವಿವಾಹ ಆಮಂತ್ರಣ ಪತ್ರಿಕೆ