42 ಲಕ್ಷ ನಕಲಿ ಮತದಾರರು ಪತ್ತೆ?

By Web DeskFirst Published Aug 15, 2018, 3:22 PM IST
Highlights

ಮತದಾರರ ಪಟ್ಟಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ  ನಕಲಿ ಮತದಾರರು ಪತ್ತೆಯಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಈ ಸಂಬಂಧ ಕಾಂಗ್ರೆಸ್ ಮುಖಂಡರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ ಮಾಡಿದ್ದಾರೆ. 
 

ಜೈಪುರ :   ರಾಜಸ್ಥಾನದ ಮತದಾರರ ಪಟ್ಟಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ  ನಕಲಿ ಮತದಾರರು ಸೇರಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಈ ಸಂಬಂಧ ಕಾಂಗ್ರೆಸ್ ಇದೀಗ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ ಮಾಡಿದೆ. 

ಮತದಾರರ ಪಟ್ಟಿಯಲ್ಲಿ ಒಟ್ಟು  42 ಲಕ್ಷದಷ್ಟು ನಕಲಿ ಮತದಾರರನ್ನು ಸೇರ್ಪಡೆ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡರಾದ  ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್, ವಿವೇಕ್ ಟಂಕಾ,  ಜಿತೇಂದ್ರ ಸಿಂಗ್,  ಸಿ.ಪಿ ಜೋಶಿ,  ಮೋಹನ್ ಪ್ರಕಾಶ್ ಸೇರಿದಂತೆ ಹಿರಿಯ ಮುಖಂಡರು ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ.

ಚುನಾವಣಾ ಆಯೋಗವು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಮಧ್ಯ ಪ್ರದೇಶದಲ್ಲಿ ಮತದಾರರ ಸಂಖ್ಯೆಯನ್ನು ಬಿಡುಗಡೆ ಮಾಡಲಾಗಿದೆ. ಆದರೆ ರಾಜಸ್ಥಾನದಲ್ಲಿ ಒಟ್ಟು ಮತದಾರರ ಸಂಖ್ಯೆಯನ್ನು ಬಿಡುಗಡೆ ಮಾಡಿಲ್ಲ. ಬಿಜೆಪಿ ನಕಲಿ ಮತದಾರರ ಮೂಲಕ ನಕಲಿ ಮತಗಳನ್ನು ಪಡೆವ ಹುನ್ನಾರ ಮಾಡಿದೆ ಎಂದು  ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿ  ಅಧ್ಯಕ್ಷರಾದ ಸಚಿನ್ ಪೈಲಟ್ ಹೇಳಿದ್ದಾರೆ. 

ಲಕ್ಷಾಂತರ ಸಂಖ್ಯೆಯಲ್ಲಿ ನಕಲಿ ಮತದಾರರ ಚೀಟಿಗಳ ಹಂಚಿಕೆಯಾಗಿದ್ದು ಅವುಗಳು ಒಂದೇ ರೀತಿಯ ಹೆಸರನ್ನು ಹೊಂದಿವೆ. ಲಿಂಗ ಹಾಗೂ ಸಂಬಂಧಿಗಳ ಹೆಸರೂ ಕೂಡ ಒಂದೇ ರೀತಿ ಇದೆ.  10 ಲಕ್ಷಕ್ಕೂ ಅಧಿಕ ಮಂದಿ ಒಂದೇ ಜನ್ಮ ದಿನ ಹೊಂದಿದವರಿದ್ದಾರೆ, 91 ಸಾವಿರ ಮತದಾರರ ಎಪಿಕ್ ಐಡಿ ಸಂಖ್ಯೆಯೂ ಕೂಡ ಒಂದೇ ರೀತಿ ಇದೆ  ಎಂದು ಆರೋಪ ಮಾಡಲಗಿದೆ. 

ಕಳೆದ ಕೆಲ ವರ್ಷಗಳಿಂದಲೂ ಕೂಡ ರಾಜ್ಯದಲ್ಲಿ ಇಂತಹ ನಕಲಿ ಮತದಾರರ ಸಂಖ್ಯೆಯೂ ಹೆಚ್ಚುತ್ತಲೇ ಇದೇ ಎಂದು ಆರೋಪ ಮಾಡಲಾಗಿದೆ. 

click me!