ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 8 ರವರೆಗೆ ಮೈಸೂರು ದಸರಾ ಸಂಭ್ರಮ | ಮೈಸೂರು ಮಕ್ಕಳ ದಸರಾ ಮುಖ್ಯ ಅತಿಥಿಯಾಗಿ ಹಾವೇರಿ ಗ್ರಾಮೀಣ ಪ್ರತಿಭೆ ರುಬೀನಾ ನದಾಫ್ |
ಸರಿಗಮಪ16 ನಲ್ಲಿ ಕನ್ನಡದ ಬಗೆಗಿನ ಅಭಿಮಾನ, ಪ್ರೀತಿ ತುಂಬಿದ ಹಾಡುಗಳಿಂದ ಎಲ್ಲರ ಮನೆಮನ ಗೆದ್ದವರು ರುಬಿನಾ. ಬೊಂಬೆ ಹೇಳುತೈತೆ...ಮತ್ತೆ ಹೇಳುತೈತೆ... ಹಾಡಿನ ಧಾಟಿಯಲ್ಲಿ ಕನ್ನಡ ಶಾಲೆ ಹಾಡನ್ನು ಹೇಳಿ ಎಲ್ಲರ ಮನವನ್ನು ಗೆದ್ದಿದ್ದರು ಈ ಪುಟ್ಟ ಬಾಲಕಿ.
ಕನ್ನಡ ಶಾಲೆ ಬಗ್ಗೆ ರುಬೀನಾ ಹಾಡು ಎಲ್ಲೆಡೆ ಮಾಡಿದೆ ಮೋಡಿ!
ಸರಿಗಮಪ ವೇದಿಕೆಯಲ್ಲಿ ಗ್ರಾಮೀಣ ಸೊಗಡನ್ನು ಎತ್ತಿ ಹಿಡಿಯುತ್ತಾ, ಹಳ್ಳಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳೇನೂ ಕಮ್ಮಿಯಿಲ್ಲ ಎನ್ನುವುದನ್ನು ಸಾಬೀತುಪಡಿಸಿದ ಗ್ರಾಮೀಣ ಪ್ರತಿಭೆ ರುಬೀನಾ. ಇದೀಗ ಈಕೆ ಐತಿಹಾಸಿಕ ಮೈಸೂರು ದಸರಾದ ‘ಮಕ್ಕಳ ದಸರಾ’ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಈ ಸರ್ಕಾರಿ ಕಂಪನಿ ಎಲ್ಲಾ ನೌಕರರಿಗೂ ದಸರಾಗೆ ತಲಾ 1 ಲಕ್ಷ ರು. ಬೋನಸ್!
ಸೆಪ್ಟೆಂಬರ್ 30, ಅಕ್ಟೋಬರ್ 1 ರಂದು ಜಗನ್ಮೋಹನ್ ಪ್ಯಾಲೇಸ್ ನಲ್ಲಿ ಮಕ್ಕಳ ದಸರಾ ಆಯೋಜಿಸಲಾಗಿದೆ. ಈ ಸಮಾರಂಭಕ್ಕೆ ರುಬೀನಾ ಮುಖ್ಯ ಅತಿಥಿಯಾಗಿದ್ದಾರೆ. ‘ನನಗೆ ತುಂಬಾ ಖುಷಿಯಾಗುತ್ತಿದೆ. ಈ ಗೌರವವನ್ನು ನನ್ನ ತಂದೆ- ತಾಯಿಗೆ, ಗುರುಗಳಿಗೆ ಅರ್ಪಿಸುತ್ತೇನೆ’ ಎಂದಿದ್ದಾರೆ ರುಬೀನಾ. ರುಬೀನಾ ಹಾವೇರಿ ಜಿಲ್ಲೆಯ ಮೇವುಂಡಿ ಗ್ರಾಮದಲ್ಲಿ 7 ತರಗತಿ ಓದುತ್ತಿದ್ದಾಳೆ.