ಸರಿಗಮಪ16 ನಲ್ಲಿ ಕನ್ನಡದ ಬಗೆಗಿನ ಅಭಿಮಾನ, ಪ್ರೀತಿ ತುಂಬಿದ ಹಾಡುಗಳಿಂದ ಎಲ್ಲರ ಮನೆಮನ ಗೆದ್ದವರು ರುಬಿನಾ. ಬೊಂಬೆ ಹೇಳುತೈತೆ...ಮತ್ತೆ ಹೇಳುತೈತೆ... ಹಾಡಿನ ಧಾಟಿಯಲ್ಲಿ ಕನ್ನಡ ಶಾಲೆ ಹಾಡನ್ನು ಹೇಳಿ ಎಲ್ಲರ ಮನವನ್ನು ಗೆದ್ದಿದ್ದರು ಈ ಪುಟ್ಟ ಬಾಲಕಿ. 

ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು, ಅದರಲ್ಲೂ ಇತ್ತೀಚೆಗೆ ಆಂಗ್ಲ ಮಾಧ್ಯಮದ ಪ್ರಭಾವವೇ ಹೆಚ್ಚು. ಹೀಗಾಗಿ ಕನ್ನಡ ಮಾಧ್ಯಮ ಶಾಲೆಗಳೆಡೆ ತಿರುಗಿ ನೋಡುವವರು ಕೆಲವರಷ್ಟೇ. ಹೀಗಿರುವಾಗ ಇಲ್ಲೊಬ್ಬ 'ಕನ್ನಡತಿ' ತನ್ನ ಶಾಲೆ, ಸರ್ಕಾರಿ ಕನ್ನಡ ಮಾಧ್ಯಮ ಶಾಲೆ ಯಾವ ಆಂಗ್ಲ ಮಾಧ್ಯಮ ಶಾಲೆಗಿಂತಲೂ ಕಡಿಮೆ ಇಲ್ಲ ಎಂಬುವುದನ್ನು ಸಾರಿ ಹೇಳಿದ್ದಾರೆ. 

ಸರ್ಕಾರಿ ಕನ್ನಡ ಶಾಲೆಯ ತಾಕತ್ತನ್ನು ಹಾಡಿನಲ್ಲಿ ಕಟ್ಟಿದ ಹಾವೇರಿಯ ಬಾಲಕಿ

ಇದಾದ ನಂತರ ಒಂದು ಸಂಚಿಕೆಯನ್ನು ಸರ್ಕಾರಿ ಮಕ್ಕಳಿಗಾಗಿ ಡಿಡಿಕೇಟ್ ಮಾಡಬೇಕೆಂದು ನಿರ್ಧರಿಸಿ ಒಂದು ಸಂಚಿಕೆಯನ್ನು ಅವರಿಗಾಗಿ ಮೀಸಲಿಡಲಾಯಿತು. ಈ ಸಂಚಿಕೆಯಲ್ಲಿ ರುಬಿನಾ ಕನ್ನಡ ಶಾಲೆಯ ಬಗ್ಗೆಯೇ ಹಾಡಿದ್ದಾರೆ. ಜ್ಞಾನದ ಬಾಗಿಲು ತೆರೆದಿರುವ ಕನ್ನಡ ಶಾಲೆಗೆ ಚಪ್ಪಾಳೆ.... ಎಂದು ಹೇಳಿ ಮತ್ತೊಮ್ಮೆ ಪ್ರೇಕ್ಷಕರ ಮನ ಗೆದ್ದಿದ್ದಾಳೆ. ಈ ಹಾಡನ್ನು ಇವರ ಟೀಚರ್ ಅನುಸೂಯ ಎಂಬುವವರು ಹೇಳಿಕೊಟ್ಟಿದ್ದಾರೆ. 

 

 

ರುಬಿನಾ ಹಾಡಿಗೆ ಮಹಾಗುರುಗಳಾದ ಹಂಸಲೇಖ ಫುಲ್ ಖುಷ್ ಆಗಿ ಗೋಲ್ಡನ್ ಬಜರ್ ಒತ್ತಿದ್ದಾರೆ.