ಪತ್ತೆಯಾಗ್ತಿದೆ ಪೈರಸಿ ಜಾಲ, ಫೈಟ್ ಮುಂದುವರಿಯಲಿದೆ; ಪೈಲ್ವಾನ್ ಶಪಥ

Published : Sep 20, 2019, 10:40 PM ISTUpdated : Sep 20, 2019, 11:11 PM IST
ಪತ್ತೆಯಾಗ್ತಿದೆ ಪೈರಸಿ ಜಾಲ, ಫೈಟ್ ಮುಂದುವರಿಯಲಿದೆ; ಪೈಲ್ವಾನ್ ಶಪಥ

ಸಾರಾಂಶ

ಪೈಲ್ವಾನ್ ಪೈರಸಿ ಅಸಲಿ ಕತೆ ಏನು?/ ಸಿಸಿಬಿ ಪೊಲೀಸರು ಬಂಧಿಸಿದ ಆರೋಪಿಯಿಂದ ಸ್ಫೋಟಕ ಮಾಹಿತಿ/ ಪೊಲೀಸರ ಕೆಲಸ ಶ್ಲಾಘಿಸಿದ ಕಿಚ್ಚ ಸುದೀಪ್/ ಕನ್ನಡ ಚಿತ್ರಗಳನ್ನು ಚಿತ್ರಮಂದಿರಕ್ಕೆ ಹೋಗಿ ನೋಡಿ

ಬೆಂಗಳೂರು[ಸೆ. 20]  ಸೆಪ್ಟೆಂಬರ್​ 12 ರಂದು ದೇಶಾದ್ಯಂತ ರಿಲೀಸ್​ ಆಗಿ ಅಬ್ಬರಿಸಿದ್ದ ಪೈಲ್ವಾನನಿಗೆ, ಚಿತ್ರ ಬಿಡುಗಡೆಯಾದ ದಿನದಂದೇ ಪೈರಸಿ ಕಾಟ ಎದುರಾಗಿತ್ತು.  ಇದೆಲ್ಲವನ್ನೂ ಮೀರಿ ಪೈಲ್ವಾನ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದ. ಆದ್ರೆ ರಾಜ್ಯದಲ್ಲಿ ಕಿಡಿಗೇಡಿಯೊಬ್ಬ ಹೊತ್ತಿಸಿದ್ದ ಪೈರಸಿ ಕಿಚ್ಚು ಮಾತ್ರ ದೊಡ್ಡ ಸುದ್ದಿಯಾಗಿಹೋಗಿತ್ತು.

ಚಿತ್ರ ಬಿಡಗಡೆ ದಿನವೇ ಪೈರಸಿ ಮಾಡಿದ್ದ ಕಿಡಿಗೇಡಿಯ ಕೃತ್ಯದ ವಿರುದ್ಧ ಸಮರ ಸಾರಿದ್ದ, ಚಿತ್ರದ ನಿರ್ಮಾಪಕಿ ಸ್ವಪ್ನ ಕೃಷ್ಣ ಈ ಬಗ್ಗೆ ಸೈಬರ್​ ಕ್ರೈಂಗೂ ದೂರು ದಾಖಲಿಸಿದ್ದರು.  ತನಿಖೆ ನಡೆಸಿದ ಸೈಬರ್​ ಕ್ರೈಂ ಪೊಲೀಸರು,  ನೆಲಮಂಗಲ ಮೂಲದ ಇಮಚೇನಹಳ್ಳಿಯ ರಾಕೇಶ್ ಎಂಬಾತನನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿರುವುದು ಇಂದಿನ ಮಹತ್ವದ ಸುದ್ದಿ.

‘ಪೈಲ್ವಾನ್’ ಪೈರಸಿ ಆರೋಪಿ ರಾಕೇಶ್ ಬಂಧನ

ಬಂಧಿತ ಆರೋಪಿ ರಾಕೇಶ್​ ವಿರಾಟ್​​ ಫೇಸ್ ಬುಕ್​ ಖಾತೆಯನ್ನು ಜಾಲಾಡಲಾಗಿದ್ದು ಈತ ಸುದೀಪ್ ಚಿತ್ರ ಸೋಲಿಸಲೇಬೇಕು ಅಂತಾ ತಂಡ ಪಣತೊಟ್ಟಂತಿದೆ. ಇದರ ಹಿಂದೆ ಯಾವ ತಂಡವಿದೆ ಎನ್ನುವುದು ತನಿಖೆಯ ನಂತರ ಬಹಿರಂಗವಾಗಲಿದೆ.

ಇತ್ತ ಯಾವಾಗ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಅನ್ನೋ ಮಾಹಿತಿ ಕಿಚ್ಚನ ಕಿವಿ ಮುಟ್ಟಿತೋ ಕಿಚ್ಚ ಸುದೀಪ್​​ ಟ್ವಿಟರ್ ಮೂಲಕ  ಪೊಲೀಸರ ಕಾರ್ಯವೈಖರಿಗೆ ಧನ್ಯವಾದ ತಿಳಿಸಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಸುದೀಪ್ ವಿರುದ್ಧ ಅವಹೇಳನಕಾರಿ ಪೋಸ್ಟ್​ಗಳನ್ನು  ಹಾಕಿದ್ದು ಸಹ ಗಂಭೀರ ಅಪರಾಧವಾಗಿದ್ದು ಹಾಗಾಗಿ ಆರೋಪಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಪೈಲ್ವಾನ್ ಚಿತ್ರತಂಡ ನಿರ್ಧರಿಸಿದೆ. 

ಒಟ್ಟಿನಲ್ಲಿ ಸ್ಯಾಂಡಲ್ ವುಡ್ ನ ಕನ್ನಡ ಚಿತ್ರಗಳು ಉಳಿಯಬೇಕು..ಜನರು ಕನ್ನಡ ಚಿತ್ರಗಳನ್ನು ಚಿತ್ರಮಂದಿರಕ್ಕೆ ತೆರಳಿಯೇ ನೋಡಬೇಕು ಎನ್ನುವುದು  ಎಲ್ಲರ ಸದಾಶಯ. ಇಂಥ ಪೈರಸಿ ವೀರರನ್ನು ಮಟ್ಟ ಹಾಕಿದಾಗ ಮಾತ್ರ ಇಡೀ ಚಿತ್ರರಂಗ ಹಸಿರಾಗಿರಲು ಸಾಧ್ಯ.

 

 

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಪ್ರಾಣ ಸ್ನೇಹಿತೆಗೆ ದ್ರೋಹ ಬಗೆದು ಆಕೆಯ ಗಂಡನಿಂದಲೇ ಗರ್ಭಿಣಿಯಾದ ಖ್ಯಾತ ನಟಿ; ಮುಂದೇನಾಯ್ತು?
ರಾಜ್ ಹೆಸರನ್ನು ಸಮಂತಾ ಬಲಗೈ ಮಧ್ಯದ ಬೆರಳಿನಲ್ಲಿ ಅಡಗಿಸಿಟ್ಟ ರಹಸ್ಯವೇನು? ನಟಿಯ ಗುಟ್ಟು ರಟ್ಟಾಯ್ತು!