
ಮುಂಬೈ[ಸೆ. 19] ಕೆಜಿಎಫ್ ಚಿತ್ರದಲ್ಲಿ ಖಡಕ್ ‘ಜೋಕೆ ನಾನು ಬಳ್ಳಿಯ ಮಿಂಚು’ ಎಂದು ಸೊಂಟ ಬಳುಕಿಸಿದ್ದ ನಟಿಯ ಕಾರಿನ ಮೇಲೆ ಕಲ್ಲು ಬಿದ್ದಿದೆ. ನಟಿ ಮೌನಿ ರಾಯ್ ಸಿಗ್ನಲ್ ನಲ್ಲಿ ಕುಳಿತ್ತಿದ್ದ ವೇಳೆ ಕಾರಿನ ಮೇಲೆ ಕಲ್ಲು ಬಿದ್ದಿದ್ದು ಕೋಪಗೊಂಡ ನಟಿ ಸಾಮಾಜಿಕ ಜಾಲತಾಣದಲ್ಲಿ ಮೆಟ್ರೋ ಕಾಮಗಾರಿ ವಿರುದ್ಧ ಹರಿಹಾಯ್ದಿದ್ದಾರೆ.
ಮುಂಬೈನಲ್ಲಿ ಮೆಟ್ರೋ ಕಾಮಗಾರಿ ವರ್ಷಗಳಿಂದ ನಡೆಯುತ್ತಲೇ ಇದೆ. ಜುಹು ಸಿಗ್ನಲ್ ಬಳಿ ಮೌನಿ ರಾಯ್ ಕಾರು ನಿಲ್ಲಿಸಿದ್ದರು. ಆಗ ಕಾರಿನ ಮೇಲೆ ಕಲ್ಲು ಬಿದ್ದಿದೆ. ಇದರಿಂದ ಕೋಪಗೊಂಡ ನಟಿ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಹಬಿಟ್ಟಿದ್ದಾರೆ.
ಹಾಟ್ ಲುಕ್‌ನಲ್ಲಿ ಕೆಜಿಎಫ್ ಕ್ವೀನ್
ಕಾಮಗಾರಿ ನಡೆಯುತ್ತಿರುವ ಬಗ್ಗೆ ನಾಮಫಲಕ ಹಾಕಿಲ್ಲ. ಸಾಮಾನ್ಯ ಜನರು ಓಡಾಡುತ್ತಿರುವ ಸ್ಥಳದಲ್ಲಿ ಮುಂಬೈ ಮೆಟ್ರೋ ಬೇಜವಾಬ್ದಾರಿತನದಿಂದ ವರ್ತಿಸಿದ್ದು ಪ್ರಾಣ್ಕಕೆ ಸಂಚಕಾರ ಬಂದರೆ ಏನು ಮಾಡುತ್ತೀರಿ.. 11ನೇ ಮಹಡಿ ಎತ್ತರದಿಂದ ಕಲ್ಲು ಬಿದ್ದಿದೆ .. ಇಂಥ ವರ್ತನೆ ಯಾವಾಗ ಕಡಿಮೆಯಾಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.