ಈ ಸಂಗತಿಯನ್ನು ಅವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಆ ವಿಡಿಯೋ ಶಾರ್ಟ್ಸ್ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ವೈರಲ್ ಆಗ್ತಿದೆ. ಹಾಗಿದ್ದರೆ ನಟ ಯಶ್ ಹೋಗಿದ್ದು, ಅದೇ ಜಾಗಕ್ಕೆ ಡಾ ರಾಜ್‌ಕುಮಾರ್..
ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ (Rocking Star Yash) ಅವರು ಉತ್ತರ ಕನ್ನಡ ಜಿಲ್ಲೆಯ ಯಾಣಕ್ಕೆ ಹೋಗಿದ್ದಾರೆ. ಅಲ್ಲಿ 4 ಕೀಲೋ ಮೀಟರ್ ನಡೆದುಕೊಂಡು ಹೋಗಿದ್ದಾರೆ. ಹೀಗಾಗಿ ನಟ ಯಶ್‌ಗೆ ಬಹಳಷ್ಟು ಸುಸ್ತಾಗಿದೆ. ಅದನ್ನು ಮನೆಗೆ ಬಂದು ತಮ್ಮ ಅಮ್ಮನ ಬಳಿ ಹೇಳಿಕೊಂಡಿದ್ದಾರೆ. 'ನಾನು ತುಂಬಾ ಕಷ್ಟಪಟ್ಟು ಬರೋಬ್ಬರಿ 4 ಕೀಮೀ ನಡೆದುಕೊಂಡು ಹೋಗಿ ಇವತ್ತು ಶೂಟಿಂಗ್ ಮುಗಿಸಿಕೊಂಡು ಬಂದಿದ್ದೇನೆ. ತುಂಬಾ ಕಷ್ಟಪಟ್ಟು ನಟ ಆಗ್ತಿದೀನಿ ಅನ್ನೋ ಅರ್ಥದಲ್ಲಿ ಹೇಳಿದ್ದಾರೆ.
ಆದರೆ, ಯಶ್ ಅಮ್ಮ ಪುಷ್ಪಾ ಅವರು ಅದಕ್ಕೇ ಬೇರೆಯದೇ ರೀತಿಯಲ್ಲಿ ಉತ್ತರ ಕೊಟ್ಟಿದ್ದಾರೆ. 'ನೀನು ಈಗ ಹೋಗಿದ್ದೀಯ.. ಅದಕ್ಕೆ ಕೇವಲ ನಾಲ್ಕು ಕೀಮೀ ಅಷ್ಟೇ ನಡೆದುಕೊಂಡು ಹೋದೆ. ಆದರೆ, ಡಾ ರಾಜ್‌ಕುಮಾರ್ ಅದೇ ಜಾಗ ಯಾಣಕ್ಕೆ 'ಒಂದು ಮುತ್ತಿನ ಕಥೆ' ಸಿನಿಮಾಗೆ ಶೂಟಿಂಗ್ ಹೋದಾಗ 14 ಕೀಮೀ ನಡೆದುಕೊಂಡು ಹೋಗಬೇಕಿತ್ತು, ಹೋಗಿದ್ದಾರೆ' ಎಂದಿದ್ದಾರೆ. ಆ ಮಾತು ಕೇಳಿ ನಟ ಯಶ್‌ಗೆ ಒಂದು ಕ್ಷಣ ಅಚ್ಚರಿ ಆಗಿದೆ. ಜೊತೆಗೆ, ತಮ್ಮನ್ನು ತಾವೇ ಗ್ರೇಟ್ ಅಂದುಕೊಂಡಿದ್ದಕ್ಕೆ ಮುಜುಗರ ಕೂಡ ಆಗಿದೆ.
ರಾಕಿಂಗ್ ಸ್ಟಾರ್ ಯಶ್ ಮೇರು ನಟ ಡಾ ರಾಜ್‌ಕುಮಾರ್ ಬಗ್ಗೆ ಹೇಳಿರೋ ಮಾತು.. ಹೀಗಾ...!?
ಈ ಸಂಗತಿಯನ್ನು ಅವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಆ ವಿಡಿಯೋ ಶಾರ್ಟ್ಸ್ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ವೈರಲ್ ಆಗ್ತಿದೆ. ಹಾಗಿದ್ದರೆ ನಟ ಯಶ್ ಹೋಗಿದ್ದು, ಅದೇ ಜಾಗಕ್ಕೆ ಡಾ ರಾಜ್‌ಕುಮಾರ್ ಕೂಡ ಹೋಗಿದ್ದು ಯಾವ ಜಾಗ? ಅದು ಎಲ್ಲಿದೆ? ಅದಕ್ಕೆ ಉತ್ತರ.. ಯಾಣ! ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಯಾಣ, ಟ್ರಕ್ಕಿಂಗ್ ಪ್ಲೇಸ್ ಎನ್ನಬಹುದು. ಗುಡ್ಡಗಾಡು ಪ್ರದೇಶದಲ್ಲಿರುವ ಯಾಣ ನ್ಯಾಚುರಲ್ ಅಗಿ ನಿರ್ಮಿತವಾದ ಕಲ್ಲಿನ ಶಿಖರ ಇರೋ ಕಾರಣಕ್ಕೆ ಫೇಮಸ್.
ಅಲ್ಲಿ, ಅಂದರೆ ಯಾಣದಲ್ಲಿ ಡಾ ರಾಜ್‌ಕುಮಾರ್ ನಟನೆ, ಶಂಕರ್ ನಾಗ್ ನಿರ್ದೇಶನದ 'ಒಂದು ಮುತ್ತಿನ ಕಥೆ' ಹಾಗೂ ಯಶ್ ನಟನೆ, ಶಶಾಂಕ್ ನಿರ್ದೇಶನದ 'ಮೊಗ್ಗಿನ ಮನಸು' ಚಿತ್ರದ ಶೂಟಿಂಗ್ ನಡೆದಿದೆ. ಅಲ್ಲಿಗೆ ನಟ ಯಶ್ ಅವರು 4 ಕೀಮೀ ನಡೆದುಕೊಂಡೇ ಹೋಗಿದ್ದಾರೆ. ಆದರೆ ಡಾ ರಾಜ್‌ಕುಮಾರ್ ಅವರು 'ಒಂದು ಮುತ್ತಿನ ಕಥೆಗೆ ಶೂಟಿಂಗ್‌ಗೆ ಹೋದಾಗ, ಅಲ್ಲಿ ಈಗಿನಷ್ಟು ಯಾಣಕ್ಕೆ ಸಮೀಪವಾಗಿ ರಸ್ತೆ ಮಾಡಿರಲಿಲ್ಲ. ಆಗ ಯಾಣದ ಭೈರವೇಶ್ವರ ದೇವಸ್ಥಾನ, ಶಿಖರ ಹಾಗೂ ಮೋಹಿನಿ ಶಿಖರಕ್ಕೆ ತಲುಪಲು ಬರೋಬ್ಬರಿ 14 ಕಿಲೋ ಮೀಟರ್ ನಡೆದುಕೊಂಡೇ ಹೋಗಬೇಕಿತ್ತು. ಒಂದು ಮುತ್ತಿನ ಕಥೆಯ ಇಡೀ ಟೀಮ್ ಆ ಕಾರಣಕ್ಕೆ 14 ಕೀಮೀ ನಡೆದುಕೊಂಡೇ ಹೋಗಿದೆ.
ಅಶ್ವಿನ ದೇವತೆಗಳು 'ಅಸ್ತು' ಅಂದ್ಬಿಟ್ರಾ?.. ಸೌಂದರ್ಯಾ ಸಾವಿನ ಸುಳಿವು ಹಲವರಿಗೆ ಮೊದಲೇ ಸಿಕ್ಕಿತ್ತಾ?
'ಮೊಗ್ಗಿನ ಮನಸ್ಸು ಅನ್ನೋ ಸಿನಿಮಾ ಶೂಟಿಂಗ್‌ನಲ್ಲಿ 'ಯಾಣ' ಅನ್ನೋ ಜಾಗಕ್ಕೆ ನಾಲ್ಕು ಕಿಲೋ ಮೀಟರ್ ದೂರ ನಡ್ಕೊಂಡು ಹೋಗಿದ್ವಿ.. ಮನೆಗೆ ಬಂದು ನಾನು ನನ್ನ ಅಮ್ಮನಿಗೆ ಹೇಳ್ತಾ ಇದ್ದೆ, ನಾನು 4 ಕೀಮೀ ನಡ್ಕೊಂಡು ಹೋಗಿ ಶೂಟಿಂಗ್ ಮುಗಿಸಿಕೊಂಡು ಬಂದಿದೀನಿ ಅಂತ..' ಅಂತ ಯಶ್ ಹೇಳಿರೋ ಮಾತುಗಳು ಈಗ ವೈರಲ್ ಆಗ್ತಿದೆ. ಆದರೆ, ಈಗ ಯಶ್ ಅವರು ಇಂಟರ್‌ನ್ಯಾಷನಲ್ ಸ್ಟಾರ್ ಅಗಿ ಮಿಂಚುತ್ತಿದ್ದಾರೆ. ಲೈಫಲ್ಲಿ ಮಿರಾಕಲ್, ಸಾಧನೆ ಅಂದ್ರೆ ಇದೇನಾ?