ನಟಿ ಐಶ್ವರ್ಯಾ ರೈ ಅವರ ಕಾರಿಗೆ ಮುಂಬೈನಲ್ಲಿ ಸರ್ಕಾರಿ ಬಸ್ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್, ಅಪಘಾತದಲ್ಲಿ ಐಶ್ವರ್ಯಾ ರೈ ಕಾರಿನಲ್ಲಿ ಇರಲಿಲ್ಲ ಮತ್ತು ಯಾವುದೇ ಗಂಭೀರ ಹಾನಿ ಸಂಭವಿಸಿಲ್ಲ.
ಮುಂಬೈ (ಮಾ.26): ನಟಿ ಐಶ್ವರ್ಯಾ ರೈ ಅವರ ಕಾರಿಗೆ ಸ್ಥಳೀಯ ಸರ್ಕಾರಿ ಬಸ್ ಡಿಕ್ಕಿ ಹೊಡೆದಿದೆ. ಬಾಲಿವುಡ್ ಶಾದೀಸ್ ಪಾಪರಾಜಿ ಪೇಜ್ ಈ ಮಾಹಿತಿ ನೀಡಿದೆ. ನಟಿಯ ಕಾರ್‌ಗೆಬಸ್ ಢಿಕ್ಕಿ ಹೊಡೆದಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ಐಶ್ವರ್ಯಾ ರೈ ಅವರ ಬಾಡಿಗಾರ್ಡ್ಸ್ ಸಹ ಕಾರ್‌ನಿಂದ ಹೊರಬಂದಿದ್ದರು ಎಂದು ವರದಿಯಾಗಿದೆ. ಅಪಘಾತದ ಸಮಯದಲ್ಲಿ ನಟಿ ಕಾರಿನಲ್ಲಿ ಇದ್ದಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಬಸ್ ಹಿಂದಿನಿಂದ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ರಸ್ತೆಯಲ್ಲಿ 'ಸಾಕಷ್ಟು ಟ್ರಾಫಿಕ್ ಜಾಮ್' ಉಂಟಾಯಿತು ಎಂದು ಪಾಪರಾಜಿ ಪೇಜ್ ಅಪ್‌ಡೇಟ್ ನೀಡಿದೆ. ಹಾಗಿದ್ದರೂ ಕಾರಿಗೆ ಯಾವುದೇ 'ಗಂಭೀರ ಹಾನಿ'ಯಾಗಿಲ್ಲ. ಬಾಡಿಗಾರ್ಡ್ಸ್ ಈ ವಿಷಯದ ಬಗ್ಗೆ ಚರ್ಚೆ ನಡೆಸಿದ ನಂತರ ಕಾರು ಸ್ಥಳದಿಂದ ಹೊರಟಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ನಟಿ ಕಾರ್‌ನಿಂದ ಇಳಿಯದೇ ಇದ್ದರೂ ಮುಂಬೈ ಜನರಿಗೆ ಇದು ಐಶ್ವರ್ಯಾ ರೈ ಅವರ 1.5 ಕೋಟಿಯ ಟೊಯೋಟಾ ವೆಲ್‌ಫೈರ್ ಕಾರು ಎಂದು ಖಚಿತವಾಗಿ ಹೇಳೋದಕ್ಕೆ ಕಾರಣವಿದೆ. ಐಶ್ವರ್ಯಾ ರೈ ಅವರ ಎಲ್ಲಾ ಕಾರ್‌ನ ನಂಬರ್ ಪ್ಲೇಟ್ 5050 ಎನ್ನುವ ನಂಬರ್ ಹೊಂದಿದೆ. ಅದೇ ಕಾರಣಕ್ಕಾಗಿ ಇದು ಐಶ್ವರ್ಯಾ ರೈ ಕಾರು ಎಂದು ಗೊತ್ತಾಗಿದೆ. ಕಳೆದ ವರ್ಷ ಈ ಕಾರ್‌ಅನ್ನು ಐಶ್ವರ್ಯಾ ರೈ ಖರೀದಿ ಮಾಡಿದ್ದರು. ಐಶ್ವರ್ಯಾ ಅವರಲ್ಲದೆ, ಟೊಯೋಟಾ ವೆಲ್‌ಫೈರ್ ಅನ್ನು ಅಕ್ಷಯ್ ಕುಮಾರ್, ಸಂಜಯ್ ಕಪೂರ್, ಅಜಯ್ ದೇವಗನ್, ರಾಕೇಶ್ ರೋಷನ್, ಅಭಿಷೇಕ್ ಬಚ್ಚನ್ ಮತ್ತು ಇನ್ನೂ ಅನೇಕ ಸೆಲೆಬ್ರಿಟಿಗಳು ಹೊಂದಿದ್ದಾರೆ. ಈ ವಾಹನವು ಐಷಾರಾಮಿ ಮತ್ತು ಸೌಕರ್ಯದೊಂದಿಗೆ ಬೆರೆತಿದೆ.
ಇತ್ತೀಚಿನ ಪ್ರವಾಸಗಳಲ್ಲಿ ಐಶ್ವರ್ಯಾ ಈ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪತಿ ಅಭಿಷೇಕ್ ಜೊತೆಗೆ, ಅವರು ರೋಲ್ಸ್ ರಾಯ್ಸ್ ಘೋಸ್ಟ್ (₹6.95 ಕೋಟಿ), ಆಡಿ A8L (₹1.34 ಕೋಟಿ), ಮರ್ಸಿಡಿಸ್-ಬೆನ್ಜ್ S500 (₹1.98 ಕೋಟಿ), ಮರ್ಸಿಡಿಸ್-ಬೆನ್ಜ್ S350d ಕೂಪೆ (₹1.60 ಕೋಟಿ) ಮತ್ತು ಲೆಕ್ಸಸ್ LX 570 (₹2.84 ಕೋಟಿ) ಕಾರುಗಳನ್ನು ಹೊಂದಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅನೇಕ ಅಭಿಮಾನಿಗಳು, ನಟಿಯ ಸುರಕ್ಷತೆಯ ಬಗ್ಗೆ ಆಘಾತ ಮತ್ತು ಕಳವಳ ವ್ಯಕ್ತಪಡಿಸಿದ್ದಾರೆ. "ಓ ದೇವರೇ, ಅವರು ಚೆನ್ನಾಗಿದ್ದಾರೆಂದು ಭಾವಿಸುತ್ತೇನೆ" ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಐಶ್ವರ್ಯಾ ಸುರಕ್ಷಿತವಾಗಿದ್ದಾರೆಂದು ಭಾವಿಸುತ್ತೇನೆ" ಎಂದು ಕಾಮೆಂಟ್ ಪೋಸ್ಟ್ ಮಾಡಿದ್ದಾರೆ.. "ದೇವರಿಗೆ ಧನ್ಯವಾದಗಳು ಕಾರಿಗೆ ಯಾವುದೇ ಹಾನಿಯಾಗಿಲ್ಲ. ಐಶ್ ಸುರಕ್ಷಿತವಾಗಿದ್ದಾರೆಂದು ಭಾವಿಸುತ್ತೇನೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಐಶ್ವರ್ಯಾ ರೈ ಕಾರಿಗೆ ಡಿಕ್ಕಿ ಹೊಡೆದ ಬಸ್; ವಿಡಿಯೋ ವೈರಲ್
ಐಶ್ವರ್ಯಾ ರೈ ಕೊನೆಯ ಬಾರಿಗೆ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್: ಭಾಗ 2 ರಲ್ಲಿ ಕಾಣಿಸಿಕೊಂಡರು. ಆ ಚಿತ್ರದಲ್ಲಿನ ಅವರ ಅಭಿನಯಕ್ಕಾಗಿ ಅವರು ಮೆಚ್ಚುಗೆ ಪಡೆದಿದ್ದರು. ದುಬೈನಲ್ಲಿ ನಡೆದ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ (SIIMA) ಅವರು ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ (ವಿಮರ್ಶಕರು) ಪ್ರಶಸ್ತಿಯನ್ನು ಗೆದ್ದರು. ಮಣಿರತ್ನಂ ನಿರ್ದೇಶಿಸಿದ ಈ ಮಹಾಕಾವ್ಯ ಐತಿಹಾಸಿಕ ಆಕ್ಷನ್ ಡ್ರಾಮಾ 2023 ರಲ್ಲಿ ಬಿಡುಗಡೆಯಾಯಿತು.
ಶ್ರೀದೇವಿಯ ನೆಕ್ಲೇಸ್ ಆಕೆ ಸತ್ತ ಕೆಲವೇ ದಿನಗಳಲ್ಲಿ ಐಶ್ವರ್ಯ ಕೊರಳಿಗೆ ಹೇಗೆ ಬಂತು?
ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಅವರನ್ನು 2007ರ ಏಪ್ರಿಲ್ 20ರಂದು ವಿವಾಹವಾದರು. ಅವರು ಅಮಿತಾಬ್ ಬಚ್ಚನ್ ಅವರ ಬಂಗಲೆಗಳಲ್ಲಿ ಒಂದಾದ ಪ್ರತೀಕ್ಷಾದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಹಸೆಮಣೆ ಏರಿದ್ದರು. ಈ ಜೋಡಿಗೆ 2011ರ ನವೆಂಬರ್ 16ರಂದು ತಮ್ಮ ಮಗಳು ಆರಾಧ್ಯಳನ್ನು ಜನಿಸಿದ್ದಳು. ಐಶ್ವರ್ಯಾ ಇತ್ತೀಚೆಗೆ ತಮ್ಮ ದಿವಂಗತ ತಂದೆ ಕೃಷ್ಣರಾಜ್ ರೈ ಅವರ 8 ನೇ ಪುಣ್ಯತಿಥಿಯಂದು ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದರು.