ಖ್ಯಾತ ನಿರ್ದೇಶಕ ಭಾರತಿರಾಜ ಅವರ ಪುತ್ರ, ನಟ ಮನೋಜ್ ಭಾರತಿರಾಜ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ತಾಜ್ ಮಹಲ್ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
ಚೆನ್ನೈ (ಮಾ.25): ತಮಿಳು ಚಿತ್ರರಂಗದ ಪ್ರಖ್ಯಾತ ನಿರ್ದೇಶಕ ಭಾರತಿರಾಜ ಅವರ ಪುತ್ರ, ನಟ ಮನೋಜ್ ಹೃದಯಾಘಾತದಿಂದ ಮಂಗಳವಾರ ನಿಧನರಾದರು. 1999 ರಲ್ಲಿ ಭಾರತಿರಾಜ ನಿರ್ದೇಶನದ ತಾಜ್ ಮಹಲ್ ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದರು. ತಮ್ಮ 48ನೇ ವಯಸ್ಸಿನಲ್ಲಿ ಅವರ ಸಾವು ಕಂಡಿದ್ದಾರೆ.
ತಂದೆಯ ತಾಜ್‌ಮಹಲ್ ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಬಳಿಕ, ಸಮುದ್ರಂ, ಕಡಲ್ ಪೂಕ್ಕಲ್, ಅಲ್ಲಿ ಅರ್ಜುನ, ವರುಷಂ ತುಳ್ಳವ ವಸಂತಂ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದರು. ಆದರೆ ಅವರು ಹೀರೋ ಆಗಿ ದೊಡ್ಡ ಮಟ್ಟದ ಯಶಸ್ಸು ಸಂಪಾದಿಸಲಿಲ್ಲ. ಅವರು 2023 ರಲ್ಲಿ ಬಿಡುಗಡೆಯಾದ ಮಾರ್ಗಜಿ ತಿಂಗಲ್ ಚಿತ್ರದ ಮೂಲಕ ತಮ್ಮ ನಿರ್ದೇಶನವನ್ನು ಪ್ರಾರಂಭಿಸಿದರು.ಹಲವು ಚಿತ್ರಗಳನ್ನು ನಿರ್ದೇಶನ ಮಾಡಬೇಕು ಅನ್ನೋ ನಿರೀಕ್ಷೆಯಲ್ಲಿದ್ದ ಮನೋಜ್ ಅವರ ಹಠಾತ್ ಸಾವು ಚಿತ್ರರಂಗವನ್ನು ಆಘಾತಕ್ಕೀಡು ಮಾಡಿದೆ. ಅವರು 2006 ರಲ್ಲಿ ನಟಿ ನಂದನಾ ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಸಂಜೆ 6 ಗಂಟೆ ಸುಮಾರಿಗೆ ಅವರು ತಮ್ಮ ಚೆಟ್‌ಪಟ್ ಮನೆಯಲ್ಲಿ ನಿಧನರಾದರು ಎಂದು ಹೇಳಲಾಗಿದೆ.
ವಡಿವೇಲುರನ್ನ ಸಿನಿಮಾದಿಂದ ಹೊರಹಾಕಿದ ಭಾರತಿರಾಜಾ
ಮನೋಜ್ ತಮಿಳು ಚಲನಚಿತ್ರ ನಿರ್ಮಾಪಕ ಶಂಕರ್ ಅವರ 'ಎಂಥಿರನ್' ಚಿತ್ರದಲ್ಲಿ ಸಹಾಯಕರಾಗಿಯೂ ಕೆಲಸ ಮಾಡಿದ್ದರು. ಇತ್ತೀಚೆಗೆ, ನಟ 'ಚಾಂಪಿಯನ್', 'ಈಶ್ವರನ್', 'ಮಾನಾಡು' ಮತ್ತು 'ವಿರುಮನ್' ಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಹೃದಯ ಶಸ್ತ್ರಚಿಕಿತ್ಸೆ ಒಳಗಾಗಿದ್ದರು ಎಂದು ವರದಿಯಾಗಿವೆ. ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಅವರು ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ. ಅವರು ಕೊನೆಯ ಬಾರಿಗೆ 'ಸ್ನೇಕ್ಸ್ ಅಂಡ್ ಲ್ಯಾಡರ್ಸ್' ಚಿತ್ರದ ಮೂಲಕ ಒಟಿಟಿ ವೇದಿಕೆಗೆ ಪಾದಾರ್ಪಣೆ ಮಾಡಿದ್ದರಯ. ನಟನ ಅಕಾಲಿಕ ಮರಣವು ತಮಿಳು ಚಲನಚಿತ್ರೋದ್ಯಮವನ್ನು ಆಘಾತಕ್ಕೆ ದೂಡಿದೆ. ಮನೋಜ್ ಅವರ ಪತ್ನಿ ನಂದಣ್ಣ ಮತ್ತು ಇಬ್ಬರು ಹೆಣ್ಣುಮಕ್ಕಳಾದ ಅರ್ಥಿಕಾ ಮತ್ತು ಮತಿವದಾನಿ ಅವರನ್ನು ಅಗಲಿದ್ದಾರೆ.
ಸಿಲ್ಕ್ ಸ್ಮಿತಾರನ್ನ ರಿಜೆಕ್ಟ್ ಮಾಡಿದ್ದ ನಿರ್ದೇಶಕ ಭಾರತಿರಾಜ, ಆಮೇಲೆ ಅವರನ್ನೇ ಯಾಕೆ ಹುಡುಕಿಕೊಂಡು ಬಂದ್ರು!