2005ರಲ್ಲಿ ನಟ ಆಮೀರ್ ಖಾನ್‌ರನ್ನು ಮದುವೆಯಾಗಿದ್ದ ಬೆಂಗಳೂರು ಮೂಲದ ನಿರ್ದೇಶಕಿ ಕಿರಣ್ ರಾವ್, 2021ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಇದೇ ಮೊದಲ ಬಾರಿಗೆ ಅವರು ಆಮೀರ್ ಖಾನ್‌ರನ್ನು ಮದುವೆಯಾದ ಬಗ್ಗೆ ಮಾತನಾಡಿದ್ದಾರೆ.
ಲಾಪತಾ ಲೇಡೀಸ್ ಸಿನಿಮಾದ ಮೂಲಕ ಗಮನಸೆಳೆದಿರುವ ಬೆಂಗಳೂರು ಮೂಲದ ನಿರ್ದೇಶಕಿ ಕಿರಣ್ ರಾವ್, ನಟ ಹಾಗೂ ನಿರ್ದೇಶಕ ಆಮೀರ್ ಖಾನ್ ಅವರ ಜೊತೆಗಿನ ಮದುವೆ ಹಾಗೂ ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. 2005ರಲ್ಲಿ ಮದುವೆಯಾಗುವ ಮುನ್ನ ತಾವಿಬ್ಬರೂ, ಒಂದು ವರ್ಷಗಳ ಕಾಲ ಲಿವ್‌ಇನ್ ರಿಲೇಷನ್‌ಷಿಪ್‌ನಲ್ಲಿದ್ದರು ಎಂದೂ ತಿಳಿಸಿದ್ದಾರೆ. ಮದುವೆಯು ಒಂದು ಸುಂದರವಾದ ಪರಿಕಲ್ಪನೆ ಎಂದು ಹೇಳಿರುವ ಕಿರಣ್ ರಾವ್, ಮಹಿಳೆಯರು ಸಾಮಾನ್ಯವಾಗಿ ಮನೆ ಮತ್ತು ಗಂಡನ ಕುಟುಂಬದೊಂದಿಗೆ ಸಂಬಂಧಗಳನ್ನು ಕಾಪಾಡಿಕೊಳ್ಳುವ ವಿಚಾರಗಳಲ್ಲಿಯೇ ಮುಳುಗಿ ಹೋಗುತ್ತಾರೆ. ಸಮಾಜದಲ್ಲಿ ಹೆಚ್ಚಿನ ಅವಕಾಶಗಳನ್ನು ಅವರು ಪಡೆದುಕೊಳ್ಳೋದಿಲ್ಲ ಎಂದು ಕಿರಣ್ ಹೇಳಿದ್ದಾರೆ.
ಪೀಪಲ್ಸ್ ಟಿವಿ ಯೂಟ್ಯೂಬ್ ಚಾನೆಲ್‌ನ ಜೊತೆ ಮಾತನಾಡಿದ ಕಿರಣ್, ಆಮೀರ್ ಖಾನ್‌ಅವರನ್ನು ಮದುವೆಯಾದ ವಿಚಾರವಾಗಿಯೂ ಮಾತನಾಡಿದರು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಹಾಗೂ ಆಮೀರ್ ಮದುವೆಯಾಗುವ ಮುನ್ನ ಒಂದು ವರ್ಷಗಳ ಕಾಲ ಲಿವ್ ಇನ್ ರಿಲೇಷನ್‌ಷಿಪ್‌ನಲ್ಲಿದ್ದೆವು. ಆದರೆ, ನನ್ನ ಪೋಷಕರ ಒತ್ತಡದ ಕಾರಣದಿಂದಾಗಿ ನಾವು ಮದುವೆಯಾಗಬೇಕಾಯಿತು. ಮದುವೆ ಅನ್ನೋದು ಉತ್ತಮ ಪರಿಕಲ್ಪನೆ ಅನ್ನೋದು ನನಗೆ ಗೊತ್ತು. ಆದರೆ, ಮದುವೆಯ ಒಳಗೆ ಏಕಕಾಲದಲ್ಲಿ ಸಿಂಗಲ್ ಆಗಿಯೂ ಮತ್ತೊಮ್ಮೆ ದಂಪತಿಯಾಗಿಯೂ ಯೋಚನೆ ಮಾಡೋಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
"ನೀವು ಮದುವೆಯನ್ನು ಅರ್ಥೈಸುವ ವಿಧಾನವು ಮುಖ್ಯವಾಗಿದೆ ಏಕೆಂದರೆ ಇದು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಮತ್ತು ಈ ಸಾಮಾಜಿಕ ಮಂಜೂರಾತಿ ನಿಜವಾಗಿಯೂ ಬಹಳಷ್ಟು ಜನರಿಗೆ ಮುಖ್ಯವಾಗಿದೆ. ಇದು ಮಕ್ಕಳಿಗೆ ಮುಖ್ಯವಾಗಿದೆ. ಮದುವೆಯು ನಿಮಗೆ ನೀಡುವ ಬಹಳಷ್ಟು ಉತ್ತಮ ಸಂಗತಿಗಳಿವೆ. ಇದು ನಿಮಗೆ ಹೊಸ ಕುಟುಂಬವನ್ನು ನೀಡುತ್ತದೆ, ಅದು ನಿಮಗೆ ಸಂಬಂಧಗಳನ್ನು ನೀಡುತ್ತದೆ ಮತ್ತು ಇದು ನಿಮಗೆ ಭದ್ರತೆ ಮತ್ತು ಸ್ಥಿರತೆಯ ಅರ್ಥವನ್ನು ನೀಡುತ್ತದೆ' ಎಂದು ಹೇಳಿದ್ದಾರೆ.
ಜವಾಬ್ದಾರಿಗಳ ವಿಷಯದಲ್ಲಿ ಸಂಬಂಧದಲ್ಲಿನ ಅಸಮತೋಲನದ ಬಗ್ಗೆ ಮಾತನಾಡಿದ ಕಿರಣ್, “ಮಹಿಳೆಯ ಮೇಲೆ ಮನೆಯನ್ನು ನಡೆಸುವುದು, ಕುಟುಂಬವನ್ನು ಒಟ್ಟಿಗೆ ಇಡುವುದು ತುಂಬಾ ಜವಾಬ್ದಾರಿ ಆಕೆಯ ಮೇಲಿರುತ್ತದೆ. ವಾಸ್ತವವಾಗಿ, ಮಹಿಳೆಯರು ಅತ್ತೆ ಮಾವನ ಜೊತೆ ಸಂಪರ್ಕದಲ್ಲಿರಬೇಕು ಎಂದು ನಿರೀಕ್ಷಿಸಲಾಗುತ್ತದೆ. ಮಹಿಳೆಯರು ನಿಮ್ಮ ಗಂಡನ ಕುಟುಂಬದೊಂದಿಗೆ ಸ್ನೇಹದಿಂದ ವರ್ತಿಸಬೇಕು ಎಂದು ಹೇಳಲಾಗುತ್ತದೆ. ಆದರೆ, ಮಹಿಳೆಯ ಮೇಲೆ ಇರುವ ದೊಡ್ಡ ನಿರೀಕ್ಷೆ ಇದು. ಇದನ್ನು ಸಂಭಾಳಿಸುವುದೇ ಕಷ್ಟ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ.
ಕಿರಣ್ ಮತ್ತು ಅಮೀರ್ 16 ವರ್ಷಗಳ ದಾಂಪತ್ಯದ ನಂತರ 2021 ರಲ್ಲಿ ತಮ್ಮ ವಿಚ್ಛೇದನವನ್ನು ಘೋಷಿಸಿದರು ಮತ್ತು ವಿಚ್ಛೇದನದ ಬಗ್ಗೆ ಭಯವಿತ್ತೇ ಎಂದು ಕೇಳಿದಾಗ, ಕಿರಣ್ ಅವರು ಆ ನಿರ್ಧಾರಕ್ಕೆ ಬರಲು ಹೆಚ್ಚಿನ ಸಮಯ ತೆಗೆದುಕೊಂಡಿದ್ದಾಗಿ ಹೇಳಿದರು.
100 ಕೋಟಿ ಬಜೆಟ್ನ ಕ್ರೌರ್ಯ ಬಿಂಬಿಸುವ 'ಅನಿಮಲ್' ದಾಖಲೆ ನುಂಗಿದ 4 ಕೋಟಿಯ 'ಲಪತಾ ಲೇಡೀಸ್'!
ನಾನು ತುಂಬಾ ಉತ್ತಮ ಸಮಯ ತೆಗೆದುಕೊಂಡೆ. ವಿಚ್ಛೇದನಕ್ಕಾಗಿ ನಾನು ಚಿಂತೆ ಪಟ್ಟಿರಲಿಲ್ಲ. ನಾನು ಹಾಗೂ ಅಮೀರರ್ ಬಹಳ ಗಟ್ಟಿಯಾದ ಸಂಬಂಧದಲ್ಲಿದ್ದೆವು. ಇಬ್ಬರು ಮನುಷ್ಯರ ನಡುವಿನ ಗಟ್ಟಿಯಾದ ಬಂಧ ಅದು. ನಾವು ಒಬ್ಬರಿಗೊಬ್ಬರು ತುಂಬಾ ಸಂಪರ್ಕ ಹೊಂದಿದ್ದೇವೆ ಮತ್ತು ನಾವು ಒಬ್ಬರನ್ನೊಬ್ಬರು ಆಳವಾಗಿ ಗೌರವಿಸುತ್ತೇವೆ ಮತ್ತು ಪ್ರೀತಿಸುತ್ತೇವೆ ಆದ್ದರಿಂದ ಅದು ಬದಲಾಗಿಲ್ಲ. ಆದ್ದರಿಂದ, ನಾನು ಚಿಂತೆ ಮಾಡಲಿದೆ. ನನಗೆ ನನ್ನ ಸ್ಥಳದ ಅಗತ್ಯವಿದೆ ಎಂದು ನನಗೆ ತಿಳಿದಿತ್ತು. ನಾನು ಸ್ವತಂತ್ರವಾಗಿ ಬದುಕಬೇಕು ಅನ್ನೋ ಆಸೆ ಇತ್ತು ಎಂದು ಹೇಳಿದ್ದಾರೆ.
ಲಾ ಪತಾ ಲೇಡೀಸ್ ಮೂವಿ ರಿವ್ಯೂ: ಘೂಂಘಟ್ ಗೊಂದಲ, ಪ್ರೇಕ್ಷಕನಿಗೋ ನಿಲ್ಲದ ತಳಮಳ