Latest Videos

ತನ್ನ ಬದುಕಿನಲ್ಲಿ ಬಂದ 6ನೇ ಬಾಯ್‌ಫ್ರೆಂಡ್‌ಗೂ ಗುಡ್‌ಬೈ ಎಂದ ಶೃತಿ ಹಾಸನ್‌, ನಾನೀಗ ಸಿಂಗಲ್‌ ಎಂದ ನಟಿ!

By Santosh NaikFirst Published May 23, 2024, 8:26 PM IST
Highlights

ನಟಿ ಶೃತಿ ಹಾಸನ್‌ ಬದುಕಿನ ಶೃತಿ ಮತ್ತೊಮ್ಮೆ ತಪ್ಪಿದೆ. ಬಾಯ್‌ಫ್ರೆಂಡ್ ಸಂತಾನು ಹಜರಿಕಾ ಜತೆಗಿನ ಬ್ರೇಕ್‌ಅಪ್‌ಅನ್ನು ಖಚಿತಪಡಿಸಿದ್ದಲ್ಲದೆ, ತಾವೀಗ ಸಿಂಗಲ್‌ ಎಂದೂ ನಟಿ ಹೇಳಿದ್ದಾರೆ.


ಗಾಗಲೇ ಗೊತ್ತಿರುವ ಸುದ್ದಿಯೊಂದನ್ನು ನಟಿ ಶೃತಿ ಹಾಸನ್‌ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಮಾಜಿ ಗೆಳೆಯ ಸಂತಾನು ಹಜಾರಿಕಾ ಅವರೊಂದಿಗೆ ಬ್ರೇಕ್‌ಅಪ್‌ ಮಾಡಿಕೊಂಡಿದ್ದಾಗಿ ಅವರು ತಿಳಿಸಿದ್ದಾರೆ. ಇನ್‌ಸ್ಟಾಗ್ರಾಮ್ ಆಸ್ಕ್ ಮಿ ಎನಿಥಿಂಗ್ (AMA) ವೇಳೆ ಅವರು ಇದನ್ನು ಘೋಷಿಸಿದ್ದಾರೆ. ಅದರೊಂದಿಗೆ ಶೃತಿ ಹಾಸನ್‌ ತಮ್ಮ ಬದುಕಿನಲ್ಲಿ ಬಂದ ಆರನೇ ಬಾಯ್‌ಫ್ರೆಂಡ್‌ಗೂ ಗುಡ್‌ಬೈ ಹೇಳಿದಂತಾಗಿದೆ. ಗುರುವಾರ, ಮೇ 23 ರಂದು, ಶ್ರುತಿ ಎಎಂಎ ಸೆಷನ್ ಅನ್ನು ಆಯೋಜಿಸಿದ್ದರು. ಇಲ್ಲಿ ಅವರು ಅಭಿಮಾನಿಯೊಬ್ಬರು ನಿಮ್ಮ ರಿಲೇಷನ್‌ಷಿಪ್‌ ಸ್ಟೇಟಸ್‌ ಏನು ಎಂದು ಪ್ರಶ್ನೆ ಮಾಡಿದ್ದರು. ನೀವು ಸಿಂಗಲ್‌ ಆಗಿದ್ದೀರೋ ಅಥವಾ ಬೇರೆ ಯಾರಿಗಾದರೂ ಕಮಿಟ್‌ ಆಗಿದ್ದೀರಾ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರಿಸಿದ ಸಲಾರ್‌ ನಟಿ, "ನಾನು ಈ ಪ್ರಶ್ನೆಗಳಿಗೆ ಉತ್ತರಿಸಲು ಇಷ್ಟಪಡುವುದಿಲ್ಲ, ಆದರೆ, ನಾನು ಸಂಪೂರ್ಣವಾಗಿ ಒಂಟಿಯಾಗಿದ್ದೇನೆ ಮತ್ತು ಹೊಸ ಸಂಬಂಧಕ್ಕೆ ಸಿದ್ಧನಿದ್ದೇನೆ. ನನ್ನ ಜೀವನವನ್ನು ಎಂಜಾಯ್‌ ಮಾಡುವ ಕೆಲಸ ಮಾಡುತ್ತಿದ್ದೇನೆ. ಸದ್ಯಕ್ಕೆ ನನಗೆ ಅಷ್ಟು ಸಾಕು' ಎಂದಿದ್ದರು. ಕಳೆದ ತಿಂಗಳ ಅಂತ್ಯದಲ್ಲಿ ಇನ್ಸ್‌ಟಾಗ್ರಾಮ್‌ನಲ್ಲಿ ಇದೇ ರೀತಿಯ ಪೋಸ್ಟ್‌ ಹಾಕುವ ಮೂಲಕ ಅವರು ಹಜರಿಕಾ ಜೊತೆ ಬ್ರೇಕಪ್‌ ಮಾಡಿಕೊಂಡಿದ್ದನ್ನು ತಿಳಿಸಿದ್ದರು.

ಸಾಂತನು ಹಜರಿಕಾ 38 ವರ್ಷದ ಶೃತಿ ಹಾಸನ್‌ ಜೀವನದಲ್ಲಿ ಬಂದ ಮೊದಲ ಬಾಯ್‌ಫ್ರೆಂಡ್‌ ಏನಲ್ಲ. ಈತ ಈಕೆಯ ಜೀವನದ 6ನೇ ಬಾಯ್‌ಫ್ರೆಂಡ್‌. ಇದಕ್ಕೂ ಮುನ್ನ 5 ಮಂದಿಯ ಜೊತೆ ಶೃತಿ ಹಾಸನ್‌ ಡೇಟಿಂಗ್‌-ರಿಲೇಷನ್‌ಷಿಪ್‌ನಲ್ಲಿದ್ದರು. ಆದರೆ, ಅದ್ಯಾವುದೂ ಅವರಿಗೆ ವರ್ಕ್‌ಔಟ್‌ ಆಗಿರಲಿಲ್ಲ.

ನಟ ಸಿದ್ಧಾರ್ಥ್‌ ಜೊತೆ ಎರಡು ವರ್ಷಗಳ ಕಾಲ ಶೃತಿ ಹಾಸನ್‌ ರಿಲೇಷನ್‌ಷಿಪ್‌ನಲ್ಲಿದ್ದರು. 2010ರಲ್ಲಿ ಸೆಟ್‌ನಲ್ಲಿ ಮೀಟ್‌ ಆಗಿದ್ದ ಸಿದ್ಧಾರ್ಥ್‌ ಹಾಗೂ ಶೃತಿ, 2011ರ ವೇಳೆ ತಮ್ಮ ನಡುವಿನ ದೊಡ್ಡ ಭಿನ್ನಾಭಿಪ್ರಾಯದ ಕಾರಣದಿಂದಾಗಿ ಬೇರ್ಪಟ್ಟಿದ್ದರು. 2007ರಲ್ಲಿ ಪತ್ನಿ ಮೇಘಾ ನಾರಾಯಣ್‌ಗೆ ವಿಚ್ಛೇದನ ನೀಡಿದ್ದ ಸಿದ್ಧಾರ್ಥ್‌, ಶೃತಿ ಸಲುವಾಗಿ ಕೆಲವೊಂದು ಬಾಲಿವುಡ್‌ ಆಫರ್‌ಗಳನ್ನೂ ಕೂಡ ತಿರಸ್ಕರಿಸಿದ್ದರು.

ಸಿದ್ಧಾರ್ಥ್‌ರಿಂದ ಬೇರ್ಪಟ್ಟ ಬಳಿಕ ಶೃತಿ, ಧನುಷ್‌ ಜೊತೆ ರಿಲೇಷನ್‌ಷಿಪ್‌ನಲ್ಲಿದ್ದರು. ಇದೂ ಕೂಡ ಎರಡು ವರ್ಷ ನಡೆದಿತ್ತು. 3 ಸಿನಿಮಾದಲ್ಲಿ ಇವರಿಬ್ಬರೂ ಒಟ್ಟಿಗೆ ನಟಿಸಿದ್ದರು. ಐಶ್ವರ್ಯಾ ರಜನಿಕಾಂತ್‌ ನಿರ್ದೇಶನದ 3 ಸಿನಿಮಾದ ವೇಳೆಯಲ್ಲೇ ಇವರಿಬ್ಬರೂ ರಿಲೇಷನ್‌ಷಿಪ್‌ನಲ್ಲಿದ್ದರು ಎನ್ನಲಾಗಿದೆ. ಶೃತಿ ಹಾಸನ್‌, ಧನುಷ್‌ ಜೊತೆ ತಮಗೆ ಸ್ನೇಹವಿತ್ತು ಅನ್ನೋದನ್ನೂ ಒಪ್ಪಿಕೊಂಡಿದ್ದರು.

ಧನುಷ್‌ರಿಂದ ಬೇರ್ಪಟ್ಟ ಬಳಿಕ ಒಂದು ವರ್ಷಗಳ ಕಾಲ ನಾಗಚೈತನ್ಯ ಜೊತೆ ಅವರು ಸಂಬಂಧದಲ್ಲಿದ್ದರು. 2017ರಲ್ಲಿ ಸಮಂತಾರನ್ನು ಮದುವೆಯಾಗುವ ಮುನ್ನ 2013ರಲ್ಲಿ ಶೃತಿ ಜೊತೆ ರಿಲೇಷನ್‌ಷಿಪ್‌ನಲ್ಲಿದ್ದರು. 2013ರ ಸೌತ್‌ ಇಂಡಿಯಾ ಫಿಲ್ಮ್‌ಫೇರ್‌ ಅವಾರ್ಡ್ಸ್‌ ನೈಟ್‌ಗೂ ಇಬ್ಬರೂ ಒಟ್ಟಿಗೆ ಆಗಮಿಸಿದ್ದರು. ನಾಗಚೈತನ್ಯ ಹಾಗೂ ಶೃತಿ ಮದುವೆಯಾಗುವ ಹಂತದವರೆಗೂ ಹೋಗಿದ್ದರು ಎನ್ನಲಾಗಿದೆ. ಯಾವುದೋ ಒಂದು ಸಮಯದಲ್ಲಿ ತಂಗಿ ಅಕ್ಷರಾ ಹಾಸನ್‌ ಅವರನ್ನು ಫಂಕ್ಷನ್‌ನಿಂದ ಪಿಕ್‌ ಮಾಡುವಂತೆ ಶೃತಿ ಹಾಸನ್‌, ನಾಗಚೈತನ್ಯಗೆ ತಿಳಿಸಿದ್ದರು. ಆದರೆ, ಇದನ್ನು ನಾಗಚೈತನ್ಯ ಮಾಡಿರಲಿಲ್ಲ. ಇದು ಇವರ ಬ್ರೇಕಪ್‌ಗೆ ಕೊನೆಗೆ ಕಾರಣವಾಯಿತು. ಆದರೆ, 2016ರಲ್ಲಿ ಜೊತೆಯಾಗಿ ಇವರು ಪ್ರೇಮಂನಲ್ಲಿ ನಟಿಸಿದ್ದರು.

2014ರವೇಳೆಗೆ ಸುರೇಶ್‌ ರೈನಾ ಹಾಗೂ ಶೃತಿ ಹಾಸನ್‌ ರಿಲೇಷನ್‌ಷಿಪ್‌ ಸುದ್ದಿ ಹರಿದಾಟಿತ್ತು. ಸಿಎಸ್‌ಕೆಯ ಐಪಿಎಲ್‌ ಪಾರ್ಟಿಯಲ್ಲಿ ಇವರಿಬ್ಬರು ಭೇಟಿಯಾಗಿದ್ದರು. ರೈನಾ ಆಡುವ ಪ್ರತಿ ಐಪಿಎಲ್‌ ಮ್ಯಾಚ್‌ಗೂ ಇವರು ಸ್ಟ್ಯಾಂಡ್‌ನಲ್ಲಿ ಇರುತ್ತಿದ್ದರು. ಆದರೆ, ರೈನಾ ಇದನ್ನು ನಿರಾಕರಿಸಿದ್ದರು.

4 ವರ್ಷ ಒಟ್ಟಿಗಿದ್ದ ಶ್ರುತಿ ಹಾಸನ್​-ಶಂತನು ದೂರವಾಗಿದ್ದೇಕೆ? 2ನೇ ಬಾಯ್​ಫ್ರೆಂಡ್​ ಜೊತೆ ನಟಿಗೆ ಏನಾಯ್ತು?

ಶೃತಿ ಹಾಸನ್‌ ಅತ್ಯಂತ ದೀರ್ಘಕಾಲ ರಿಲೇಷನ್‌ಷಿಪ್‌ನಲ್ಲಿದ್ದ ವ್ಯಕ್ತಿ ಎಂದರೆ, ಮೈಕೆಲ್ ಕೊರ್ಸೇಲ್. ನಾಲ್ಕು ವರ್ಷಗಳ ಕಾಲ ರಿಲೇಷನ್‌ಷಿಪ್‌ನಲ್ಲಿದ್ದರು. ಲಂಡನ್‌ನಲ್ಲಿ ಕಾನ್ಸರ್ಟ್‌ ವೇಳೆ ಇವರು ಭೇಟಿಯಾಗಿದ್ದರು. ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳದೇ ಇದ್ದರೂ, ಕೋರ್ಸೆಲ್‌ ಜೊತೆಗಿನ ಫೋಟೋಗಳನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಳ್ತಿದ್ರು. 2019ರ ಏಪ್ರಿಲ್‌ನಲ್ಲಿ ಸ್ವತಃ ಮೈಕೆಲ್ ಕೊರ್ಸೇಲ್, ಶೃತಿ ಜೊತೆ ಬ್ರೇಕಪ್‌ ಮಾಡಿಕೊಂಡಿದ್ದರು.

ಮದ್ವೆ ಬೇಡ, ಇವ್ನ ಜೊತೆ ಎಂಜಾಯ್​ ಮಾಡ್ತಿದ್ದೇನೆಂದ ಶ್ರುತಿ ಹಾಸನ್ 2ನೇ ಬಾಯ್​ಫ್ರೆಂಡ್​ಗೂ ಗುಡ್​ಬೈ ಹೇಳಿದ್ರಾ?

2022ರ ಜನವರಿಯಲ್ಲಿ ಶೃತಿ ಹಾಸನ್‌ ತಾವು ಸಾಂತನು ಹಜರಿಕಾ ಜೊತೆ ರಿಲೇಷನ್‌ಷಿಪ್‌ನಲ್ಲಿ ಇದ್ದಿದ್ದಾಗಿ ತಿಳಿಸಿದ್ದರು. ತೀರಾ ಇತ್ತೀಚೆಗೆ ಅವರು ಈ ರಿಲೇಷನ್‌ಷಿಪ್‌ಗೂ ಅಂತ್ಯ ಹಾಡಿದ್ದಾರೆ. ಅವರ ಬದುಕಿನಲ್ಲಿ ಮುಂದೆ ಯಾವ ಹುಡುಗ ಬರಲಿದ್ದಾರೆ ಅನ್ನೋ ಕುತೂಹಲವೂ ಎಲ್ಲರಲ್ಲಿದೆ.

click me!