
ಕನ್ನಡದ ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಅವರ ಕಥೆ ಹೇಳಲು ಹೊರಟರೆ ಅದು ಒಂದಲ್ಲ, ಎರಡಲ್ಲ... ಅವರ ಸಾಹಸಗಳು, ಗೆಲುವುಗಳು, ಸೋಲುಗಳು ಎಲ್ಲವೂ ಒಂಥರಾ ವಿಭಿನ್ನ ಹಾಗೂ ವಿಶಿಷ್ಠವೇ ಆಗಿದೆ. ಬಾಲನಟರಾಗಿ ಚಿತ್ರರಂಗಕ್ಕೆ ಬಂದ ರವಿಚಂದ್ರನ್ ಅವರು ನಿರ್ಮಾಪಕರಾದ ವೀರಾಸ್ವಾಮಿಯವರ ಮಗ ಎಂಬುದು ಬಹುತೇಕರಿಗೆ ಗೊತ್ತು. ಹುಟ್ಟುವಾಗಲೇ ಶ್ರೀಮಂತರಾಗಿದ್ದ ರವಿಚಂದ್ರನ್ ಅವರು ತಮ್ಮ ಅಪ್ಪಟ ಸಿನಿಮಾ ಪ್ರೀತಿಯ ಮೂಲಕ ನಟರಾಗಿ ಕಾಲಿಟ್ಟರು. ನಟರಾಗಿ, ನಿರ್ದೇಶಕರಾಗಿ ಅವರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಅಪಾರ. ಆ ಬಗ್ಗೆ ಯಾರಿಗೂ ಯಾವುದೇ ಸಂದೇಹವಿಲ್ಲ.
ನಟ ರವಿಚಂದ್ರನ್ ಅವರು ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ, ಸ್ವಮೇಕ್, ರೀಮೇಕ್ ಎಲ್ಲವನ್ನೂ ಮಾಡಿ ಗೆದ್ದಿದ್ದಾರೆ, ಸೋತಿದ್ದಾರೆ. ಅವರಿಗೆ ಅವರೇ ಸಾಟಿ ಎಂಬಂತೆ ಬದುಕಿದ್ದಾರೆ. ಹುಚ್ಚು ಸಾಹಸಗಳನ್ನು ಮಾಡಿ ಕ್ರೇಜಿ ಸ್ಟಾರ್ ಎಂಬ ಬಿರುದನ್ನೂ ಸಹ ಪಡೆದಿದ್ದಾರೆ. ಇಂಥ ರವಿಚಂದ್ರನ್ ಅವರು ಮಾಡಿರುವ ಮತ್ತೊಂದು ಸಾಹಸ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಬಯಲಾಗಿದೆ. ಹಾಗಿದ್ದರೆ ಅಂಥದ್ದೇನು ಮಾಡಿದ್ದಾರೆ ಕ್ರೇಜಿ ಸ್ಟಾರ್ ರವಿಚಂದ್ರನ್? ಇಲ್ಲಿದೆ ನೋಡಿ ಡೀಟೇಲ್ಸ್..
ಊರ್ಮಿಳಾ ಹೆಸರನ್ನು ಮಗಳಿಗೆ ಇಟ್ಟಿದ್ದೇಕೆ ಶ್ರೀದೇವಿ..? ಆದ್ರೆ 'ತಾಯಿಗೆ ತಕ್ಕ ಮಗಳಲ್ಲ' ಅನ್ನೋದ್ಯಾಕೆ?
ಹೌದು, ನಟ ರವಿಚಂದ್ರನ್ ಮಾಡಿರೋ ಸಾಹಸ ಅಂತಿಂಥದ್ದಲ್ಲ. ಸೌತ್ ಹಾಗೂ ನಾರ್ತ್ ಚಿತ್ರರಂಗದಲ್ಲಿ 80-90ರ ದಶಕದಲ್ಲಿ ಸೂಪರ್ ಸ್ಟಾರ್ ಆಗಿ ಮೆರೆದ ನಟಿ ಶ್ರೀದೇವಿ (Sridevi) ಯಾರಿಗೆ ಗೊತ್ತಿಲ್ಲ? ನಟಿ ಶ್ರೀದೇವಿ ಅವರು ಆ ಕಾಲದಲ್ಲೇ ಯಾರೂ ತೆಗೆದುಕೊಳ್ಳದಷ್ಟು ಸಂಭಾವನೆ ತೆಗೆದುಕೊಳ್ಳುತ್ತಿದ್ದರು. ಬಾಲಿವುಡ್‌ನ ಮೊಟ್ಟಮೊದಲ ಸೂಪರ್ ಸ್ಟಾರ್ ಪಟ್ಟ ಪಡೆದವರೂ ಕೂಡ ಶ್ರೀದೇವಿಯವರೇ ಆಗಿದ್ದಾರೆ. ಅಂಥ ನಟಿ ಶ್ರೀದೇವಿ ಅವರು ತಮಿಳು, ತೆಲುಗು ಹಾಗೂ ಬಾಲಿವುಡ್ ಚಿತ್ರರಂಗವನ್ನು ಅಕ್ಷರಶಃ ಆಳಿದ್ದಾರೆ. ಕನ್ನಡದಲ್ಲಿ ಕೂಡ ಬಾಲನಟಿಯಾಗಿ ನಟಿಸಿದ್ದರು ಶ್ರೀದೇವಿ.
ಆದರೆ, ನಾಯಕಿಯಾಗಿ ನಟಿ ಶ್ರೀದೇವಿ ಅದೆಷ್ಟು ಎತ್ತರಕ್ಕೆ ಏರಿದ್ದರು ಎಂದರೆ, ಕನ್ನಡ ಚಿತ್ರರಂಗದಲ್ಲಿ ನಟಿಸಲು ಅವರು ಅಸಾಧ್ಯವಾಗಿತ್ತು. ಏಕೆಂದರೆ, ಆ ಕಾಲದಲ್ಲಿ ಕನ್ನಡ ಚಿತ್ರದ ಒಟ್ಟೂ ಬಜೆಟ್‌ಗಿಂತ ಹೆಚ್ಚು ಸಂಭಾವನೆಯನ್ನು ಶ್ರೀದೇವು ಒಬ್ಬರಿಗೇ ಕೊಡಬೇಕಿತ್ತು. ಹೀಗಾಗಿ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆತರುವ ಸಾಹಸ ಯಾರೂ ಮಾಡಿರಲೇ ಇಲ್ಲ. ಬಾಲಿವುಡ್ ಚಿತ್ರರಂಗದಲ್ಲಿ ಅದೆಷ್ಟು ಬ್ಯುಸಿ ಹಾಗೂ ಬೇಡಿಕೆ ಸೃಷ್ಟಿಸಿಕೊಂಡಿದ್ದರು ನಟಿ ಶ್ರೀದೇವಿ ಎಂದರೆ, ಆಗಾಗ ತೆಲುಗು ಹಾಗೂ ತಮಿಳು ಹೈ ಬಜೆಟ್ ಚಿತ್ರಗಳಲ್ಲಿ ನಟಿಸುತ್ತಿದ್ದರು ಅಷ್ಟೇ.
ಪ್ಯಾನ್ ವರ್ಲ್ಡ್ ಚಿತ್ರದಲ್ಲಿ ವಿಷ್ಣುವರ್ಧನ್ ಇದ್ರು, ಆದ್ರೆ, ಬ್ರಿಟನ್ ಕಡ್ಡಿ ಅಲ್ಲಾಡಿಸಿ ನಿಂತೇ ಹೋಯ್ತು!
ಅಂಥ ನಟಿ ಶ್ರೀದೇವಿ ಅವರಿಗೆ ಕಥೆ ಒಪ್ಪಿಸಿ, ಕಾಲ್‌ಶೀಟ್ ಪಡೆದುಕೊಂಡಿದ್ದರು ಕನ್ನಡದ ನಟ ರವಿಚಂದ್ರನ್. ಇದು ಆ ಕಾಲದಲ್ಲಿ ಸತ್ಯವಾಗಿಯೇ ಬಹುದೊಡ್ಡ ಸಾಹಸ. ಕನ್ನಡ ಚಿತ್ರದಲ್ಲಿ ಅಂದು ಶ್ರೀದೇವಿ ನಟಿಸುತ್ತಾರೆ ಎಂದರೆ ನಂಬುವುದೇ ಕಷ್ಟ. ಆದರೆ, ಸ್ವತಃ ಅವರೇ ರವಿಚಂದ್ರನ್ ಕಥೆ ಒಪ್ಪಿ ಸಹಿ ಹಾಕಿದ್ದರು. ಆ ಚಿತ್ರಕ್ಕೆ ಶ್ರೀದೇವಿ ಅವರಿಗಾಗಿಯೇ ರವಿಚಂದ್ರನ್ ಅವರು 'ಚೆಲುವೆ' ಎಂದು ಹೆಸರು ಇಟ್ಟಿದ್ದರು. ಆದರೆ, ಕಾರಣಾಂತರಗಳಿಂದ ಆ ಚಿತ್ರ ಆಗಲೇ ಇಲ್ಲ, ಶ್ರೀದೇವಿಯವರು ಕನ್ನಡಕ್ಕೆ ಮತ್ತೆ ಎಂದಿಗೂ ಬರಲೇ ಇಲ್ಲ. ಆದರೆ, ಅದೇ ಡೇಟ್ಸ್ ಇಟ್ಟುಕೊಂಡು ರವಿಚಂದ್ರನ್ ಅವರು 'ಚೆಲುವ' ಹೆಸರಿನಲ್ಲಿ ಸಿನಿಮಾ ಮಾಡಿದ್ದು ಈಗ ಇತಿಹಾಸ.
ಆದರೆ, ಶ್ರೀದೇವಿಯವರನ್ನು ಕರೆಸುವ ಸಾಹಸಕ್ಕೆ ರವಿಚಂದ್ರನ್ ಬಿಟ್ಟರೆ ಬೇರೆ ಯಾರೂ ಕೈ ಹಾಕಿರಲೇ ಇಲ್ಲ ಎನ್ನುವುದು ಗ್ರೇಟ್ ಘಟನೆಯಾಗಿ ಎಂದಿಗೂ ಉಳಿಯಲಿದೆ. ಈಗ ಶ್ರೀದೇವಿಯರು ನಮ್ಮೊಂದಿಗೆ ಇಲ್ಲ. ರವಿಚಂದ್ರನ್ ಅವರಿಗೆ ಈಗಲೂ ಮೊದಲಿನಷ್ಟೇ ಕ್ರೇಜ್ ಇದ್ದರೂ ಕಾಲ ಸದ್ಯಕ್ಕೆ ಅವರಿಗೆ ಸಹಕರಿಸುತ್ತಿಲ್ಲ ಎನ್ನಬಹುದು. ಮುಂದೊಂದು ದಿನ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಕನ್ನಡಕ್ಕೆ ಬಂದರೂ ಬರಬಹುದು. ಯಾರಿಗೆ ಗೊತ್ತು ಭವಿಷ್ಯ? ಆದರೆ, ಇತಿಹಾಸವಂತೂ ಆಗಿದೆ, ಶ್ರೀದೇವಿ ಒಪ್ಪಿದ್ದರೂ ಬರಲಾಗಲಿಲ್ಲ.
ಡಾ ರಾಜ್‌ಕುಮಾರ್ ಜ್ಞಾಪಕ ಶಕ್ತಿ ನೋಡಿದರೆ ನೀವು ಶಾಕ್ ಆಗ್ತೀರಾ..! ಅಣ್ಣಾವ್ರಿಗೆ ಅದು ವರವೇ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.