ಲಸಿಕೆ ಸೃಷ್ಟಿಸೋಕೆ ಹೋಗಿ ಮಹಾಮಾರಿ ಸೃಷ್ಟಿಸಿತ್ತಾ ಚೀನಾ ಮತ್ತು ಅಮೆರಿಕ?

By Suvarna NewsFirst Published Mar 16, 2020, 3:03 PM IST
Highlights

ಮನುಕುಲವನ್ನು ಕಂಗೆಡಿಸುತ್ತಿರುವ ಮಹಾಮಾರಿ ಕೊರೊನಾ ವೈರಸ್‌ ಅಲಿಯಾಸ್‌ ಕೋವಿಡ್‌ ೧೯ ಅಲಿಯಾಸ್‌ ನೊವೆಲ್‌ ಕೊರೊನಾ ವೈರಸ್‌ಗೆ ಲಸಿಕೆ ಹುಡುಕಿ, ಅದನ್ನು ಮನುಕುಲದಿಂದಲೇ ಅತ್ತ ಉಚ್ಛಾಟಿಸಲು ಅನೇಕ ವಿಜ್ಞಾನಿಗಳು, ತಜ್ಞರು ಕಾರ್ಯ ನಿರತರಾಗಿದ್ದಾರೆ. ಇಂಥ ಒಂದು ಲಸಿಕೆ ಸೃಷ್ಟಿಯ ಪ್ರಯೋಗವೇ ಈ ಕೊರೊನಾ ಮಾರಿ ಲ್ಯಾಬ್‌ನಿಂದ ಹೊರಬಿದ್ದು ಜನರನ್ನು ಬಲಿ ತೆಗೆದುಕೊಳ್ಳಲು ಕಾರಣ ಆಯಿತಾ?

ಮನುಕುಲವನ್ನು ಕಂಗೆಡಿಸುತ್ತಿರುವ ಮಹಾಮಾರಿ ಕೊರೊನಾ ವೈರಸ್‌ ಅಲಿಯಾಸ್‌ ಕೋವಿಡ್‌ 19 ಅಲಿಯಾಸ್‌ ನೊವೆಲ್‌ ಕೊರೊನಾ ವೈರಸ್‌ಗೆ ಲಸಿಕೆ ಹುಡುಕಿ, ಅದನ್ನು ಮನುಕುಲದಿಂದಲೇ ಅತ್ತ ಉಚ್ಛಾಟಿಸಲು ಅನೇಕ ವಿಜ್ಞಾನಿಗಳು, ತಜ್ಞರು ಕಾರ್ಯ ನಿರತರಾಗಿದ್ದಾರೆ. ಆದರೆ ಲಸಿಕೆ ಸೃಷ್ಟಿಸೋದು ಅಷ್ಟೊಂದು ಸುಲಭವಲ್ಲ. ಅದಕ್ಕೆ ಕೋಟ್ಯಂತರ ರೂಪಾಯಿ ಖರ್ಚಾಗುತ್ತದೆ. ಅತ್ಯಾಧುನಿಕ ಲ್ಯಾಬ್‌ಗಳು ಬೇಕಾಗುತ್ತವೆ. ಬಲಿಪಶುಗಳು ಬೇಕಾಗುತ್ತವೆ. ಅದರ ನಂತರ ಎರಡನೇ ಹಾಗೂ ಮೂರನೇ ಹಂತದಲ್ಲಿ ಮನುಷ್ಯರ ಮೇಲೂ ಪ್ರಯೋಗ ಮಾಡಬೇಕಾಗುತ್ತದೆ. ಆದರೂ ಇನ್ನೂ ಹಲವಾರು ವರ್ಷ ವ್ಯಾಕ್ಸೀನ್‌‌ ಸೃಷ್ಟಿ ಮಾಡೋಕೆ ಬೇಕೇನೋ ಅಂತಾರೆ ತಜ್ಞರು. ಇಂಥ ಒಂದು ಲಸಿಕೆ ಸೃಷ್ಟಿಯ ಪ್ರಯೋಗವೇ ಈ ಕೊರೊನಾ ಮಾರಿ ಲ್ಯಾಬ್‌ನಿಂದ ಹೊರಬಿದ್ದು ಜನರನ್ನು ಬಲಿ ತೆಗೆದುಕೊಳ್ಳಲು ಕಾರಣ ಆಯಿತಾ?

 

ಈ ಊಹೆಗೆ ಕಾರಣ ಇದೆ. 2002ರಲ್ಲಿ ಈಗ ಕೋವಿಡ್‌ ವೈರಸ್‌ ಹುಟ್ಟಿಕೊಂಡ ಜಾಗದಲ್ಲೇ, ಅಂದರೆ ಚೀನಾದ ವುಹಾನ್‌ ನಗರದಲ್ಲೇ ಸಾರ್ಸ್ ರೋಗ ಕಾಣಿಸಿಕೊಂಡಿತ್ತು. ಈ ಸಾರ್ಸ್ ಕೂಡ ಕೊರೊನಾ ವೈರಸ್‌ಗಳ ಕುಟುಂಬದ್ದೇ ಇನ್ನೊಂದು ಕಾಯಿಲೆ. ಅಲ್ಲೂ ರೋಗಪೀಡಿತನಿಗೆ ಜ್ವರ ಬರುತ್ತದೆ, ಅಲ್ಲೂ ಉಸಿರಾಟದ ತೀವ್ರ ಸಮಸ್ಯೆ ತಲೆದೋರಿ ರೋಗಿ ಸಾಯುತ್ತಾನೆ. ಈಗಿನ ಕೊರೊನಾ ಕಾಯಿಲೆಯ ಗುಣಲಕ್ಷಣಗಳೂ ಹೆಚ್ಚು ಕಡಿಮೆ ಇದೇ. ಇದರಲ್ಲಿನ ಪ್ರತ್ಯೇಕತೆ ಎಂದರೆ ನ್ಯುಮೋನಿಯಾ ಹೆಚ್ಚಾಗಿ, ಉಸಿರಾಟ ಹೆಚ್ಚಾಗಿ ರೋಗಿ ಸಾಯುತ್ತಾನೆ. ಸಾರ್ಸ್‌ನ ಶೇ.80 ಜೀನ್‌ ಅಂಶಗಳು ಕೋವಿಡ್‌ ವೈರಸ್‌ನಲ್ಲೂ ಇವೆ. ಸಾರ್ಸ್ ಉಲ್ಬಣಿಸಿದಾಗಲೇ ಚೀನಾ ಹಾಗೂ ಅಮೆರಿಕ ದೇಶಗಳು ಇದಕ್ಕೆ ಲಸಿಕೆ ಹುಡುಕುವ ಪ್ರಯತ್ನ ಆರಂಭಿಸಿದ್ದವು. ಚೀನಾದ ವುಹಾನ್‌ನಲ್ಲಿ ಇಂಥ ವೈರಾಣುಗಳಿಗೆ ಲಸಿಕೆ ಹುಡುಕುವ ಸರಕಾರಿ ಪೋಷಿತ ಲ್ಯಾಬ್‌ ಇದೆ. ಇಲ್ಲೇ ಸಾರ್ಸ್ ಅಥವಾ ಕೊರೊನಾ ವೈರಸ್‌ಗೆ ಲಸಿಕೆ ಹುಡುಕುವ ಪ್ರಯತ್ನ ನಡೆಯುತ್ತಿತ್ತು ಎನ್ನಲಾಗಿದೆ. ಈಗ ಅದೇ ವುಹಾನ್‌ನಲ್ಲಿ ಮೊದಲು ಕೊರೊನಾ ಕಾಣಿಸಿಕೊಂಡಿದೆ. ಅಲ್ಲಿಂದಲೇ ಹಾವಳಿ ಎಬ್ಬಿಸಿದೆ. ಇಡೀ ವುಹಾನ್‌ ನಗರ ಈಗ ಬಂದ್‌ ಆಗಿದೆ.

 

ಹಾಗಿದ್ದರೆ ಈ ಲ್ಯಾಬ್‌ನಿಂದ ಹೇಗೋ ತಪ್ಪಿಸಿಕೊಂಡು ಕೊರೊನಾ ಲಸಿಕೆ ವೈರಾಣುವೇ ಇದಕ್ಕೆ ಕಾರಣವಾಯಿತಾ? ಇದು ಬರೀ ತರ್ಕವಲ್ಲ. ಇತ್ತೀಚೆಗೆ ಅಮೆರಿಕದ ಬೇಹುಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದರು- ಚೀನಾದ ಕೈವಾಡ ಕೋವಿಡ್‌ ಹರಡುವುದರಲ್ಲಿ ಕಂಡುಬರುತ್ತಾ ಇದೆ ಅಂತ. ಇದರಿಂದ ಕೆರಳಿದ ಚೀನಾದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದು- ಇದರಲ್ಲಿ ನಮ್ಮ ಕೈವಾಡ ಏನೂ ಇಲ್ಲ. ಆದರೆ ಅಮೆರಿಕದ ಕೈವಾಡ ಕಾಣಿಸ್ತಾ ಇದೆ. ಇದು ಅಮೆರಿಕದಿಂದಲೇ ಬಂದಿರಬಹುದು ಅಂತ. ಇದರಿಂದ ಮತ್ತಷ್ಟು ಕೆರಳಿದ ಅಮೆರಿಕ ಚೀನಾದ ರಾಯಭಾರಿಯನ್ನು ಕರೆಸಿ ಉಗಿದು ಉಪ್ಪುಹಾಕಿತು.

 

ಕೊರೋನಾಗೆ ಬಲಿಯಾದ ವೃದ್ಧನ ಟ್ರಾವೆಲ್ ಹಿಸ್ಟರಿ ನೋಡಿದ್ರೆ ಬೆಚ್ಚಿ ಬೀಳ್ತೀರಾ! 

 

ಇದು ಇನ್ನೊಂದು ಬಗೆಯ ಊಹಾಪೋಹಕ್ಕೆ ನಾಂದಿ ಹಾಕಿತು. ಈ ವೈರಾಣು ಅಮೆರಿಕವೇ ಸೃಷ್ಟಿ ಮಾಡಿ ಚೀನಾದ ವುಹಾನ್‌ ನಗರದ ಮೇಲೆ ಪ್ರಯೋಗ ಮಾಡಿತಾ? ಈ ಸಾಧ್ಯತೆಯೂ ಇಲ್ಲದೇ ಇಲ್ಲ. ಕಳೆದ ಒಂದು ವರ್ಷದಿಂದ ಚೀನಾಕ್ಕೂ ಅಮೆರಿಕಕ್ಕೂ ವ್ಯಾಪಾರ ವಾಣಿಜ್ಯ ವಿಷಯದಲ್ಲಿ ತಕರಾರು ನಡೆಯುತ್ತಾ ಇದೆ. ಈ ಶೀತಲ ಸಮರದಲ್ಲಿ ಎರಡೂ ಕಡೆಗೂ ಸಾಕಷ್ಟು ನಷ್ಟ ಆಗಿದೆ, ಚೀನಾದ ಪ್ರಭಾವ ತಗ್ಗಿಸುವ ಸಲುವಾಗಿ, ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಚೀನಾ ತಲೆ ತಗ್ಗಿಸುವಂತೆ ಮಾಡುವುದಕ್ಕಾಗಿ ಅಮೆರಿಕವೇ ಈ ಪ್ರಯೋಗ ಮಾಡಿರಬಹುದಾ? ಹಾಗಂತ ಚೀನಾದ ಕಡೆಯ ರಾಜಕೀಯ ತಜ್ಞರ ಊಹೆ.

 

ಮಾರಕ ಕೊರೋನಾಗೆ ವ್ಯಾಕ್ಸಿನ್ : ವಿಜ್ಞಾನಿಗಳ ತಂಡದಲ್ಲಿ ನಮ್ಮ ಕನ್ನಡಿಗ

 

ಅದೇನೇ ಇದ್ದರೂ, ವೈರಾಣು ಹೊರಬಿದ್ದು ಹಾನಿ ಮಾಡುತ್ತಾ ಸಾಗಿದೆ, ಇಟೆಲಿಯಂಥ ಬಲಿಷ್ಠ ದೇಶಗಳೇ ಗಾಬರಿ ಬಿದ್ದು ತ್ತರಿಸಿಹೋಗಿವೆ. ಅದು ಇನ್ನಷ್ಟು ಹಾನಿ ಮಾಡದಂತೆ ತಡೆಯುವುದೇ ಈಗ ಎಲ್ಲರ ಲಕ್ಷ್ಯ ಆಗಿದೆ.

click me!