ರಸ್ತೆ ಅಪಘಾತವೊಂದರಲ್ಲಿ ಮಧ್ಯಪ್ರದೇಶದ ಪ್ರಸಿದ್ಧ ಯುಟ್ಯೂಬರ್ ಅಭ್ಯುದಯ್ ಮಿಶ್ರಾ ಅಲಿಯಾಸ್ ಸ್ಕೈಲಾರ್ಡ್ ಮೃತಪಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ ಸ್ಕೈಲಾರ್ಡ್ ಹೆಸರಿನ ಖಾತೆ ಹೊಂದಿದ್ದ ಅಭ್ಯುದಯ್ ಮಿಶ್ರಾ ಅಲ್ಲಿ ಲಕ್ಷಾಂತರ ಫಾಲೋವರ್‌ಗಳನ್ನು ಹೊಂದಿದ್ದರು.
ಭೋಪಾಲ್: ರಸ್ತೆ ಅಪಘಾತವೊಂದರಲ್ಲಿ ಮಧ್ಯಪ್ರದೇಶದ ಪ್ರಸಿದ್ಧ ಯುಟ್ಯೂಬರ್ ಅಭ್ಯುದಯ್ ಮಿಶ್ರಾ ಅಲಿಯಾಸ್ ಸ್ಕೈಲಾರ್ಡ್ ಸಾವನ್ನಪ್ಪಿದ್ದಾರೆ. ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ ಸ್ಕೈಲಾರ್ಡ್ ಹೆಸರಿನ ಖಾತೆ ಹೊಂದಿದ್ದ ಅಭ್ಯುದಯ್ ಮಿಶ್ರಾ ಅಲ್ಲಿ ಲಕ್ಷಾಂತರ ಫಾಲೋವರ್‌ಗಳನ್ನು ಹೊಂದಿದ್ದರು. ಬೈಕ್‌ನಲ್ಲಿ ಪ್ರವಾಸ ಹೊರಟಿದ್ದ ಅಭ್ಯುದಯ್ ಮಿಶ್ರ ಆವರಿಗೆ ಟ್ರಕ್ಕೊಂದು ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡ ಅವರು ನಂತರ ಸಾವನ್ನಪ್ಪಿದ್ದಾರೆ.
ಮಧ್ಯಪ್ರದೇಶದ (Madhya Pradesh) ನರ್ಮದಾಪುರಂ-ಪಿಪಾರಿಯಾ ರಾಜ್ಯ ಹೆದ್ದಾರಿಯ ಸೊಹಗ್‌ಪುರ ಬಳಿ ಈ ದುರಂತ ಸಂಭವಿಸಿದೆ. ಅಭ್ಯುದಯ್ (Abhyuday Mishra)ನಿಧನಕ್ಕೆ ಅವರ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಸ್ಕೈಲಾರ್ಡ್ (SkyLord) ಎಂಬ ಯೂಟ್ಯೂಬ್ ಚಾನೆಲ್ (Youtube Channel) ನಡೆಸುತ್ತಿದ್ದ ಅಭ್ಯುದಯ್‌ಗೆ ಯೂಟ್ಯೂಬ್‌ನಲ್ಲಿ 1.4 ಮಿಲಿಯನ್ ಸಬ್‌ಸ್ಕ್ರೈಬರ್‌ಗಳಿದ್ದರು (Subscriber). ಇದೇ ಹೆಸರಿನಲ್ಲಿ ಅವರು ಇನ್ಸ್ಟಾಗ್ರಾಮ್ ಖಾತೆ (Instagram) ಹೊಂದಿದ್ದು, ಅಲ್ಲಿ ಅವರಿಗೆ ಸುಮಾರು ಮೂರುವರೆ ಲಕ್ಷ ಜನ ಫಾಲೋವರ್‌ಗಳಿದ್ದರು. ಅಭ್ಯುದಯ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಗೇಮಿಂಗ್ ವಿಡಿಯೋಗಳನ್ನು (Gaming video) ಮಾಡುತ್ತಿದ್ದರು. ಇದಕ್ಕೆ ಲಕ್ಷಾಂತರ ಮಂದಿ ವೀಕ್ಷಕರಿದ್ದರು.
ಬೈಕ್‌ನಲ್ಲಿ ತೆರಳುತ್ತಿದ್ದಾಗ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಭೋಪಾಲ್‌ನ (Bhopal) ಬನ್ಸಾಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದ ಪ್ರವಾಸೋದ್ಯಮ ಇಲಾಖೆ ಅಧಿಕಾರಿಯೊಬ್ಬರು ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಅಭ್ಯುದಯ್ ಬೈಕ್‌ಗೆ ಡಿಕ್ಕಿ ಹೊಡೆದ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ವಿಶ್ವ ಪ್ರವಾಸೋಧ್ಯಮ ದಿನದ ಅಂಗವಾಗಿ ಮಧ್ಯಪ್ರದೇಶದ ಪ್ರವಾಸೋದ್ಯಮ ಇಲಾಖೆ (Tourism Department) ಈ ಕಾರ್ಯಕ್ರಮ ಆಯೋಜಿಸಿತ್ತು. ಈ ಬೈಕ್ ಟೂರಿಂಗ್‌ನಲ್ಲಿ ಭಾಗವಹಿಸುವ ಸಲುವಾಗಿ ಅಭ್ಯುದಯ್ ತೆರಳುತ್ತಿದ್ದಾಗ ಈ ಅನಾಹುತ ಸಂಭವಿಸಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಬಗ್ಗೆ ಅವರು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟೊಂದನ್ನು ಕೂಡ ಹಾಕಿದ್ದರು. ಆದರೆ ಈ ಟ್ರಿಪ್ ಕೊನೆಗೊಳ್ಳುವ ಮೊದಲೇ ಅವರು ಬದುಕಿನ ಪಯಣ ಮುಗಿಸಿದ್ದಾರೆ.
ಯುವ ಸಮೂಹದ ಕ್ರೇಜಿ ಬಾಯ್ ಯೂಟ್ಯೂಬರ್ ಟಿಟಿಎಫ್ ವಾಸನ್‌ಗೆ ಬಂಧನ ಭೀತಿ!
ಇತ್ತೀಚೆಗೆ ಕ್ಯಾನ್ಸರ್‌ಗೆ ಬಲಿಯಾಗಿದ್ದ ಮತ್ತೊಬ್ಬ ಯುಟ್ಯೂಬರ್ ಟೆಕ್ನೋಬ್ಲೇಡ್
ಕಳೆದ ಜೂನ್‌ನಲ್ಲಿ ಅಮೆರಿಕದ ಖ್ಯಾತ ಯೂಟ್ಯೂಬರ್, ಟೆಕ್ನೋಬ್ಲೇಡ್ ಹೆಸರಿನಿಂದಲೇ ಅಂತರ್ಜಾಲದಲ್ಲಿ ಖ್ಯಾತಿ ಗಳಿಸಿದ್ದ ಅಲೆಕ್ಸಾಂಡರ್ ನಿಧನರಾಗಿದ್ದರು. ಧೀರ್ಘಕಾಲದಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಅವರಿಗೆ ಕೇವಲ 23 ವರ್ಷ ವಯಸ್ಸಾಗಿತ್ತು. ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ Minecraft ವೀಡಿಯೋ ಮತ್ತು ಲೈವ್‌ಸ್ಟ್ರೀಮ್‌ಗಳಿಂದಾಗಿ ಸಾಕಷ್ಟು ಹೆಸರುವಾಸಿಯಾಗಿದ್ದಲ್ಲದೇ ಅನೇಕ ಅಭಿಮಾನಿಗಳನ್ನು ಹೊಂದಿದ್ದರು. ಟೆಕ್ನೋಬ್ಲೇಡ್ ಅವರು ಜುಲೈ 2022 ರ ವೇಳೆಗಾಗಲೇ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ 12 ಮಿಲಿಯನ್‌ಗಿಂತಲೂ ಅಧಿಕ ಚಂದಾದಾರರನ್ನು ಹೊಂದಿದ್ದರು.
ಯೂಟ್ಯೂಬರ್‌ಗೆ ಇಷ್ಟೊಂದು ಅಭಿಮಾನಿಗಳಾ..? ಫ್ಯಾನ್ಸ್‌ಗಳಿಂದ ರಸ್ತೆ ಬಂದ್, ಗೌರವ್ ತನೇಜಾ ಅಂದರ್
ಕ್ಯಾನರ್ ವಿರುದ್ಧ ಗೆಲ್ಲಲು ಧೀರ್ಘಕಾಲದ ಹೋರಾಟ ಮಾಡುತ್ತಲೇ ಟೆಕ್ನೋಬ್ಲೇಡ್ ಹಲವು ವಿಡಿಯೋಗಳನ್ನು ಮಾಡಿದ್ದಾರೆ. ಆತನ ಪರವಾಗಿ ಆತನ ಪೋಷಕರು ಆತನ ಯೂಟ್ಯೂಬ್‌ನಲ್ಲಿ ವಿಡಿಯೋವೊಂದನ್ನು ಹರಿ ಬಿಟ್ಟು ಆತ ತಮ್ಮನ್ನು ಅಗಲಿದ್ದಾಗಿ ಹೇಳಿದ್ದರು. So Long Nerds ಹೆಸರಿನಲ್ಲಿ ರಿಲೀಸ್ ಮಾಡಿರುವ ಈ ವಿಡಿಯೋದಲ್ಲಿ ಟೆಕ್ನೋಬ್ಲೇಡ್ ತಂದೆ, ಮಗನ ಅಗಲಿಕೆಯ ನೋವಿನೊಂದಿಗೆ ಕಣ್ಣು ತುಂಬಿಕೊಂಡು ಗದ್ಗದಿತ ಕಂಠದಿಂದ ತುಂಬಾ ಭಾವುಕವಾಗಿ ಮಾತನಾಡಿದ್ದು ಆತ ಇನ್ನಿಲ್ಲ ಎಂಬುದನ್ನು ಟೆಕ್ನೋಬ್ಲೇಡ್ ಅಭಿಮಾನಿಗಳಿಗೆ ತಿಳಿಸಿದ್ದರು.