ಈ ಜನರೇಷನ್‌ನಲ್ಲಿ ಹುಟ್ಟಿದ್ರೆ ಈ ತಾತನ ಹಿಡಿಯಕ್ಕಾಗ್ತಿರ್ಲಿಲ್ಲ ಬಿಡಿ: ಹೆಂಗೆ ಕುಣಿತಾರೆ ನೋಡಿ

Published : Sep 18, 2022, 01:06 PM ISTUpdated : Sep 18, 2022, 01:08 PM IST
ಈ ಜನರೇಷನ್‌ನಲ್ಲಿ ಹುಟ್ಟಿದ್ರೆ ಈ ತಾತನ ಹಿಡಿಯಕ್ಕಾಗ್ತಿರ್ಲಿಲ್ಲ ಬಿಡಿ: ಹೆಂಗೆ ಕುಣಿತಾರೆ ನೋಡಿ

ಸಾರಾಂಶ

ತಾತನೊಬ್ಬನ ಬಿಂದಾಸ್ ಡಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ. ಯುವಕರನ್ನು ನಾಚಿಸುವಂತೆ ತಾತ ಕುಣಿಯುತ್ತಿದ್ದು, ವಿಡಿಯೋ ವೈರಲ್ ಆಗಿದೆ. 

ಮುಂಬೈ: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು ಬಹುತೇಕರ ಪಾಲಿನ ಪ್ರತಿಭಾ ಪ್ರದರ್ಶನದ ವೇದಿಕೆ ಆಗಿದ್ದು, ಇಲ್ಲಿ ಸಿಗದೇ ಇರದ ವಿಚಾರಗಳೇ ಇಲ್ಲ. ಅದರಲ್ಲೂ ಇನ್ಸ್ಟಾಗ್ರಾಮ್ ಮುಂತಾದ ರೀಲ್ಸ್ ಮಾಡಬಲ್ಲ ಸೋಶಿಯಲ್ ಮೀಡಿಯಾ ಸೈಟುಗಳು ಬಹುತೇಕರ ಬದುಕಿನ ಗತಿಯನ್ನೇ ಬದಲಿಸಿವೆ. ಸೋಶಿಯಲ್ ಮೀಡಿಯಾ ಎಷ್ಟು ಪ್ರಭಾವಶಾಲಿಯಾಗಿದೆ ಎಂದರೆ ರಾತ್ರೋರಾತ್ರಿ ಜನ ಸಾಮಾನ್ಯರು ಸ್ಟಾರ್ ಆಗಿರುತ್ತಾರೆ. ಇಂತಹ ಸಾಮಾಜಿಕ ಜಾಲತಾಣಗಳಲ್ಲಿ ಬರುವ ವಿಡಿಯೋಗಳು ನೋಡುಗರಿಗೆ ಮನೋರಂಜನೆಯ ರಸದೌತಣವನ್ನು ನೀಡುತ್ತವೆ. ಕೆಲವು ವಿಡಿಯೋಗಳು ನಕ್ಕು ನಗಿಸಿದರೆ ಮತ್ತೆ ಕೆಲವು ಬದುಕಲು ಕಲಿಸುತ್ತವೆ. ಇನ್ನೂ ಕೆಲವು ಬದುಕಲು ಜೀವನೋತ್ಸಾಹ ತುಂಬುತ್ತವೆ.

ಹಾಗೆಯೇ ಇಲ್ಲೊಂದು ತಾತನ ವಿಡಿಯೋ ನೋಡುಗರಿಗೆ ಹುರುಪು ತುಂಬುತ್ತಿದೆ. ಮದುವೆಯೊಂದರಲ್ಲಿ ಕುಣಿಯುತ್ತಿರುವ ವಿಡಿಯೋ ಇದಾಗಿದೆ. ಮದುವೆ ಗಂಡಿನಂತೆ ಶೂಟು ಬೂಟು ತೊಟ್ಟ ತಾತ ಒಬ್ಬರು ಮದುವೆ (wedding) ಸಮಾರಂಭದಲ್ಲಿ ಸಖತ್ ಆಗಿ ಡಾನ್ಸ್ ಮಾಡುತ್ತಿದ್ದಾರೆ. ಇವರ ಡಾನ್ಸ್‌ ಯುವಕರನ್ನು ನಾಚಿಸುವಂತಿದೆ. ಅಜ್ಜನ ಜೊತೆ  ಅಜ್ಜಿಯೂ ಕೂಡ ಇದ್ದು ಅವರು ಕಪ್ಪು ಬಣ್ಣದ ಸಾರಿ ತೊಟ್ಟು ಸಣ್ಣಗೆ ಕೈಕಾಲುಗಳನ್ನು ಕುಣಿಸುತ್ತಾ ಡಾನ್ಸ್ ಮಾಡುತ್ತಿದ್ದಾರೆ. ಆದರೆ ಈ ತಾತ ಮಾತ್ರ ಒಂದು ಕ್ಷಣ ಪಾಪ್‌ಸ್ಟಾರ್ (Popstar) ಮೈಕಲ್ ಜಾಕ್ಸನ್‌ (Michael Jackson) ಕೂಡ ಬದುಕಿದ್ದರೆ ಇವರ ಡಾನ್ಸ್ ನೋಡಿ ನಾಚಿಕೊಳ್ಳುತ್ತಿದ್ದರೆನೋ ಅಷ್ಟೊಂದು ಉತ್ಸಾಹದಿಂದ ಕುಣಿದಿದ್ದಾರೆ. ಒಟ್ಟಿನಲ್ಲಿ ತಾತ ತಮ್ಮ ಕುಣಿತದಿಂದಲೇ ಡಾನ್ಸ್ ಪ್ಲೋರ್‌ಗೆ ಬೆಂಕಿ ಹಚ್ಚಿದ್ದಾರೆ ಎಂದರೆ ತಪ್ಪಾಗಲಾರದು. 

 

ತಾತನ ಈ ಬಿಂದಾಸ್ ಕುಣಿತ ನೋಡಿದ ಅಲ್ಲೇ ಇದ್ದವರು ಈ ವಿಡಿಯೋ ಮಾಡಿದ್ದಾರೆ. ತಾತನ ಡಾನ್ಸ್‌ನ್ನು ವೈರಲ್ ಭವಾನಿ ಪೇಜ್ ಸಾಮಾಜಿಕ ಜಾಲತಾಣದಲ್ಲಿ (Social Media) ಹಾಕಿಕೊಂಡಿದ್ದಾರೆ. ಈತನ ವಯಸ್ಸು 82 ವರ್ಷವಾಗಿದ್ದು, ಡಾನ್ಸ್‌ ಫ್ಲೋರ್‌ನಲ್ಲಿ (Dance floor) ತಮ್ಮ ವಯಸ್ಸನ್ನು ಉಲ್ಟಾ ಮಾಡುವಂತೆ ಕುಣಿದಿದ್ದಾರೆ. ವಿಡಿಯೋ ನೋಡಿದ ಅನೇಕರು ತಾತನ ಡಾನ್ಸ್‌ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾತನಿಗೆ ವಯಸ್ಸು 82 ಆದರೆ ಮನಸ್ಸು 28ರ ಹರೆಯದ್ದು ಎಂದು ನೋಡುಗರು ಕಾಮೆಂಟ್ ಮಾಡಿದ್ದಾರೆ. 

ಟೈಗರ್ ಜಿಂದಾ ಹೈ... ರಥವೇರಿ ಬಂದ 102 ವರ್ಷದ ಅಜ್ಜ, ಕಾರಣ ಕೇಳಿದ್ರೆ ಗಾಬರಿಯಾಗ್ತೀರಾ

ನಮ್ಮಲ್ಲಿ ಬಹುತೇಕರಿಗೆ ಸ್ವಲ್ಪ ವಯಸ್ಸಾಗುತ್ತಿದ್ದಂತೆ ಬದುಕಿನ ಮೇಲಿರುವ ಎಲ್ಲಾ ಆಸಕ್ತಿಯನ್ನು ಕಳೆದುಕೊಂಡು ಬಿಡುತ್ತಾರೆ. ಇಂದಿನ ಯುವ ಸಮೂಹಕ್ಕೆ ಅಗತ್ಯವಾಗಿ ಬೇಕಾಗಿದ್ದು, ಜೀವನೋತ್ಸಾಹ. ವಯಸ್ಸಾದವರಲ್ಲಿ ಇರುವ ಜೀವನೋತ್ಸಾಹ ಇಂದಿನ ಯುವ ಸಮೂಹದ ಬಹುತೇಕರಲ್ಲಿ ಇಲ್ಲ. ಸಣ್ಣಪುಟ್ಟ ಕಾರಣಕ್ಕೆ ಯುವಕ ಯುವತಿಯರು ಬದುಕಿನ ಆಸೆ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಂತಹ ಘಟನೆಗಳು ನಡೆಯುತ್ತವೆ. ಆದರೆ ಈ ತಾತನ ಡಾನ್ಸ್‌ ಈ ಇಳಿವಯಸ್ಸಿನಲ್ಲೂ ಅವರಿಗಿರುವ ನೃತ್ಯ ಹಾಗೂ ಜೀವನದ ಬಗೆಗಿನ ಆಸಕ್ತಿಯನ್ನು ತೋರಿಸುತ್ತದೆ. ಜೊತೆಗೆ ಯುವಕರಲ್ಲೂ ಇಲ್ಲದ ಈ ತಾತನ ಹುಮ್ಮಸ್ಸು ನೋಡುಗರನ್ನು ಸೆಳೆಯುತ್ತಿದ್ದು, ಈ ತಾತ ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. 
 

ಕೈ ತೋರಿಸಿ ರೈಲು ನಿಲ್ಲಿಸಿದ ತಾತ: ವಿಡಿಯೋ ಸಖತ್ ವೈರಲ್‌

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಿಷಬ್‌ ಶೆಟ್ಟಿ, ವಿಜಯ್ ಕಿರಗಂದೂರು ವ್ಯಾಪಾರಿಗಳು, ದೈವಾರಾಧನೆಯನ್ನ ವ್ಯಾಪಾರಕ್ಕೆ ಹಾಕಿದ್ದಾರೆ: ದೈವಾರಾಧಕ ಬೇಸರ
BBK 12: ಗಿಲ್ಲಿ ನಟನಿಗೆ ಏನ್‌ ಮಾಡೋದು ಅಂತ ನಿರ್ಧಾರ ಮಾಡಿ: ರಘು ಬಳಿ ಕಾವ್ಯ ಶೈವ ಬೇಸರ ತೋಡಿಕೊಂಡ್ರು