ಮಲ್ಟಿಪ್ಲೆಕ್ಸ್‌ಗಳಿಗೆ ಒಂದೇ ದಿನ 65 ಲಕ್ಷ ಜನ: ಹೊಸ ದಾಖಲೆ

By Kannadaprabha NewsFirst Published Sep 25, 2022, 10:14 AM IST
Highlights

ಟಿಕೆಟ್‌ ದರ 75 ನಿಗದಿ ಮಾಡಿದ್ದಕ್ಕೆ ಭರ್ಜರಿ ಸ್ಪಂದನೆ, ಮುಂಜಾನೆ 6 ರಿಂದಲೇ ಟಿಕೆಟ್‌ಗೆ ಕ್ಯೂ, ರಾಜ್ಯದಲ್ಲಿ 2 ಲಕ್ಷ ಜನರಿಂದ ವೀಕ್ಷಣೆ, ಇದು ಕೂಡ ದಾಖಲೆ

ಬೆಂಗಳೂರು(ಸೆ.25):  ರಾಜ್ಯದ 150ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್‌ಗಳಲ್ಲಿ ಒಂದೇ ಎರಡು ಲಕ್ಷ ಮಂದಿ ಪ್ರೇಕ್ಷಕರು ಸಿನಿಮಾ ನೋಡಿದ್ದು, 1.5 ಕೋಟಿ ರು. ಕಲೆಕ್ಷನ್‌ ಆಗಿದೆ. ಇದು ಕೂಡ ದಾಖಲೆಯಾಗಿದೆ. ಟಿಕೆಟ್‌ ಬೆಲೆ 75 ರು. ಇದ್ದ ಕಾರಣ ಜನರು ಟಿಕೆಟ್‌ ಖರೀದಿಸಲು ಸಾಲುಗಟ್ಟಿನಿಂತಿದ್ದರು. ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು ಎಂದು ಮಲ್ಟಿಪ್ಲೆಕ್ಸ್‌ ಸಿಬ್ಬಂದಿ ತಿಳಿಸಿದ್ದಾರೆ. ರಾಷ್ಟ್ರೀಯ ಸಿನಿಮಾ ದಿನಾಚರಣೆಯ ಅಂಗವಾಗಿ ದೇಶಾದ್ಯಂತ ಶುಕ್ರವಾರ 65 ಲಕ್ಷ ಮಂದಿ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಿಗೆ ಭೇಟಿ ಕೊಟ್ಟು ಸಿನಿಮಾ ವೀಕ್ಷಿಸಿದ್ದಾರೆ. ಚಿತ್ರಮಂದಿರಗಳ ಇತಿಹಾಸದಲ್ಲೇ ಇದೊಂದು ದಾಖಲೆ ಎನ್ನಿಸಿಕೊಂಡಿದೆ.

ಸಿನಿಮಾ ದಿನದ ನಿಮಿತ್ತ ಅಂದು ಸಿನಿಮಾ ಟಿಕೆಟ್‌ ಬೆಲೆಯನ್ನು ಕೇವಲ 75 ರು.ಗೆ ನಿಗದಿ ಮಾಡಲಾಗಿತ್ತು. ಸಿನಿಮಾ ಟಿಕೆಟ್‌ ಮೇಲೆ ಭಾರೀ ರಿಯಾಯಿತಿ ಘೋಷಿಸಿದ ಹಿನ್ನೆಲೆಯಲ್ಲಿ ಮಲ್ಟಿಪ್ಲೆಕ್ಸ್‌ಗೆ ಭೇಟಿ ನೀಡಿದವರ ಪ್ರಮಾಣ ಸಾರ್ವಕಾಲಿಕ ಗರಿಷ್ಠವಾಗಿದೆ. ಮುಂಜಾನೆ 6 ಗಂಟೆಯಿಂದಲೇ ಟಿಕೆಟ್‌ಗಾಗಿ ಭಾರೀ ಬೇಡಿಕೆ ವ್ಯಕ್ತವಾಗಿತ್ತು ಎಂದು ಭಾರತೀಯ ಮಲ್ಟಿಪ್ಲೆಕ್ಸ್‌ ಸಂಘ ಶನಿವಾರ ಹೇಳಿದೆ.

Ticket Price ಸೆ.16 ರಾಜ್ಯಾದ್ಯಂತ ಸಿನಿಮಾ ಟಿಕೆಟ್‌ಗೆ 75 ರು. ಮಾತ್ರ; ಏನಿದು ವಿಶೇಷತೆ?

ಪಿವಿಆರ್‌, ಐನಾಕ್ಸ್‌, ಸಿನಿಪೊಲಿಸ್‌, ಕಾರ್ನಿವಲ್‌, ಮಿರಾಜ್‌, ಸಿಟಿಪ್ರೈಡ್‌, ಆಸಿಯಾನ್‌, ಮುಕ್ತಾ ಎ2, ಮೂವಿಟೈಂ, ವೇವ್‌, ಎಂ2ಕೆ, ಡಿಲೈಟ್‌ ಮೊದಲಾದ ಮಲ್ಟಿಪ್ಲೆಕ್ಸ್‌ಗಳ 4000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶಿಸಲಾಗಿತ್ತು. ಎಲ್ಲ ವಯೋಮಾನದ ಪ್ರೇಕ್ಷಕರು ಸಿನಿಮಾವನ್ನು ವೀಕ್ಷಿಸಲು ಮಲ್ಟಿಪ್ಲೆಕ್ಸ್‌ಗೆ ಆಗಮಿಸಿದ್ದರು ಎಂದು ಅದು ತಿಳಿಸಿದೆ. ಕೋವಿಡ್‌ ಕಾರಣ ಸಿನಿಮಾ ಮಂದಿರಗಳು ಮಂಕಾಗಿದ್ದವು. ಆದರೆ ಈಗಿನ ಪ್ರತಿಕ್ರಿಯೆ ನೋಡಿ ಉತ್ಸಾಹ ಬಂದಿದೆ ಎಂದೂ ಅದು ಹೇಳಿದೆ.
 

click me!