ಇಂದು ಸಿಎಂ ವಿಜಯ್-ಸಂಗೀತಾ ಡಿವೋರ್ಸ್ ಕೇಸ್ ವಿಚಾರಣೆ; ಗಂಡ-ಹೆಂಡ್ತಿ ಒಂದಾಗೋ ಚಾನ್ಸ್‌ ಎಷ್ಟು ಪರ್ಸೆಂಟ್ ಇದೆ?

Published : Aug 07, 2026, 12:01 PM ISTUpdated : Aug 07, 2026, 12:03 PM IST
vijay sangeetha

ಸಾರಾಂಶ

ದಶಕಗಳ ಕಾಲ ಪ್ರೀತಿಯಿಂದ ಸಂಸಾರ ನಡೆಸಿದ್ದ ಈ ಜೋಡಿಯ ನಡುವೆ ಇತ್ತೀಚಿನ ದಿನಗಳಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ಸಂಗೀತಾ ಅವರು ಪತಿಯಿಂದ ಬೇರ್ಪಡಲು ನಿರ್ಧರಿಸಿ, ಡಿಸೆಂಬರ್ 23, 2025 ರಂದು ಚೆಂಗಲ್ಪಟ್ಟು ಜಿಲ್ಲಾ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇಂದು ರಿಸಲ್ಟ್‌ ಏನಾಗಬಹುದು? ಈ ಸ್ಟೋರಿ ನೋಡಿ..

Divorce Case Hearing between Tamil Nadu Chief Minister Vijay Joseph and his wife Sangeetha Sornalingam: ದಳಪತಿಯ ಸಂಸಾರದಲ್ಲಿ ಬಿರುಗಾಳಿ? ಚೆಂಗಲ್ಪಟ್ಟು ಕೋರ್ಟ್ ಮೆಟ್ಟಿಲೇರಿದ ಸಿಎಂ ವಿಜಯ್-ಸಂಗೀತಾ ಡಿವೋರ್ಸ್ ಕೇಸ್!

ಚೆನ್ನೈ: ಬೆಳ್ಳಿತೆರೆಯ ಮೇಲೆ ನೂರಾರು ವಿಲನ್‌ಗಳನ್ನು ಏಕಾಂಗಿಯಾಗಿ ಎದುರಿಸುವ 'ದಳಪತಿ', ತಮಿಳುನಾಡಿನ ಈಗಿನ ರಾಜಕೀಯ ರಂಗದ ಪ್ರಬಲ ಶಕ್ತಿ ಸಿ. ಜೋಸೆಫ್ ವಿಜಯ್ ಅವರ ವೈಯಕ್ತಿಕ ಜೀವನವೀಗ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಕಳೆದ ಕೆಲವು ದಶಕಗಳಿಂದ ಮಾದರಿ ದಂಪತಿಗಳಾಗಿ ಗುರುತಿಸಿಕೊಂಡಿದ್ದ ವಿಜಯ್ ಮತ್ತು ಸಂಗೀತಾ ಅವರ ಸುಂದರ ಸಂಸಾರದಲ್ಲಿ ಬಿರುಕು ಮೂಡಿದೆಯೇ? ಹೌದು ಎನ್ನುತ್ತಿವೆ ಸದ್ಯದ ಬೆಳವಣಿಗೆಗಳು. ಕಾಲಿವುಡ್‌ನ ಈ 'ಪವರ್ ಕಪಲ್' ವಿಚ್ಛೇದನದ ವಿಚಾರಣೆ ಇಂದು ಚೆಂಗಲ್ಪಟ್ಟು ಫ್ಯಾಮಿಲಿ ಕೋರ್ಟ್‌ನಲ್ಲಿ ನಡೆಯಲಿದ್ದು, ಇಡೀ ದಕ್ಷಿಣ ಭಾರತದ ಕಣ್ಣು ಈ ನ್ಯಾಯಾಲಯದ ಮೇಲೆ ನೆಟ್ಟಿದೆ.

ಏನಿದು ವಿಚ್ಛೇದನ ಪ್ರಕರಣದ ಹಿನ್ನೆಲೆ?

ದಶಕಗಳ ಕಾಲ ಪ್ರೀತಿಯಿಂದ ಸಂಸಾರ ನಡೆಸಿದ್ದ ಈ ಜೋಡಿಯ ನಡುವೆ ಇತ್ತೀಚಿನ ದಿನಗಳಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ಸಂಗೀತಾ ಅವರು ಪತಿಯಿಂದ ಬೇರ್ಪಡಲು ನಿರ್ಧರಿಸಿ, ಡಿಸೆಂಬರ್ 23, 2025 ರಂದು ಚೆಂಗಲ್ಪಟ್ಟು ಜಿಲ್ಲಾ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ನಂತರ ಈ ಪ್ರಕರಣವು ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು. ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ವಿಜಯ್ ಅವರ ಬಿಡುವಿಲ್ಲದ ವೇಳಾಪಟ್ಟಿ ಮತ್ತು ರಾಜಕೀಯ ಜವಾಬ್ದಾರಿಗಳ ನಡುವೆ ಈ ಕೌಟುಂಬಿಕ ಕಲಹ ಈಗ ಬೀದಿಗೆ ಬಂದಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ಕೋರ್ಟ್ ಕಟಕಟೆಯಲ್ಲಿ 'ರಿಯಲ್ ಲೈಫ್' ಡ್ರಾಮಾ!

ಈ ಹಿಂದಿನ ವಿಚಾರಣೆಗಳಲ್ಲಿ ಈ ಸ್ಟಾರ್ ಜೋಡಿ ನ್ಯಾಯಾಲಯಕ್ಕೆ ಗೈರಾಗಿದ್ದರು. ಏಪ್ರಿಲ್ 20 ಮತ್ತು ಜೂನ್ 15 ರಂದು ನಡೆದ ವಿಚಾರಣೆಗಳಲ್ಲಿ ವಿಜಯ್ ಮತ್ತು ಸಂಗೀತಾ ಇಬ್ಬರೂ ಹಾಜರಾಗಿರಲಿಲ್ಲ. ತಮ್ಮ ಸೆಲೆಬ್ರಿಟಿ ಸ್ಥಾನಮಾನ ಮತ್ತು ಭದ್ರತಾ ಕಾರಣಗಳನ್ನು ಮುಂದಿಟ್ಟು, ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ಅನುಮತಿ ನೀಡುವಂತೆ ಇಬ್ಬರ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ, ನ್ಯಾಯಾಧೀಶೆ ಸುಜಾತಾ ಅವರು ಇದಕ್ಕೆ ಕೆಂಪು ಬಾವುಟ ತೋರಿದ್ದರು. ಸರಿಯಾದ ಇಮೇಲ್ ವಿಳಾಸಗಳನ್ನು ಸಲ್ಲಿಸದ ಕಾರಣ ವಿಡಿಯೋ ಕಾನ್ಫರೆನ್ಸ್ ಅರ್ಜಿಯನ್ನು ವಜಾಗೊಳಿಸಿದ್ದ ನ್ಯಾಯಾಲಯ, ಇಂದಿನ ವಿಚಾರಣೆಯನ್ನು (ಆಗಸ್ಟ್ 7) ಅತ್ಯಂತ ನಿರ್ಣಾಯಕವಾಗಿಸಿದೆ.

ಇಂದು ಕೋರ್ಟ್‌ಗೆ ಬರ್ತಾರಾ ಸಂಗೀತಾ?

ಇಂದು ವಿಚಾರಣೆ ಆರಂಭವಾಗುತ್ತಿದ್ದಂತೆ ಎಲ್ಲರಲ್ಲೂ ಇರುವ ಒಂದೇ ಪ್ರಶ್ನೆ, "ಸಂಗೀತಾ ಅವರು ಕೋರ್ಟ್‌ಗೆ ಖುದ್ದಾಗಿ ಬರ್ತಾರಾ?". ಒಂದು ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲು ನ್ಯಾಯಾಲಯ ಒಪ್ಪದಿದ್ದರೆ, ಸಿಎಂ ವಿಜಯ್ ಮತ್ತು ಪತ್ನಿ ಸಂಗೀತಾ ಇಬ್ಬರೂ ಮುಖಾಮುಖಿಯಾಗಬೇಕಾದ ಅನಿವಾರ್ಯತೆ ಎದುರಾಗಬಹುದು. ಸಿಎಂ ಆಗಿರುವ ಕಾರಣ ವಿಜಯ್ ಅವರಿಗೆ ಭದ್ರತೆಯ ಕಾರಣದಿಂದ ವಿನಾಯಿತಿ ಸಿಗುತ್ತದೆಯೇ ಎಂಬುದು ಕುತೂಹಲದ ವಿಷಯ.

ಮಗನ ಅಳಲು ಮತ್ತು ಅಭಿಮಾನಿಗಳ ಆತಂಕ:

ಇತ್ತೀಚೆಗೆ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ತಮ್ಮ ಕುಟುಂಬ ಎದುರಿಸುತ್ತಿರುವ ಟ್ರೋಲ್ ಮತ್ತು ಕಮೆಂಟ್‌ಗಳ ಬಗ್ಗೆ ನೋವು ತೋಡಿಕೊಂಡಿದ್ದರು. "ತಂದೆ ಸಿಎಂ ಆದ ನಂತರ ಜವಾಬ್ದಾರಿ ಹೆಚ್ಚಾಗಿದೆ, ಅದರ ಜೊತೆಗೆ ವೈಯಕ್ತಿಕ ಟೀಕೆಗಳು ನೋವು ನೀಡುತ್ತಿವೆ" ಎಂದಿದ್ದರು.

ಒಟ್ಟಿನಲ್ಲಿ, ಸಿನಿಮಾದ ಕ್ಲೈಮ್ಯಾಕ್ಸ್‌ನಂತೆ ಕುತೂಹಲ ಮೂಡಿಸಿರುವ ಈ ಡಿವೋರ್ಸ್ ಕೇಸ್ ಇಂದು ಯಾವ ತಿರುವು ಪಡೆಯಲಿದೆ? ವಿಜಯ್-ಸಂಗೀತಾ ಒಂದಾಗುತ್ತಾರಾ ಅಥವಾ ಅಧಿಕೃತವಾಗಿ ವಿಚ್ಛೇದನದ ಹಾದಿ ಹಿಡಿಯುತ್ತಾರಾ? ಇಂದಿನ ಕೋರ್ಟ್ ವಿಚಾರಣೆ ಇದಕ್ಕೆ ಉತ್ತರ ನೀಡಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಉಲ್ಟಾ ಹೊಡೆದ ಸ್ನೇಹಿತರು, ರಾತ್ರಿ ಇಡೀ ನಿದ್ದೆ ಮಾಡದೆ ಒದ್ದಾಡಿದ ದರ್ಶನ್! ಮಾಫಿ ಸಾಕ್ಷಿಅರ್ಜಿಯಲ್ಲಿ ಯಾವ ಅಂಶವಿದೆ?
ರಾಜಮೌಳಿ ‘ವಾರಣಾಸಿ’ ಶೂಟಿಂಗ್‌ನಿಂದ ಮತ್ತೆ ವಿಡಿಯೋ ಲೀಕ್: ಮಹೇಶ್ ಬಾಬು ಏನು ಮಾಡುತ್ತಿದ್ದಾರೆ ನೋಡಿ!