ಭಾರತದಲ್ಲಿ ದಾಖಲೆ ಬರೆದ ʻಸ್ಪೈಡರ್‌ ಮ್ಯಾನ್‌ʼ ಸಿನಿಮಾ; ಕರ್ನಾಟಕದಲ್ಲೂ ಭಾರೀ ಕಲೆಕ್ಷನ್!

Published : Aug 04, 2026, 01:36 PM IST
Spider-Man Brand New Day

ಸಾರಾಂಶ

ಯಾವುದೇ ಸಿನಿಮಾಗೆ ಮೊದಲ ಸೋಮವಾರ ಎಂಬುದು ಬಹಳ ಮುಖ್ಯ. ವೀಕೆಂಡ್‌ನಲ್ಲಿ ಮೋಜು ಮಸ್ತಿ ಮಾಡುವ ಪ್ರೇಕ್ಷಕರು ವಾರದ ದಿನಗಳಲ್ಲೂ ಥಿಯೇಟರ್‌ಗೆ ಬರುತ್ತಾರಾ? ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ, ಸದ್ಯದ ಟ್ರೆಂಡ್ ನೋಡಿದರೆ ಸ್ಪೈಡರ್ ಮ್ಯಾನ್ ಸೋಮವಾರವೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

Spider-Man Brand New Day Collection Report: ಬಾಕ್ಸ್ ಆಫೀಸ್‌ನಲ್ಲಿ ಸ್ಪೈಡರ್ ಮ್ಯಾನ್ 'ವೆಬ್' ವರ್ಲ್ಡ್ ರೆಕಾರ್ಡ್: ನಾಲ್ಕೇ ದಿನಕ್ಕೆ 300 ಕೋಟಿ ಉಡೀಸ್! ಕರ್ನಾಟಕದಲ್ಲೂ ಪೀಟರ್ ಪಾರ್ಕರ್ ಅಬ್ಬರ.

ಬಾಕ್ಸ್ ಆಫೀಸ್ ಎಂಬುದು ಒಂದು ಕಾಡಾದರೆ, ಈಗ ಅಲ್ಲಿ ಅಬ್ಬರಿಸುತ್ತಿರುವುದು ಸಿಂಹವಲ್ಲ, ಒಬ್ಬ 'ಜೇಡ'! ಹೌದು, ಟಾಮ್ ಹಾಲೆಂಡ್ ಅಭಿನಯದ 'ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' (Spider Man- Brand New Day) ಸಿನಿಮಾ ಸದ್ಯ ಭಾರತೀಯ ಚಿತ್ರರಂಗದ ಎಲ್ಲಾ ಹಳೆಯ ದಾಖಲೆಗಳನ್ನು ಧೂಳೀಪಟ ಮಾಡುತ್ತಿದೆ. ಪೀಟರ್ ಪಾರ್ಕರ್ ತನ್ನ ಬಲೆಯನ್ನು ಕೇವಲ ವಿಲನ್‌ಗಳ ಮೇಲೆ ಮಾತ್ರವಲ್ಲ, ಪ್ರೇಕ್ಷಕರ ಜೇಬಿನ ಮೇಲೂ ಅಷ್ಟೇ ಚಾಕಚಕ್ಯತೆಯಿಂದ ಬೀಸಿದ್ದಾನೆ!

ಭಾರತದಲ್ಲಿ ಸ್ಪೈಡಿ ಮ್ಯಾಜಿಕ್: 4 ದಿನಕ್ಕೆ 300 ಕೋಟಿ!

ಯಾರೂ ಊಹಿಸಿರದ ವೇಗದಲ್ಲಿ ಈ ಸಿನಿಮಾ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಲೂಟಿ ಮಾಡುತ್ತಿದೆ. ಬಿಡುಗಡೆಯಾದ ಕೇವಲ ನಾಲ್ಕೇ ದಿನಕ್ಕೆ ಈ ಚಿತ್ರ ಬರೋಬ್ಬರಿ 309 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿದೆ. ಅಚ್ಚರಿಯ ವಿಷಯವೆಂದರೆ, ಭಾನುವಾರ (ಆಗಸ್ಟ್ 2) ಒಂದೇ ದಿನ ಬರೋಬ್ಬರಿ 76 ಕೋಟಿ ರೂ. ಹರಿದು ಬಂದಿದೆ. ಹಾಲಿವುಡ್ ಸಿನಿಮಾವೊಂದು ಭಾರತದಲ್ಲಿ ಈ ಮಟ್ಟದ ಕ್ರೇಜ್ ಸೃಷ್ಟಿಸಿರುವುದು ನೋಡಿ ಬಾಲಿವುಡ್ ಮಂದಿಯೇ ದಂಗಾಗಿದ್ದಾರೆ. ಹಿಂದಿ ಆವೃತ್ತಿಯ ಮಲ್ಟಿಪ್ಲೆಕ್ಸ್‌ಗಳಲ್ಲಿ ಸೀಟುಗಳು ಸಿಗುವುದೇ ಕಷ್ಟವಾಗಿದೆ!

ಜಾಗತಿಕವಾಗಿ 'ಎಂಡ್‌ಗೇಮ್' ನಂತರ ಇದೇ ಹವಾ!

ಕೇವಲ ಭಾರತದಲ್ಲಷ್ಟೇ ಅಲ್ಲ, ವಿಶ್ವಾದ್ಯಂತ ಸ್ಪೈಡರ್ ಮ್ಯಾನ್ ಅಬ್ಬರ ಜೋರಾಗಿದೆ. ಜಾಗತಿಕವಾಗಿ ಈ ಸಿನಿಮಾ ಈಗಾಗಲೇ 8,843 ಕೋಟಿ ರೂ. ($927 Million) ಗಳಿಸಿ ಇತಿಹಾಸ ಬರೆದಿದೆ. 'ಅವೆಂಜರ್ಸ್: ಎಂಡ್‌ಗೇಮ್' ನಂತರ ಅತಿ ದೊಡ್ಡ ಓಪನಿಂಗ್ ಪಡೆದ ಎರಡನೇ ಚಿತ್ರ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಮಾರ್ವೆಲ್ ಸ್ಟುಡಿಯೋಸ್ ಮತ್ತು ನಿರ್ದೇಶಕ ಡೆಸ್ಟಿನ್ ಡೇನಿಯಲ್ ಕ್ರೆಟನ್ ಅವರ ಕಲ್ಪನೆಗೆ ಇಡೀ ವಿಶ್ವವೇ ಫಿದಾ ಆಗಿದೆ.

ಕರ್ನಾಟಕದ ನೆಲದಲ್ಲಿ ಜೇಡನ ಜಾಲ!

ಇನ್ನು ನಮ್ಮ ಕರ್ನಾಟಕದ ಕಲೆಕ್ಷನ್ ರಿಪೋರ್ಟ್ ಕೇಳಿದರೆ ನೀವು ದಂಗಾಗುತ್ತೀರಿ. 2026ರ ಸಾಲಿನಲ್ಲಿ ವೀಕೆಂಡ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಲಿಸ್ಟ್‌ನಲ್ಲಿ ಸ್ಪೈಡರ್ ಮ್ಯಾನ್ 37.05 ಕೋಟಿ ರೂ. ಗಳಿಕೆಯೊಂದಿಗೆ ಎರಡನೇ ಸ್ಥಾನದಲ್ಲಿದೆ. ಮೊದಲ ದಿನವೇ ಸುಮಾರು 9 ಕೋಟಿ ರೂ. ಗಳಿಸಿದ್ದ ಈ ಚಿತ್ರ, ದಿನದಿಂದ ದಿನಕ್ಕೆ ತನ್ನ ವೇಗವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಿದೆ.

ಸೋಮವಾರದ ಅಗ್ನಿಪರೀಕ್ಷೆ!

ಯಾವುದೇ ಸಿನಿಮಾಗೆ ಮೊದಲ ಸೋಮವಾರ ಎಂಬುದು ಬಹಳ ಮುಖ್ಯ. ವೀಕೆಂಡ್‌ನಲ್ಲಿ ಮೋಜು ಮಸ್ತಿ ಮಾಡುವ ಪ್ರೇಕ್ಷಕರು ವಾರದ ದಿನಗಳಲ್ಲೂ ಥಿಯೇಟರ್‌ಗೆ ಬರುತ್ತಾರಾ? ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ, ಸದ್ಯದ ಟ್ರೆಂಡ್ ನೋಡಿದರೆ ಸ್ಪೈಡರ್ ಮ್ಯಾನ್ ಸೋಮವಾರವೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಸದ್ಯಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರಕ್ಕೆ ಟಕ್ಕರ್ ಕೊಡಲು ಬೇರೆ ದೊಡ್ಡ ಸಿನಿಮಾಗಳೇ ಇಲ್ಲದಿರುವುದು ಪೀಟರ್ ಪಾರ್ಕರ್‌ಗೆ ಪ್ಲಸ್ ಪಾಯಿಂಟ್ ಆಗಿದೆ.

ಟಾಮ್ ಹಾಲೆಂಡ್ ಮತ್ತು ಝೆಂಡಾಯಾ ಅವರ ಕೆಮಿಸ್ಟ್ರಿ, ಜೊತೆಗೆ ಅದ್ಭುತವಾದ ಗ್ರಾಫಿಕ್ಸ್ ನೋಡಿ ಪ್ರೇಕ್ಷಕರು ಫುಲ್ ಖುಷ್ ಆಗಿದ್ದಾರೆ. ಸಿನಿಮಾ ಮಂದಿರಗಳ ಮುಂದೆ ಜನಸಾಗರವೇ ಹರಿಯುತ್ತಿದೆ. ಒಟ್ಟಿನಲ್ಲಿ, ಈ ವರ್ಷದ ಅತಿ ದೊಡ್ಡ ಬ್ಲಾಕ್ ಬಸ್ಟರ್ ಪಟ್ಟವನ್ನು ಸ್ಪೈಡರ್ ಮ್ಯಾನ್ ಈಗಾಗಲೇ ತನ್ನದಾಗಿಸಿಕೊಂಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಾಲಿವುಡ್‌ ಸ್ಟಾರ್ ದಂಪತಿಯ ಪುತ್ರ ನಟ ಸುನೀಲ್ ಆನಂದ್ ಜುಲೈ 26ಕ್ಕೆ ನಿಧನ, ಲಂಡನ್‌ನಲ್ಲೇ ಆ.4ಕ್ಕೆ ಅಂತ್ಯಕ್ರಿಯೆ!
ಸಿನಿಮಾ ನೋಡಿದ್ರೆ ಸುಮ್ಮನಿರಿ; ಇಲ್ಲಾ ಅಂದ್ರೆ 'ಈ ಸ್ಪಾಯ್ಲರ್' ದುರಂಥ ಕಥೆ ನಿಮ್ಮದೂ ಆಗಬಹುದು, ಎಚ್ಚರ!