
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ
ಚಿಕ್ಕಮಗಳೂರು (ಅ.27): ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ ಗಂಧದಗುಡಿ ನಾಳೆ ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲಿದೆ. ಈಗಾಗಲೇ ಅಪ್ಪು ಅಭಿಮಾನಿಗಳಲ್ಲಿ ಚಿತ್ರವನ್ನು ನೋಡಲು ಕಾತುರ ಹೆಚ್ಚಾಗಿದೆ. ಗಂಧದ ಗುಡಿ ಪ್ರಮೋಷನ್ ಕೂಡ ಭರ್ಜರಿಯಾಗಿ ನಡೆಯುತ್ತಿದ್ದು ಅಭಿಮಾನಿಗಳು ಚಿತ್ರವನ್ನು ವೀಕ್ಷಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ತನ್ನದೇ ಹವಾ ಕ್ರಿಯೇಟ್ ಮಾಡಿರುವ ಕಾಫಿನಾಡು ಚಂದು ಗಂಧದಗುಡಿ ಚಿತ್ರದ ಪ್ರಚಾರಕ್ಕೆ ಇಳಿದಿದ್ದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಖತ್ ವೈರಲ್ ಆಗಿದೆ. ನಾನು ಪುನೀತ್ ರಾಜಕುಮಾರ್ ಅಭಿಮಾನಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೆಟ್ ಮಾಡಿರುವ ಕಾಫಿ ನಾಡು ಚಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಗಂಧದಗುಡಿ ಚಿತ್ರದ ಪ್ರಚಾರಕ್ಕೆ ಇಳಿದಿದ್ದಾರೆ. ತನ್ನ ವಿಭಿನ್ನ ಶೈಲಿಯ ಹುಟ್ಟು ಹಬ್ಬದ ಶುಭಾಶಯಗಳನ್ನ ಮಾಡುವ ಮೂಲಕ ರಾಜ್ಯದಲ್ಲಿ ಕಾಫಿನಾಡ ಚಂದು ಎಂದೇ ಹೆಸರಾಗಿರುವ ಚಂದು ಮತ್ತೊಂದು ಶೈಲಿಯಲ್ಲಿ ಪವರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಗಂಧದಗುಡಿ ಚಿತ್ರದ ಪ್ರಚಾರಕ್ಕೆ ಮುಂದಾಗಿದ್ದಾರೆ.
ತನ್ನ ತಲೆಯ ಹಿಂಭಾಗದ ಕೂದಲನ್ನ ಗಂಧದ ಗುಡಿ ಎಂದು ತೆಗೆಸಿಕೊಂಡು ಚಿತ್ರದ ಪ್ರಚಾರಕ್ಕೆ ಮುಂದಾಗಿದ್ದಾರೆ. ತಲೆಯಲ್ಲಿ ಹಿಂದೆ ಗಂಧದಗುಡಿ ಎಂದು ಕೆತ್ತಿಸಿಕೊಂಡಿರುವ ಚಂದು ಚಿಕ್ಕಮಗಳೂರು ನಗರದಲ್ಲಿ ಓಡಾಡುತ್ತಾ ಚಿತ್ರದ ಪ್ರಚಾರಕ್ಕೆ ಮುಂದಾಗಿದ್ದಾರೆ. ರಸ್ತೆಯಲ್ಲಿ ಸಿಕ್ಕವರೆಗೆ ಚಿತ್ರವನ್ನ ನೋಡುವಂತೆ ಪ್ರೇರೆಪಿಸುತ್ತಿದ್ದಾರೆ. ಈಗಾಗಲೇ ಪುನೀತಣ್ಣ ಸಾಕಷ್ಟು ಬೆಳೆದಿದ್ದಾರೆ. ಅವರು ಮೇಲಿಂದ ನೋಡುತ್ತಿರುತ್ತಾರೆ. ನಾವು ಸಿನಿಮಾ ನೋಡಿದರೆ ಅವರಿಗೆ ಖುಷಿಯಾಗುತ್ತೆ. ಹಾಗಾಗಿ ಎಲ್ಲರೂ ತಪ್ಪದೇ ಸಿನಿಮಾ ನೋಡಿ ಎಂದು ಮನವಿ ಮಾಡುತ್ತಿದ್ದಾರೆ. ಓಂ, ಜನುಮದ ಜೋಡಿ ಚಿತ್ರ ವರ್ಷಗಳ ಕಾಲ ಓಡಿದೆ. ಈ ಚಿತ್ರ ಕೂಡ ವರ್ಷಗಳ ಕಾಲ ಓಡಬೇಕು. ಹಾಗಾಗಿ, ಎಲ್ಲರೂ ಸಿನಿಮಾ ನೋಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
Puneeth Parva ಎಲ್ಲಾ ಚಿತ್ರರಂಗದವರು ಅಪ್ಪುಗಾಗಿ ಒಂದಾಗಿರುವುದನ್ನು ನೋಡಲು ಖುಷಿಯಾಗುತ್ತಿದೆ: ಸೂರ್ಯ
ಪುನೀತ್ ರಾಜ್‌ಕುಮಾರ್ ನಟನೆಯ ‘ಗಂಧದ ಗುಡಿ’ ಚಿತ್ರ ಅಕ್ಟೋಬರ್ 28ಕ್ಕೆ ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ನರ್ತಕಿ ಥಿಯೇಟರ್ ಆವರಣದಲ್ಲಿ 80 ಅಡಿ ಎತ್ತರ ಇರುವ ಪುನೀತ್ ಅವರ ಬೃಹತ್ ಕಟೌಟ್ ರಾರಾಜಿಸುತ್ತಿದೆ. ಪುನೀತ್ ಸಮಾಧಿ ಇರುವ ಕಂಠೀರವ ಸ್ಟುಡಿಯೋ ಆವರಣದಲ್ಲಿ 75 ಕಟೌಟ್‌ಗಳನ್ನು ಇಡಲಾಗುತ್ತಿದೆ. ರಾಜ್ಯದೆಲ್ಲೆಡೆ ಪುನೀತ್ ಹವಾ ಶುರುವಾಗಿದ್ದು, ವಿವಿಧೆಡೆ ಅಪ್ಪು ಕಟೌಟ್‌ಗಳು ಗಮನಸೆಳೆಯುತ್ತಿವೆ.
ಈಗಾಗಲೇ ‘ಗಂಧದ ಗುಡಿ’ ಚಿತ್ರದ ಪ್ರೀಮಿಯರ್ ಶೋಗೆ ಬುಕಿಂಗ್ ತೆರೆಯಲಾಗಿದ್ದು, 24 ಗಂಟೆ ಮೊದಲೇ ಬಹುತೇಕ ಟಿಕೆಟ್‌ಗಳು ಸೋಲ್ಡ್‌ಔಟ್ ಆಗಿವೆ. ‘ಗಂಧದ ಗುಡಿ’ ಚಿತ್ರವನ್ನು ಪಿಆರ್‌ಕೆ ಬ್ಯಾನರ್‌ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಿಸಿದ್ದು, ಅಮೋಘವರ್ಷ ನಿರ್ದೇಶನ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.