ರೀಲ್ಸ್ ಅಂತ ಸಿಕ್ಕ ಸಿಕ್ಕಲ್ಲಿ ಕುಣಿತೀರಾ... ಹಾಗಿದ್ರೆ ಈ ವಿಡಿಯೋ ನೀವ್ ನೋಡ್ಲೇಬೇಕು

By Anusha Kb  |  First Published Oct 9, 2022, 9:47 PM IST

ಇಲ್ಲೊಬ್ಬಳು ಇನಸ್ಟಾಗ್ರಾಮ್ ಸ್ಟಾರ್ ಸಾರ್ವಜನಿಕ ಸ್ಥಳದಲ್ಲಿ ಬಾಲಿವುಡ್‌ನ ಜನಪ್ರಿಯ ಹಾಡು ಸುಶ್ಮೀತಾ ಸೇನ್ ಅಭಿನಯದ ದಿಲ್‌ಬರ್‌ ದಿಲ್‌ಬರ್‌ಗೆ ಸಾರ್ವಜನಿಕ ಸ್ಥಳದಲ್ಲಿ ಹೆಜ್ಜೆ ಹಾಕಿದ್ದಾಳೆ. ಅದರಲ್ಲೇನು ಹೊಸ ವಿಷ್ಯ ಅಂತೀರಾ, ಆಕೆಯ ಜೊತೆ ಹಿಂದಿನಿಂದ ಆಟೋ ಚಾಲಕರೊಬ್ಬರು ಆಕೆಯ ಜೊತೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಇದು ಸಾಮಾಜಿಕ ಜಾಲತಾಣದ ಯುಗ, ಕೈಯಲ್ಲೊಂದು ಮೊಬೈಲ್, ಜನರನ್ನು ರಂಜಿಸುವಷ್ಟು ಪ್ರತಿಭೆ ಇದ್ರೆ ಸಾಕು ಪ್ರತಿಯೊಬ್ಬರು ಇನ್‌ಫ್ಲುಯೆನ್ಸರ್‌ಗಳೇ. ಹೀಗಾಗಿ ಪ್ರತಿ ಮನೆಯಲ್ಲೂ ಒಬ್ಬ ಯೂಟ್ಯೂಬ್ ಸ್ಟಾರ್, ಮತ್ತೊಬ್ಬಳು ಇನ್ಸ್ಟಾಗ್ರಾಮ್ ಸ್ಟಾರ್ ಮನೆ ತುಂಬಾ ಆರ್ಟಸ್ಟ್‌ಗಳು ಇರೋ ಕಾಲ ಇದು. ಇದರಿಂದ ಯಾರಿಗೂ ಸಮಸ್ಯೆ ಆಗಿಲ್ಲ. ಬಿಡಿ. ಆದರೆ ಕೆಲವು ಇನ್ಸ್ಟಾಗ್ರಾಮ್ ಸ್ಟಾರ್‌ಗಳು ತಾವಿರುವ ಸ್ಥಳ ಎಲ್ಲಿ ಏನು ಎಂಬುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಕುಣಿಯಲು ಶುರು ಮಾಡಿ ಬಿಡುತ್ತಾರೆ. ಇದರಿಂದ ಕೆಲವೊಮ್ಮೆ ಸಾರ್ವಜನಿಕರಿಗೆ ಕಷ್ಟವಾಗುತ್ತಿದೆ. ಕೆಲ ದಿನಗಳ ಹಿಂದೆ ದೇಗುಲದಲ್ಲಿ ಯಾವುದು ಬಾಲಿವುಡ್ ಹಾಡಿಗೆ ಕುಣಿದು ಇನಸ್ಟಾಗ್ರಾಮ್ ಸ್ಟಾರ್ ಒಬ್ಬರು ವಿವಾದ ಸೃಷ್ಟಿಸಿದ್ದರು. ಆ ವಿಚಾರ ಎಲ್ಲಾ ಈಗ್ಯಾಕೆ ಅಂತೀರಾ ಈ ಸ್ಟೋರಿ ಓದಿ

ಇಲ್ಲೊಬ್ಬಳು ಇನಸ್ಟಾಗ್ರಾಮ್ ಸ್ಟಾರ್ ಸಾರ್ವಜನಿಕ ಸ್ಥಳದಲ್ಲಿ ಬಾಲಿವುಡ್‌ನ ಜನಪ್ರಿಯ ಹಾಡು ಸುಶ್ಮೀತಾ ಸೇನ್ ಅಭಿನಯದ ದಿಲ್‌ಬರ್‌ ದಿಲ್‌ಬರ್‌ಗೆ ಸಾರ್ವಜನಿಕ ಸ್ಥಳದಲ್ಲಿ ಹೆಜ್ಜೆ ಹಾಕಿದ್ದಾಳೆ. ಅದರಲ್ಲೇನು ಹೊಸ ವಿಷ್ಯ ಅಂತೀರಾ, ಆಕೆಯ ಜೊತೆ ಹಿಂದಿನಿಂದ ಆಟೋ ಚಾಲಕರೊಬ್ಬರು ಆಕೆಯ ಜೊತೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಟೋ ಚಾಲಕನ  ಡಾನ್ಸ್ ಈ ಇನ್ಸ್ಟಾ ಸ್ಟಾರ್‌ಗಿಂತ ಹೆಚ್ಚು ಗಮನ ಸೆಳೆದಿದ್ದು, ಎಲ್ಲರೂ ಫಿದಾ ಆಗಿದ್ದಾರೆ. ಆಟೋ ಚಾಲಕ ಈ ವಿಡಿಯೋದ ಸೆಂಟರ್ ಆಫ್ ಆಟ್ರಾಕ್ಷನ್ ಆಗಿದ್ದು, ಇಡೀ ವಿಡಿಯೋದಲ್ಲಿ ತಮ್ಮ ನೃತ್ಯದ ಮೂಲಕ ಅವರು ಜನರನ್ನು ಸೆಳೆದಿದ್ದಾರೆ.

Tap to resize

Latest Videos

ಇಲ್ಲಿ ನೋಡಿ, ಲಾಂಡ್ರಿ ಮಾಡುತ್ತಿದ್ದ ಹಿರಿಯ ಜೋಡಿಯ ಮಾಡೆಲಿಂಗ್ ಮೋಡಿ

अच्छा है आजकल रोड साइड लोगों को कंपनी मिल जाती है pic.twitter.com/PoLcw8U5Vs

— 24 (@Chilled_Yogi)

ಇದರ ಜೊತೆಗೆ ಈ ವಿಡಿಯೋ ಅನೇಕರ ಮೊಗದಲ್ಲಿ ನಗು ಮೂಡಿಸುತ್ತಿದೆ. ಈ ವಿಡಿಯೋವನ್ನು 2,65,500ಕ್ಕೂ ಹೆಚ್ಚು ಜನ ವೀಕ್ಷಿಸಿದ್ದು,ಇನ್ಸ್ಟಾ ಸ್ಟಾರ್‌ಗಿಂತ ಚೆನ್ನಾಗಿ ಆಕೆಯ ಹಿಂದಿರುವ ಆಟೋ ಚಾಲಕ ಕುಣಿಯುತ್ತಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ವಿಡಿಯೋದಲ್ಲಿ ಇತ್ತೀಚೆಗೆ ಹೀಗೆ ವಿಡಿಯೋ ಮಾಡುವವರಿಗೆ ರಸ್ತೆ ಬದಿಯೂ ನೃತ್ಯಕ್ಕೆ ಒಳ್ಳೆ ಜೊತೆಗಾರ ಸಿಗುತ್ತಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ತಮಾಷೆಯ ಜೊತೆ ಸುಂದರವಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಂದು ವೇಳೆ ನಾನು ಆ ಸ್ಥಳದಲ್ಲಿ ಇದ್ದಿದ್ದರೆ ನಕ್ಕು ನಕ್ಕೇ ಸಾಯುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.  Chilled_Yogi ಎಂಬುವವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ.


ಇನ್ಸ್ಟಾಗ್ರಾಂನಲ್ಲಿ ಶೈನ್ ಆಗ್ಬೇಕಾ? ಹಾಗಿದ್ರೆ ಈ ಸಿಂಪಲ್ ಟ್ರಿಕ್ಸ್ ಬಳಸಿ!

click me!