I Am Villain ಎಂದು ಹಾಡುತ್ತಾ ಮನೆ ಮಂದಿಯ ಬಂಗಾರ ಎಗರಿಸಿದ ಅರುಣ್

Published : Oct 11, 2022, 11:41 PM ISTUpdated : Oct 11, 2022, 11:42 PM IST
I Am  Villain ಎಂದು ಹಾಡುತ್ತಾ ಮನೆ ಮಂದಿಯ ಬಂಗಾರ ಎಗರಿಸಿದ ಅರುಣ್

ಸಾರಾಂಶ

ಬಿಗ್ ಬಾಸ್ ಸೀಸನ್ ಮೂರನೇ ವಾರ ಯಶಸ್ವಿಯಾಗಿ ಸಾಗುತ್ತಿದ್ದು, ಕಳೆದ ವಾರ ನವಾಜ್ ಶೋದಿಂದ ಎಲಿಮಿನೇಟ್ ಆಗಿದ್ದರು. ಇಂದು ಮುಂದಿನ ಕ್ಯಾಪ್ಟೆನ್ಸಿಗಾಗಿ ಮನೆಯ ಸದಸ್ಯರಿಗೆ ಬಿಗ್‌ಬಾಸ್ ಗೋಲ್ಡ್ ಮೈನ್ ಟಾಸ್ಕ್ ನೀಡಿದರು. ಈ ಟಾಸ್ಕ್ ಹಲವು ಸಣ್ಣಪುಟ್ಟ ಕಿತ್ತಾಟಕ್ಕೆ ಕಾರಣವಾಯಿತು.

ಬೆಂಗಳೂರು: ಬಿಗ್ ಬಾಸ್ ಸೀಸನ್ ಮೂರನೇ ವಾರ ಯಶಸ್ವಿಯಾಗಿ ಸಾಗುತ್ತಿದ್ದು, ಕಳೆದ ವಾರ ನವಾಜ್ ಶೋದಿಂದ ಎಲಿಮಿನೇಟ್ ಆಗಿದ್ದರು. ಇಂದು ಮುಂದಿನ ಕ್ಯಾಪ್ಟೆನ್ಸಿಗಾಗಿ ಮನೆಯ ಸದಸ್ಯರಿಗೆ ಬಿಗ್‌ಬಾಸ್ ಗೋಲ್ಡ್ ಮೈನ್ ಟಾಸ್ಕ್ ನೀಡಿದರು. ಈ ಟಾಸ್ಕ್ ಹಲವು ಸಣ್ಣಪುಟ್ಟ ಕಿತ್ತಾಟಕ್ಕೆ ಕಾರಣವಾಯಿತು. ಈ ಟಾಸ್ಕ್‌ನಲ್ಲಿ ಅತೀ ಹೆಚ್ಚು ಚಿನ್ನ ಸಂಗ್ರಹಿಸಿದವರು ಮುಂದಿನ ಬಾರಿಯ ಕ್ಯಾಪ್ಟನ್ ಆಗಿ ಆಯ್ಕೆಯಾಗುತ್ತಾರೆ. ಇದಕ್ಕಾಗಿ ಮನೆಯೊಳಗೆ ಒಂದು ಚಿನ್ನದ ಗಣಿಯಂತಹ ವಾತಾವರಣವನ್ನು ನಿರ್ಮಿಸಲಾಗಿತ್ತು. ಸೈರನ್ ಮೊಳಗಿದ ಸಮಯಕ್ಕೆ ಮನೆಯ ಸದಸ್ಯರೆಲ್ಲಾ ಅಲ್ಲಿ ಇಟ್ಟಿರುವ ಟಾರ್ಚ್‌ಗಳನ್ನು ತೆಗೆದುಕೊಂಡು ಚಿನ್ನದ ಗಣಿಗಾರಿಕೆ ಮಾಡಬೇಕು. ಗಳಿಸಿದ ಚಿನ್ನವನ್ನು ಆರ್ಯವರ್ಧನ್ ಬಳಿ ತೂಕ ಮಾಡಿ ತಮ್ಮ ಬಳಿ ಜೋಪಾನವಾಗಿ ಇರಿಸಿಕೊಳ್ಳಬೇಕು

ಇದರ ಮಧ್ಯೆ ಚಿನ್ನದ ಡೀಲಿಂಗ್ ವಿಚಾರವೂ ಇದ್ದು ಇದಕ್ಕಾಗಿಯೇ ವಿನೋದ್ ಗೊಬ್ಬರಗಾಲ ಹಾಗೂ ರಾಜಣ್ಣ ನಡುವೆ ದೊಡ್ಡ ಗಲಾಟೆ ನಡೆಯಿತು. ಡೀಲಿಂಗ್ ಬಗ್ಗೆ ತಮಗೆ ಕರೆದಿಲ್ಲ ಎಂದು ರಾಜಣ್ಣ ಗಲಾಟೆ ಮಾಡಿದರು. ಆದರೆ ತಾನು ಎಲ್ಲರಿಗೂ ಡೀಲಿಂಗ್ ನೀಡಿದ್ದೆ ಎಂದು ವಿನೋದ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡರು. ಇದೇ ಸಮಯದಲ್ಲಿ ಮೋಸದ ಡೀಲಿಂಗ್ ವಿಚಾರವಾಗಿ ಸಂಬರ್ಗಿ ಹಾಗೂ ರೂಪೇಶ್ ರಾಜಣ್ಣ ಮಧ್ಯೆಯೂ ಗಲಾಟೆ ನಡೆಯಿತು, ಸಂಬರ್ಗಿಗೆ ರಾಜಣ್ಣ ಮೋಸಗಾರ ರಾಜಾಇಲಿ ಎಂದು ಹಂಗಿಸಿದರು.

BBK9 ಕಿಚ್ಚನ ಚಪ್ಪಾಳೆ ಪಡೆದ ಅನುಪಮಾ ಗೌಡ; ತಾಳ್ಮೆ ಹೆಚ್ಚಾಗಿದೆ ಅಂದಿದಕ್ಕೆ ಕಣ್ಣೀರಿಟ್ಟ ನಟಿ


ಈ ಮಧ್ಯೆ ಜೋಕರ್ ಆಗಿ ಗಮನ ಸೆಳೆದಿದ್ದು, ಅರುಣ್ ಸಾಗರ್, ಮನೆಯಲ್ಲಿ ಜೋಕರ್ ರೀತಿ ವೇಷ ಧರಿಸಿ ಐ ಆಮ್ ವಿಲನ್  ಐ ಆಮ್ ವಿಲನ್ ಎಂದು ಹೇಳುತ್ತಲೇ ಒಬ್ಬೊಬಬರ ಚಿನ್ನವನ್ನೇ ಅರುಣ್ ಸಾಗರ್ ಮೆಲ್ಲ ಮೆಲ್ಲನೇ ಕದ್ದು ತಮ್ಮ ತಿಜೋರಿ ತುಂಬಿದ್ದಾರೆ. ಈ ಮಧ್ಯೆ ನಿಯಮದ ಪ್ರಕಾರ ಆದರೆ ಟಾರ್ಚ್ ಸಿಕ್ಕದೇ ಹೋದಲ್ಲಿ ಗಣಿಗಾರಿಕೆ ನಡೆಸುವಂತಿಲ್ಲ. ಆದರೆ ಯಾರೋ ಟಾರ್ಚ್ ಇಲ್ಲದೇ ಭಾಗವಹಿಸಿದ್ದು, ಈ ಕಾರಣಕ್ಕೆ ಈ ಟಾಸ್ಕ್‌ನ ಲೆಕ್ಕಾಧಿಕಾರಿ ಆರ್ಯವರ್ಧನ್‌ಗೆ ಕೂಡಲೇ ಎರಡೂವರೆ ಕೆಜಿ ಚಿನ್ ತಂದು ಸ್ಟೋರ್ ರೂಮ್‌ನಲ್ಲಿ ಇಡುವಂತೆ ಹೇಳುತ್ತಾರೆ. ಆದರೆ ಯಾರು ಚಿನ್ನ ನೀಡಲು ಸಿದ್ಧರಿರುವುದಿಲ್ಲ. ದರ್ಶ್‌ ಚಂದ್ರಪ್ಪ ಅವರ ಬಳಿ ಅರ್ಯವರ್ಧನ್ ಚಿನ್ನ ನೀಡುವಂತೆ ಕೇಳಿದ್ದು, ಬಳಿಕ ಅವರು ತಮ್ಮ ಬಳಿ ಇದ್ದ ಎಲ್ಲಾ ಚಿನ್ನವನ್ನು ನೀಡುತ್ತಾರೆ. ಇದೇ ವೇಳೆ ಎರಡೂವರೆ ಕೆಜಿಗೆ ಸ್ವಲ್ಪ ಚಿನ್ನ ಕಡಿಮೆ ಆಗಿದ್ದು, ಆರ್ಯವರ್ಧನ್ ಗುರೂಜಿ ಎಲ್ಲರ ಬಳಿ ಚಿನ್ನ ನೀಡುವಂತೆ ಕೇಳಿದ್ದಾರೆ. ಆದರೆ ಯಾರೊಬ್ಬರು ಚಿನ್ನ ನೀಡಿಲ್ಲ. ಬಳಿಕ ದಿವ್ಯ ಉರುಡುಗ ಎರಡೂವರೆ ಕೆಜಿ ಆಗಲು ಬೇಕಾಗಿದ್ದ ಚಿನ್ನವನ್ನು ತಮ್ಮ ಬಳಿ ಇದ್ದ ಚಿನ್ನದಿಂದ ಸೇರಿಸುತ್ತಾರೆ.

ಇದೇ ವೇಳೆ ಟಾರ್ಚ್‌ನ್ನು ತಂದಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಅಮೂಲ್ಯ ಹಾಗೂ ಆರ್ಯವರ್ಧನ್ ಮಧ್ಯೆ ಬಿರುಸಿನ ಮಾತಿನ ಚಕಮಕಿ ನಡೆಯಿತು. ಇನ್ನೊಂದೆಡೆ ಬೆಟ್ಟಿಂಗ್ ನಲ್ಲಿ ಗೆದ್ದ ಬಂಗಾರವನ್ನ ರಕ್ಷಿಸಿಕೊಳ್ಳಲು ವಿನೋದ್ ಗೊಬ್ಬರಗಾಲ ಹರಸಾಹಸ ಪಡಬೇಕಾಯಿತು. ಸ್ಪರ್ಧಿಗಳು ಕೂಡ ವಿನೋದ್ ಗೆ ಬಂಗಾರ ಖದಿಯುವ ಬಗ್ಗೆ ರೇಗಿಸ್ತಾ ಇರೋವಾಗ, ಓಡೋಡಿ ಬಂದು ಲಾಕರ್ ಎತ್ತಿಕೊಂಡು ತಮ್ಮ ಬಂಗಾರವನ್ನ ಅವರು ಬಚಾವ್ ಮಾಡಿಕೊಂಡರು. ಒಟ್ಟಾರೆ ಇಂದಿನ ಎಪಿಸೋಡ್ ನಲ್ಲಿ ಮನಸ್ತಾಪ, ಕಿರುಚಾಟ, ಗಲಾಟೆ, ಸ್ವಲ್ಪ ಕಾಮಿಡಿ, ಜಾಣತನ ಎಲ್ಲವೂ ಒಟ್ಟಾರೆಯಾಗಿ ಕಂಡು ಬಂತು.

BBK9 ಬಿಗ್ ಬಾಸ್ ಮನೆಯಿಂದ ಸೈಕ್ ನವಾಜ್ ಔಟ್; ಜೀವನದ ಪಾಠ ಹೇಳಿದ ಕಿಚ್ಚ!
ಬಿಗ್‌ಬಾಸ್9 ಸೆಪ್ಟೆಂಬರ್ 24ರಿಂದ ಆರಂಭವಾಗಿದ್ದು, ಅರುಣ್ ಸಾಗರ್, ಅಶ್ವಿನ ನಕ್ಷತ್ರದ ಮೂಲಕ ಮನೆ ಮಾತಾಗಿದ್ದ ಮಯೂರಿ, ದೀಪಿಕಾ ದಾಸ್, ನವಾಜ್,  ದಿವ್ಯ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಕಾಮಿಡಿ ಕಿಲಾಡಿಗಳು), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ,  ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, 15. ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಪಾಲ್ಗೊಂಡಿದ್ದಾರೆ. ಈಗಾಗಲೇ ಟೀಂನಿಂದ ಬೈಕರ್ ಐಶ್ವರ್ಯಾ ಫಿಸೆ, ನವಾಜ್  ಎಲಿಮಿನೇಟ್ ಅಗಿದ್ದಾರೆ. 

ಈ ಬಿಗ್ ಬಾಸ್ ಆವೃತ್ತಿಯಲ್ಲಿ ಈಗಾಗಲೇ ಒಮ್ಮೆ ಪಾಲ್ಗೊಂಡಿದ್ದ ಸ್ಪರ್ಧಿಗಳು ಹಾಗೂ ಇತ್ತೀಚೆಗೆ ಒಟಿಟಿ ಬಿಗ್ ಬಾಸ್‌ನಲ್ಲಿ ಗೆದ್ದ ನಾಲ್ಕು ಸ್ಪರ್ಧಿಗಳು ಹಾಗೂ ಕೆಲವು ಹೊಸ ಮುಖಗಳು ಸೇರಿರುವುದು ವಿಶೇಷ. ಎಂದಿನಂತೆ ಸ್ಯಾಂಡಲ್‌ವುಡ್ ಚಕ್ರವರ್ತಿ ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿದ್ದು, ಅಭಿಮಾನಿಗಳು ವಾರದ ಕಥೆ ಕಿಚ್ಚನ ಜೊತೆ ನೋಡಲು ಕಾತುರರಾಗಿರುತ್ತಾರೆ. ಮೊದಲ ಆವೃತ್ತಿಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ, ವೀಕ್ಷಕರ ಹೃದಯ ಗೆದ್ದ ಅರುಣ್ ಸಾಗರ್‌ಗೆ ಲಕ್ ಕೈ ಹಿಡಿದಿರಲಿಲ್ಲ. ಆದರೆ ಈ ಸಾರಿ ಅವರೇ ಗೆಲ್ಲೋದು ಅವರೇ ಎಂದು  ಜನ ಊಹಿಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ಅರುಣ್ ಕೂಡ ಸಖತ್ ಆಗಿ ಮನೆಯಲ್ಲಿ ಮನೋರಂಜನೆ ನೀಡುತ್ತಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಅಶ್ವಿನಿ ಪರ ನಿಂತಿರುವುದು ಯಾಕೆ ಗೊತ್ತಾ?' ಟೀಕಾಕಾರರಿಗೆ ಕರವೇ ಅಧ್ಯಕ್ಷ ನಾರಾಯಣಗೌಡ ಖಡಕ್ ವಾರ್ನಿಂಗ್!
'ನನ್‌ ಮದ್ವೆಗೆ ಏನಾದ್ರೂ ಪ್ರಾಬ್ಲಮ್‌ ಆದ್ರೆ ಗಿಲ್ಲಿನೇ ಕಾರಣ..' ಬಿಗ್‌ಬಾಸ್‌ನಲ್ಲೇ ಅಫರ್‌ ಕೊಟ್ರಾ ಕಾವ್ಯಾ?